ತಾಳಿಕೋಟಿ ಹೋರಾಟ ಸಮಿತಿಯಿಂದ ಉಗ್ರ ಹೋರಾಟದ ಎಚ್ಚರಿಕೆ. 39 ನೇ ದಿನಕ್ಕೆ ಮುಂದುವರೆದ ಧರಣಿ.


ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ನಡೆಯುತ್ತಿರುವ ಧರಣಿ ಸತ್ಯಾಗ್ರಹವು 39 ನೇ ದಿನಕ್ಕೆ ಮುಂದುವರೆದಿದೆ. ಹೋರಾಟ ಸಮಿತಿಯ ಸಹ ಕಾರ್ಯದರ್ಶಿ ಮಹೇಶ ಛಲವಾದಿ ಮಾತನಾಡಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಧರಣಿ ಸ್ಥಳಕ್ಕೆ ಬಾರದೆ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ತಾಳಿಕೋಟಿ ಪಟ್ಟಣದ ಎಲ್ಲಾ ಸಮಾಜದ ಮುಖ್ಯಸ್ಥರು, ಸಂಘ ಸಂಸ್ಥೆಗಳು, ಎಲ್ಲಾ ಸಮಾಜದ ಹಿರಿಯರು ವಿವಿಧ ಅಸೋಷಿಯೇಷನಗಳ ಹಾಗೂ ತಾಲೂಕಿನ ಎಲ್ಲಾ ಹಳ್ಳಿಗಳ ಸಾರ್ವಜನಿಕರು 38 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರು ಈ ಧರಣಿ ಸ್ಥಳಕ್ಕೆ ಬಾರದೆ ಇಡಿ ತಾಲೂಕಿಗೆ ಅನ್ಯಾಯವನ್ನ ಮಾಡುತ್ತಿದ್ದಾರೆ ಎಂದರು. ಇವರ ಈ ನಡೆಗೆ ಉಗ್ರವಾಗಿ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ
ತಾಳಿಕೋಟಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ ಗೌರವ ಅಧ್ಯಕ್ಷ ಎಸ್ ಬಿ ಕಟ್ಟಿಮನಿ ಕಾರ್ಯಧ್ಯಕ್ಷ ಆರ್ ಎಸ್ ಪಾಟೀಲ( ಕೂಚಬಾಳ ) ಉಪಾಧ್ಯಕ್ಷರಾದ ಮುತ್ತಪ್ಪ ಚಮಲಾಪುರ, ಮಾಸೂಮಸಾಬ್ ಕೆಂಭಾವಿ, ​ಕಾಶಿನಾಥ ಮುರಾಳ ​ವಿಜಯಸಿಂಗ ಹಜೇರಿ, ಸುರೇಶ ಹಜೇರಿ, ​ಅನಿಲಸಿಂಗ ವಿಜಯಪುರ​ ಮಹೇಶ ಚಲವಾದಿ ​, ಸಂಜು ಬರದೆನಾಳ ​, ಸುರೇಶ ಪುಲುಸ್, ​ಮಯೂರ ಪಾಟೀಲ, ​ರತನಸಿಂಗ ಕೊಕಟನೂರ,
​ಪ್ರಭುಗೌಡ ಪಾಟೀಲ ಬಳಗನೂರ, ರಾಮಣ್ಣ ಕಟ್ಟಿಮನಿ,
​ಕಳಕುಸಾ ರಂಗರೇಜ್, ಎಲ್ ಬಿ ಕೊಡೇಕಲ್, ​ನಿಂಗನಗೌಡ ದೇಸಾಯಿ, ​ಭೀಮನಗೌಡ ದೇಸಾಯಿ (ಹಡಗಿನಾಳ)
​ತಿಮ್ಮಪ್ಪ ಗೊಲ್ಲರ, ​ಯಂಕಪ್ಪ ಗೊಲ್ಲರ, ಸದ್ದಾಂ ಹುಸೇನ್ ಬೀಳಗಿ, ದತ್ತು ಹೇಬಸೂರ, ನಿಂಗನಗೌಡ ಬಿರಾದಾರ ಗಡಿಸೋಮನಾಳ, ಭೀಮನಗೌಡ ಪಾಟೀಲ, ತಿಪ್ಪಣ್ಣ ಸಜ್ಜನ, ​ಶೇಕಪ್ಪ ರಕ್ಕಸಗಿ, ಬಸ್ಸು ತಾಳಿಕೋಟಿ ಹಾಗೂ ತಾಲೂಕಿನ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!