ವಿಜಯ ಸಿಂಧೂರ ರೋಣ
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕಿದೆ. ದುಡಿಮೆಯಿಂದ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಶುಕ್ರವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಹಿಳೆಯರು ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳದಲ್ಲೇ ಎಮ್.ಎನ್.ಸಿ ಕಂಪನಿಗಳ ನುರಿತ ತಜ್ಞರಿಂದ ತರಬೇತಿ,ಮಾರುಕಟ್ಟೆ ವ್ಯವಸ್ಥೆ,ಉದ್ಯೋಗ ಸ್ಥಾಪಿಸುವ ಕೌಶಲ್ಯಗಳ ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ ಎಂದರು.

ಅಭಿಮಾನಿಗಳು,ಹಿತೈಷಿಗಳು ನನ್ನ ಹುಟ್ಟುಹಬ್ಬದ ಅಂಗವಾಗಿ ಉದ್ಯೋಗ ಕ್ರಾಂತಿ ಹೆಸರಿನಲ್ಲಿ ಬೃಹತ್ ಉದ್ಯೋಗ ಮಕೇಳ ಆಯೋಜಿಸಿದ್ದು,ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಭಾಗವಹಿಸಲಿದ್ದು, ೧೦೦ಕ್ಕೂ ಹೆಚ್ಚು ಎಮ್.ಎನ್.ಸಿ ಕಂಪನಿಗಳು ಉದ್ಯೋಗ ಕ್ರಾಂತಿಯಲ್ಲಿ ಪಾಲ್ಗೊಳ್ಳುವರು ಅವುಗಳಲಲ್ಲಿ ಮುಖ್ಯವಾಗಿ ಅಮೆಜಾನ್,ಟಾಟಾ,ಲಂಡನ್ ಮೂಲದ ಟಾರಸ್ ಭಾಗವಹಿಸುತ್ತಿವೆ. ವಿವಿಧ ಸ್ವಯಂ ಉದ್ಯೋಗ ತರಬೇತಿ ನೀಡುವುದರ ಜೊತೆಗೆ ಮಣ್ಣು ರಹಿತ ತರಕಾರಿ ಬೆಳೆಯುವ ವಿನೂತನ ಕೃಷಿ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.

ಪುರಸಭೆಯ ಮಾಲಿಕತ್ವದ ಬಸಲಾಪೂರ ರಸ್ತೆಯ ೬ ಎಕರೆ ಜಮೀನನ್ನು ಕಾರ್ಮಿಕ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕೆ ನೀಡಲಾಗಿದೆ.ಜಿಗಳೂರ ಕೆರೆಯ ಪಕ್ಕದ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಚಾಲನೆ ನೀಡಲಾಗುವುದು,ಅಲ್ಲದೇ ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಈಜುಗೋಳ ಲೋಕಾರ್ಪಣೆ ಮಾಡಲಾಗುತ್ತಿದೆ.ನಿರುದ್ಯೋಗ ಸಮಸ್ಯೆ ಪರಿಹರಿಸಲು ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರ ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಸ್ಪಂಧನಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ಪಾಟೀಲ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು.ಈ ಉದ್ಯೋಗ ಮೇಳವು ಏಪ್ರೀಲ್ ೯ ಹಾಗೂ ೧೦ ಎರಡು ದಿನ ರಾಜೀವ್ ಗಾಂಧಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದ್ದು,ಈ ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಭಾಗವಹಿಸುವರು ಹಾಗೂ ವಿವಿಧ ಕ್ಷೇತ್ರಗಳ ಪ್ರಸಿದ್ಧ ಕಂಪನಿಗಳು ಭಾಗವಹಿಸಲಿವೆ. ಪದವೀಧರರು, ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಈ ಮೇಳವು ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದರು
ಮಹಿಳಾ ಯುವಜನತೆಗೆ ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮಹಿಳೆಯರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವಿಭಕ್ತ ಕುಟುಂಬ ಇದ್ದಾಗ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತಿತ್ತು. ಇಂದು ಅದರ ಕೊರತೆ ಕಾಡುತ್ತಿದೆ. ಮಹಿಳೆಯರಲ್ಲಿ ಹಣಕಾಸಿನ ಶಿಸ್ತು, ಬದ್ಧತೆ ಕಾಣಬಹುದು. ಹೀಗಾಗಿ ಶಾಸಕರು ಇಂತಹ ಜನಪರ ಕೆಲಸ ಕೈಗೊಂಡಿದ್ದಾರೆ,ಅವರ ಮಾರ್ಗದರ್ಶನದಲ್ಲಿ ನಾವೂ ನಡೆಯುತ್ತೇವೆ ನೆಮ್ಮ ಸಹಕಾರ ಇರಲಿ ಸಂಸ್ಥೆ ವಿವಿಧ ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿವೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಮಯದಲ್ಲಿ ಭವ್ಯಾ ಹಾಗೂ ಅಕ್ಷಯ ಪಾಟೀಲ ಮಾತನಾಡಿದರು. ಈ ಸಮಯದಲ್ಲಿ ಐ.ಎಸ್.ಪಾಟೀಲ,ವಿ.ಬಿ.ಸೋಮನಕಟ್ಟಿಮಠ,ಐ.ಬಿ.ಕೊಟ್ಟೂರಶೆಟ್ಟರ ಸೇರಿದಂತೆ ಅನೇಕರು ಇದ್ದರು.
ಉದ್ಯೋಗ ಕ್ರಾಂತಿಗೆ ಯುವಕ,ಯುವತಿಯರನ್ನು ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಚಲನಚಿತ್ರ ನಟಿ ಕಾರುಣ್ಯ ರಾಮ್ ಆಗಮಿಸಲಿದ್ದು,ಉದ್ಯೋಗ ಕ್ರಾಂತಿಯ ಮೇಳಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ. ೫೦೦ ಸ್ವಸಹಾಯ ಗುಂಪುಗಳ ೫ ಸಾವಿರ ಮಹಿಳೆಯರನ್ನು ಸೇರಿಸುವ ಗುರಿ ಹೊಂದಲಾಗಿದೆ.ಗ್ರಾಮೀಣ ಪ್ರದೇಶಗಳ ಸ್ವಸಹಾಯ ಸಂಘಗಳಿಗಿರುವ ಸೌಲಭ್ಯಗಳು ಪಟ್ಟಣ,ನಗರದ ಮಹಿಳೆಯರಿಗೂ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು-ಜಿ.ಎಸ್.ಪಾಟೀಲ,ಶಾಸಕರು ರೋಣ
