ಟಾಟ ಗಾಳಿ ವಿದ್ಯುತ್ ಕಂಪನಿ ವಿರುದ್ಧ ನಾಳೆ ಪ್ರತಿಭಟನೆ

ವಿಜಯ ಸಿಂಧೂರ ರೋಣ

ಟಾಟಾ ಗಾಳಿಯಿಂದ ವಿದ್ಯುತ್ ಉತ್ಪಾದನೆ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ತೀವ್ರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಾಲೂಕಿನ ಹಿರೇಮಣ್ಣೂರ ಗ್ರಾಮದ ಯುವಕ ಗುರುಲಿಂಗಯ್ಯ ಗಣಾಚಾರಿಗೆ ಸೂಊಪರಿಹಾರ ನೀಡದೆ ಅವರಿಗೆ ಸತಾಯಿಸುತ್ತಿರುವ ಟಾಟಾ ಕಂಪನಿಯ ವಿರುದ್ಧ ನಾಳೆ ಯುವ ಮುಖಂಡ ಮಂಜುನಾಥ ಬುರುಡಿ ಅವರ ನೇತೃತ್ವದಲ್ಲಿ ನಾಳೆ ಪ್ರತಿಭಟನೆ ನೆಡೆಯಲಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾದ ಬಡ ಕುಟುಂಬದ ಯುವಕನಿಗೆ ಕಿಂಚಿತ್ತೂ ಕನಿಕರ ತೊರದ ಟಾಟಾ ಪವನ ವಿದ್ಯುತ್ ಕಂಪನಿಗೆ ಸೂಕ್ತ ಪಾಠ ಕಲಿಸುವ ಪ್ರತಿಭಟನೆಯಲ್ಲಿ ಹಲವು ಪೀಡಿತರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು ಎಂದರು.

ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಕಬ್ಬಿಣದ ರಾಡ್ ಮೈಮೇಲೆ ಬಿದ್ದು ಬೆನ್ನು ಮೂಳೆ ತುಂಡಾಗಿದೆ ಹೀಗೆ ಹಲವಾರು ತೊಂದರೆಗಳು ಟಾಟಾ ಕಂಪನಿಯಲ್ಲಿ ನಡೆದಿವೆ ಅವುಗಳಲ್ಲಿ ಕೆಲವು ಮುಚ್ಚಿ ಹಾಕುವ ಪ್ರಯತ್ನ ನಡೆದಿವೆ.ತೀವ್ರ ತೊಂದರೆಗೆ ಒಳಗಾದ ಬಡ ಕುಟುಂಬದ ಯುವಕ ಗುರುಲಿಂಗಯ್ಯನಿಗೆ ನೆರವು ಹಾಗೂ ಜೀವನೋಪಾಯಕ್ಕಾಗಿ ಸಹಕರಿಸಲು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕಂಪನಿ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಈ ಹಿನ್ನೆಲೆಯಲ್ಲಿ ನ್ಯಾಯ ದೊರಕುವವರೆಗೆ ಹೋರಾಟಮಾಡಲಾಗುವುದು ಎಂದು ಮಂಜುನಾಥ ಬುರುಡಿ ತಿಳಿಸಿದ್ದಾರೆ.

“ಪೀಡಿತರಿಗೆ ತಕ್ಷಣ ಪರಿಹಾರ ನೀಡಬೇಕು ಹಾಗೂ ಕಂಪನಿಯ ನಿರ್ಲಕ್ಷ್ಯಕ್ಕೆ ಅಂತ್ಯವಾಗಬೇಕು” ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ,ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆನ್ನು ಮೊಳೆ ಮುರಿದುಕೊಂಡು ಹಾಸಿಗೆ ಹಿಡಿದ ಯುವಕ ಗುರುಲಿಂಗಯ್ಯ ಅವರಿಗೆ ನ್ಯಾಯ ಸಿಗಬೇಕು ಅಲ್ಲಿಯವರೆಗೂ ಜಕ್ಕಲಿ ಸಮೀಪದ ಟಾಟಾ ಪವನ ವಿದ್ಯುತ್ ಕಂಪನಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಮಂಜುನಾಥ ಚಲವಾದಿ ತಿಳಿಸಿದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!