ವಿಜಯ ಸಿಂಧೂರ
ಗಜೇಂದ್ರಗಡ:ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಅವಮಾನಿಸಿದವರಿಗೆ ಕಠಿಣ ಶಿಕ್ಷೆ ಗುರಿಪಡಿಸಬೇಕು’ ಎಂದು ಮಂಜುನಾಥ ಮ ಬುರಡಿ ಬೆಳಗಾವಿ ವಿಭಾಗೀಯ ಸಂಚಾಲಕರು ಆದಿಜಾಂಬವ ಯುವ ಬ್ರಿಗೇಡ್. ಆಗ್ರಹಿಸಿದ್ದಾರೆ.

ಘಟನೆ ಕುರಿತು ಹೇಳಿಕೆ ನೀಡಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬುಜೀ ಅವರಿಗೆ ಅವಮಾನಿಸುವುದು ತಪ್ಪು. ಅವರು ಇಡೀ ಭಾರತೀಯರು ಆರಾಧಿಸುವ ಶಕ್ತಿ. ಅಂತವರಿಗೆ ಅವಮಾನ ಮಾಡಿರುವ ಘಟನೆ ಖಂಡನೀಯ. ಕಿಡಿಗೇಡಿಗಳಿಗೆ ಕಾನೂನಾತ್ಮಕವಾಗಿ ಕಠೀಣ ಶಿಕ್ಷೆ ಆಗಬೇಕು. ಕಾನೂನು ಇಂತಹ ಅಮಾನುಷ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಬೇಕು. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರನ್ನು ಆರಾಧಿಸುವ ಕಾರ್ಯ ಆಗಬೇಕೆ ಹೊರತು ಅವಮಾನಿಸುವ ಕಾರ್ಯ ಎಂದಿಗೂ ಆಗಬಾರದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷರು ಎನ್ ಮೂರ್ತಿ ಬಣ ಡಿ ಜಿ ಕಟ್ಟಿಮನಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬುಜೀ ಅವರು ಸಮಾನತೆ ನೀಡಿದವರು. ಸಮ ಸಮಾಜಕ್ಕೆ ಶ್ರಮಿಸಿದವರು. ಮಾನವೀಯ ಮೌಲ್ಯ ಮರೆತು ದಲಿತ ಕೇರಿಯಲ್ಲಿ ಕಿಡಿಗೇಡಿಗಳು ಮಾಡಿರುವ ಅವಮಾನ ಸರಿಯಲ್ಲ. ಇಂತಹ ಘಟನೆ ಜರುಗದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಗಜೇಂದ್ರಗಡ ತಹಶೀಲ್ದಾರ ಕಿರಕುಮಾರ್ ಕುಲಕರ್ಣಿ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ,ಸಿಪಿಐ ವಿಜಯಕುಮಾರ ನಾಯಕ, ಪಿಎಸ್ಐ ಪ್ರಕಾಶ್ ಡಿ,ಮತ್ತಿತರ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ
ಈ ಸಂದರ್ಭದಲ್ಲಿ ಅಂದಪ್ಪ ಮಾದರ, ಯಮನೂರಪ್ಪ ಹರಿಜನ,ಯಮನೂರ ಅಬ್ಬಿಗೇರಿ, ಈಶ್ವರ ದೊಡ್ಡಮನಿ ಸೋಮು ನಾಗರಾಜ ಬಸವರಾಜ ಕಡಬಿನ, ರಮೇಶ ಬನ್ನಿಗಿಡದ, ಸುರೇಶ ಕ್ಯಾರ, ರವಿ ಮಾದರ, ಆನಂದ ಮೂಲಿಮನಿ, ಮಂಜು ಮಾದರ, ಶರಣು ಅರಳಿಗಿಡದ, ಗಣೇಶ ರಾಠೋಡ,ಮಲ್ಲು ಮಾದರ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
