ವಿಜಯ ಸಿಂಧೂರ ಗಜೇಂದ್ರಗಡ
ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಅಂಗವಾಗಿ ತಹಸಿಲ್ದಾರ ಅವರು ಒಂದು ವಾರದ ಹಿಂದೆ ಪೂರ್ವಬಾವಿಸಭೆ ನಡೆಸಿ ಎಲ್ಲಾ ಸರ್ಕಾರಿ ಶಾಲಾ ಕಾಲೇಜು ಹಾಗೂ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಆದೇಶ ಹೊರಡಿಸಿದರು.

ತಾಲೂಕಿನ ಶಿಕ್ಷಣಾಧಿಕಾರಿ ತಾಲೂಕಿನ ಯಾವುದೇ ಶಾಲೆಗಳಿಗೂ ಕಳಿಸದ ಪರಿಣಾಮ ಯಾವ ಶಾಲೆಯಲ್ಲಿಯೂ ಜಯಂತಿ ಆಚರಿಸದ ಹಿನ್ನಲೆಯಲ್ಲಿ ಹಾಗೂ ಪ್ರತಿ ವರ್ಷವೂ ಸಹ ಶಿಕ್ಷಣ ಇಲಾಖೆಯಿಂದ ಇಂತಹ ಅನಾಹುತಗಳು ಪದೇ ಪದೇ ನಡೆಯುತ್ತಿರುವುದರಿಂದ ಬಿಇಒ ಅವರನ್ನು ಅಮಾನತಯಗೊಳಿಸಬೇಕೆಂದು ಆಗ್ರಹಿಸಿ ವೀರಶೈವ ಜಂಗಾಮಭಿವೃದ್ದಿ ಸಂಘ ಹಾಗೂ ವೀರಶೈವ ಲಿಂಗಾಯತ ಸಮಾಜದ ಪಟ್ಟುಹಿಡಿದು ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಬಿಇಒ ವಿರುದ್ದ ದಿಕ್ಕಾರ ಕೂಗುವುದರ ಮೂಲಕ ಅಮಾನತು ಮಾಡುವಂತೆ ಪಟ್ಟು ಹಿಡಿಯಲು ಮುಂದಾದಾಗ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ತಹಸೀಲ್ದಾರ ಸೂಚನೆಯಂತೆ ಆದೇಶ ಹೊರಡಿಸದ ಬಿಇಒ ವಿರುದ್ದ ನೋಟಿಸ್ ನೀಡಲಾಗುವುದು ಎಂದಾಗ ಭರವಸೆ ನೀಡುವಂತೆ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಗುರುಸಿದ್ದಯ್ಯ ಸೂಗಿರಯ್ಯನಮಠ, ಚಂಬಣ್ಣ ಚವಡಿ, ಟಿ.ಎಸ್.ರಾಜೂರ, ಮಲ್ಲಯ್ಯಸ್ವಾಮಿ ಗುರುಸ್ಥಲಮಠ, ಶಾಂತಯ್ಯ ಪೂಜಾರ, ಎ.ಪಿ.ಗಾಣಿಗೇರ, ಅಮರಯ್ಯ ಗೌರಿಮಠ, ಶಿವಯ್ಯ ಚಕ್ಕಡಿಮಠ, ಮಹೇಶ.ಎಸ್, ಸಂತೋಶ ವಸ್ತçದ, ಶಿವಕುಮಾರ ಶಶಿಮಠ, ಮಾಂತಯ್ಯ ಕಪ್ಲಿಮಠ, ಬಸಯ್ಯ ಗೊಂಗಡಶೆಟ್ಟಿಮಠ, ಎಸ್.ಬಿ.ಹಿಡಕಿಮಠ, ಸಿದ್ದು ಗೊಂಗಡಶೆಟ್ಟಿಮಠ, ಶಿವು ಚಂದ್ರಗಿರಿಮಠ ಸೇರಿದಂತೆ ಇತರರು ಇದ್ದರು.
