ನರೇಗಲ್: ಪಟ್ಟಣದ 3ನೇ ವಾರ್ಡ್‌ನ ಆಶ್ರಯ ಕಾಲೋನಿ ಹಾಗೂ ಬುಲ್ಡೋಜರ್ ನಗರದ ನಿವಾಸಿಗಳ ಆಶ್ರಯದಲ್ಲಿ ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ ಅವರ ಜನ್ಮ ದಿನದ ಪ್ರಯುಕ್ತ ʼಸಾವಿರ ಕೆರೆಗಳ ಸರದಾರ ಟ್ರೋಫಿʼ ಎನ್ನುವ 7 ಸೈಡ್ ಓಪನ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯನ್ನು ಎಪ್ರಿಲ್ 8 ರಿಂದ ಆಯೋಜಿಸಲಾಗಿದೆ ಎಂದು ಆಯೋಜಕ ತಂಡದ ಸದ್ದಾಂ ನಶೇಖಾನ್ ಮಾಹಿತಿ ನೀಡಿದರು.

ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೋಣ ಮತಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ದಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದ ಹಾಗೂ ಅವರ ಆರಂಭದ ದಿನಗಳಿಂದ ಇಲ್ಲಿಯವರೆಗೆ ಸಾವಿರ ಕೆರೆಗಳನ್ನು ನಿರ್ಮಿಸಿ ಸಾಧನೆ ಮಾಡಿರುವ ಜನಪ್ರಿಯ ಶಾಸಕರಾಗಿರವ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾಗಿರುವ ಜಿ. ಎಸ್. ಪಾಟೀಲರವರ ಜನ್ಮ ದಿನದ ಅಂಗವಾಗಿ ʼಸಾವಿರ ಕೆರೆಗಳ ಸರದಾರ ಟ್ರೋಫಿʼ ಎನ್ನುವ ಟೈಟಲ್‌ನಲ್ಲಿ 7ಸೈಡ್ ಹಾರ್ಡ್ ಟೆನ್ನಿಸ್ ಕ್ರಿಕೇಟ್ ಟೂರ್ನಾಮೆಂಟ್ ಅನ್ನು ಆಯೋಜನೆ ಮಾಡಲಾಗಿದೆ. ಶಾಸಕರು ನೀರಿಗೆ, ಕೃಷಿ ಭೂಮಿಗೆ ನೀಡಿರುವ ಮಹತ್ವವನ್ನು ಅನಾವರಣ ಮಾಡುವ ಪಂದ್ಯಾವಳಿ ಇದಾಗಿದೆ ಎಂದು ಮಾಹಿತಿ ನೀಡಿದರು.
50ಕಿಮೀ ಕ್ಕಿಂತ ಹೆಚ್ಚಿನ ದೂರದಿಂದ ಬರುವ ಪ್ರತಿ ತಂಡಕ್ಕೂ ಉಚಿತ ಪ್ರವೇಶ ನೀಡಲಾಗಿದೆ. ಪ್ರಥಮ ಬಹುಮಾನ ₹30 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಬಹುಮಾನ ₹10 ಸಾವಿರ ಹಾಗೂ ಚತುರ್ಥ ಬಹುಮಾನ ₹5 ಸಾವಿರವಿದೆ. ಸರಣಿಯ ಉತ್ತಮ ಬ್ಯಾಟ್ಸಮನ್, ಬೌಲರ್, ಸರ್ವೋತ್ತಮ ಆಟಗಾರರಿಗೆ ಸೈಕಲ್ ಬಹುಮಾನವಿದೆ. ಉತ್ತಮ ತಂಡ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ. ಉಪಹಾರದ ವ್ಯವಸ್ತೆಯನ್ನು ಮಾಡಲಾಗಿದೆ. ಪಾಲ್ಗೊಳ್ಳುವ ತಂಡದವರು 9886427170, 7204241472, 8880729118, 8431534305 ನಂಬರ್‌ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
