ವಿಜಯ ಸಿಂಧೂರ ತಾಳಿಕೋಟೆ
ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ರವಿವಾರ ಐದನೇ ದಿನದ ಸತ್ಯಾಗ್ರಹವು ಶಿವಶರಣ ಅಂಬಿಗರ ಚೌಡಯ್ಯ ನವರ ಕ್ಷೇಮಾಭಿವೃದ್ಧಿ ಸಂಘ ತಾಳಿಕೋಟಿ ವತಿಯಿಂದ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಪರಶುರಾಮ ತಂಗಡಗಿ ಮಾತನಾಡಿ,ಈ ಹೋರಾಟ ಯಾರ ವಿರುದ್ಧವು ಅಲ್ಲಾ ಇದು ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ಅನಕೂಲವಾಗುವ ಹಾಗೆ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ವಾಗಬೇಕು. ಶಾಸಕರು ಹಾಗೂ ಜಿಲ್ಲಾಡಳಿತ ಕೂಡಲೇ ಈಗ ನಿಗದಿಪಡಿಸಿದ ಸ್ಥಳ ರದ್ದು ಪಡಿಸಬೇಕು ಹಾಗೂ ಪಟ್ಟಣದಲ್ಲಿರುವ ಸರ್ಕಾರಿ ಜಾಗೆಗಳಲ್ಲಿ ಪ್ರಜಾಸೌಧವನ್ನು ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಮೇಶ ಮುಕಿಹಾಳ, ಕಾಶೀನಾಥ ಮದರಿ, ಭೀಮಣ್ಣ ತಳವಾರ, ಮೋಹನ್ ಅಂಬಿಗೇರ, ಬಸವರಾಜ ತಳವಾರ, ಸಂಗಮೇಶ ಚಳ್ಳಗಿ, ಬಸವರಾಜ ಯಡಹಳ್ಳಿ, ದ್ಯಾಮಣ್ಣ ಮನಗೂಳಿ,ಮಲಕಾಜಿ ನಾಟಿಕಾರ, ಶಶಿಕಾಂತ ಮುಕಿಹಾಳ, ಮಲ್ಲಪ್ಪ ಗುರಗುಂದಗಿ, ಯಮನಪ್ಪ ಅಂಬಿಗೇರ, ಅಶೋಕ ಮುಕಿಹಾಳ ಮಲ್ಲಿಕಾರ್ಜುನ ನೆಲ್ಲಗಿ,ಮಾನಪ್ಪ ನಾಯ್ಕೋಡಿ, ಮಲ್ಲು ನಾಯ್ಕೋಡಿ, ಭೀಮಣ್ಣ ಚಳ್ಳಗಿ,ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ)ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಮಸೂಮಸಾಬ್ ಕೆಂಬಾವಿ. ಮೆಹೆಬೂಬ ಚೋರಗಸ್ತಿ , ಸಾಯಬಣ್ಣ ಅಲ್ಯಾಳ, ಕೊಡೇಕಲ್ ಸರ್, ದತ್ತು ಹೇಬಸುರ,ವಿಜಯಸಿಂಗ್ ಹಜೇರಿ, , ಮುದಕಪ್ಪ ಬಡಿಗೇರ,, ಮಹೇಶ್ ಚಲವಾದಿ, ಅಮಿತ್ ಮನಗೂಳಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, , ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ರಾಜು ಹಜೇರಿ, ನಿಂಗನಗೌಡ ದೇಸಾಯಿ , ಪ್ರಸಾದ್ ತಿವಾರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.
