:
ವಿಜಯ ಸಿಂಧೂರ ರೋಣ
ರೇಣುಕಾಚಾರ್ಯರು ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಅದನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಲು ಶ್ರಮಿಸಿದರು,ಅವರು ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು ಇಂತಹ ಮಹಾನ್ ಶಿವಭಕ್ತರ ಗುಣದರ್ಶನಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ವಿ ಬಿ ಸೋಮನಕಟ್ಟಿ ಮಠ ಹೇಳಿದರು,

ಅವರು ರೋಣ ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು,
ರೇಣುಕಾಚಾರ್ಯರು ಎಲ್ಲಾ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರದ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿದರು,ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದರು, ಎಲ್ಲಾ ವರ್ಣಗಳೂ ಸಮಾನವೆಂದು ಹೇಳಿದರು ,ರೇಣುಕಾಚಾರ್ಯರು ವಚನಗಳ ಮೂಲಕ ತಮ್ಮ ತತ್ತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು,ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು ಎಂದರು,
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನಾಗರಾಜ್ ಕೆ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಸಮಾಜದ ಮುಖಂಡರು ರೇವಣಸಿದ್ದಯ್ಯ ಹಿರೇಮಠ, ವಿಜಿ ಜಾವುರ್ಮಠ, ಜಗದೀಶ್ ಹಿರೇಮಠ, ಸಂಗಯ್ಯ ನೀರಲಗಿ ಮಠ, ವೀರಯ್ಯ ನೆಲ್ಲೂರು ಮಠ, ಆನಂದ ಹಿರೇಮಠ, ಸೋಮು ಲದ್ದಿಮಠ, ಸೇರಿದಂತೆ ಅನೇಕರಿದ್ದರು
