ರೋಣ ಉದ್ಯೋಗ ಕ್ರಾಂತಿ -2026

ವಿಜಯ ಸಿಂಧೂರ, ರೋಣ


⚫ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಹಾಗೂ ಜನಪ್ರೀಯ ಶಾಸಕರು ರೋಣ ಮತಕ್ಷೇತ್ರ ಶ್ರೀ. ಜಿ.ಎಸ್ ಪಾಟೀಲ ರವರ ಜನ್ಮದಿನದ ಪ್ರಯುಕ್ತ ಎಸ್.ಆರ್ ಪಾಟೀಲ ಪ್ರತಿಷ್ಠಾನ ರೋಣ ಇವರ ಮೂಲಕ 2 ದಿನಗಳ ಉದ್ಯೋಗ ಕ್ರಾಂತಿ -2026 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಂಪನಿಗಳ ಮೂಲಕ ರೋಣ ಮತಕ್ಷೇತ್ರದ ನಿರುದ್ಯೋಗಿ ಯುವಕ ಯುವತಿಯರಿಗೆ ನೌಕರಿ ಹಾಗೂ ಕೌಟುಂಬಿಕ ಜೀವನ ನಿರ್ವಹಣೆ ಜೊತೆಜೊತೆಗೆ ಮನೆಯಿಂದಲೇ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಸದುದ್ಧೇಶ ಹೊಂದಲಾಗಿದೆ. ಈ ಕ್ರಾಂತಿಯ ಮುಖ್ಯ ಉದ್ದೇಶ ಯುವಕರಿಗೆ ಹೊಸ ಕೌಶಲ್ಯಗಳನ್ನು ಕಲಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು. ಇದು ಕೇವಲ ಉದ್ಯೋಗ ಪಡೆಯುವುದಕ್ಕಷ್ಟೇ ಅಲ್ಲ, ಸ್ವಂತ ಉದ್ಯಮ ಪ್ರಾರಂಭಿಸುವುದಕ್ಕೂ ಪ್ರೇರಣೆ ನೀಡುತ್ತದೆ.
☑️ದಿನಾಂಕ: 09.04.2026 ರಂದು ಮಹಿಳಾ ಸ್ವಯಂ ಉದ್ಯೋಗ ಕಾರ್ಯಕ್ರಮ – ಮಹಿಳೆಯರು ತಮ್ಮ ಮನೆಯಿಂದ ಹೇಗೆ ಸ್ವಂತ ಉದ್ಯೋಗ ಮಾಡುವುದು.? ತಾವು ತಯಾರಿಸಿದ ವಸ್ತುಗಳನ್ನು ಖರೀದಿಸಲು ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಬರಲಿವೆ. ಇವುಗಳ ಜೊತೆ ಒಪ್ಪಂದ ಮಾಡಿಸಲಾಗುವುದು.
☑️ದಿನಾಂಕ: 10.04.2026ರಂದು ಉದ್ಯೋಗ ಕ್ರಾಂತಿ ಕಾರ್ಯಕ್ರಮ* -ಇದರಲ್ಲಿ 100+ ಕಂಪನಿಗಳು ಭಾಗವಹಿಸಲಿದ್ದು ಯುವಕ ಮತ್ತು ಯುವತಿಯರಿಗೆ ಉದ್ಯೋಗ ಆವಕಾಶ ಮಾಡಿಕೊಡಲಿವೆ.
ಒಟ್ಟಿನಲ್ಲಿ, ಉದ್ಯೋಗ ಕ್ರಾಂತಿ ಒಂದು ಸಕಾರಾತ್ಮಕ ಬದಲಾವಣೆಯಾಗಿದ್ದು, ಯುವಕರಿಗೆ ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯದ ದಾರಿಗೆ ಬೆಳಕಾಗುತ್ತದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೊಂದಣಿ ಮಾಡಿಕೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಸ್ಥಳ: ರಾಜೀವಗಾಂಧಿ ಕಾಲೇಜು ಆವರಣ, ರೋಣ

ಸಮಯ: ಬೆಳಿಗ್ಗೆ 9 ರಿಂದ ಸಾಯಂಕಾಲ 6

https://docs.google.com/forms/d/e/1FAIpQLSdDEqfP6oQQ8Q19HbfN0BUzDqcUGcbc2t4smXW7CoYhkW_WHA/viewform?usp=publish-editor

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!