ಪ್ರಜಾಸೌಧ ಸ್ಥಳ ವಿರೋಧಿಸಿ ಹನ್ನೊಂದನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ. ಹೋರಾಟಕ್ಕೆ ಗೊಂದಳಿ ಸಮಾಜ ಹಾಗೂ ಗೊಲ್ಲರ ಸಮಾಜ ಸಾಥ.


ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶುಕ್ರವಾರ ಹತ್ತನೇ ದಿನದ ಸತ್ಯಾಗ್ರಹವು ತಾಳಿಕೋಟಿಯ ಅಂಬಾಭವಾನಿ ಗೊಂದಳಿ ಸಮಾಜ ತಾಳಿಕೋಟಿ ಹಾಗೂ ಗೊಲ್ಲರ ಸಮಾಜ ತಾಳಿಕೋಟಿ ವತಿಯಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಸತ್ಯಾಗ್ರಹ ನಡೆಸಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಮುತ್ತಪ್ಪ ಚಮಲಾಪುರ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ನಾಲ್ಕೈದು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಅನಾನುಕೂಲ ವಾಗಿರುವುದರಿಂದ ಪಟ್ಟಣದಲ್ಲಿಯೇ ಸಾಕಷ್ಟು ಸರ್ಕಾರಿ ಜಮೀನುಗಳು ಇದ್ದು ಅವುಗಳಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು ಎಂದು ಅಗ್ರಹಿಸಿದರು.

ಗೊಲ್ಲರ ಸಮಾಜ ಹಾಗೂ ಗೊಂದಳಿ ಸಮಾಜದ ಅಧ್ಯಕ್ಷರು ಮಾತನಾಡಿದರು.

ಈ ಸಂದರ್ಭದಲ್ಲಿ ಯಂಕಪ್ಪ ಗೊಲ್ಲರ, ತಿಮ್ಮಪ್ಪ ಗೊಲ್ಲರ, ಭೀಮಪ್ಪ ಗೊಲ್ಲರ, ಗುರಪ್ಪ ಗೊಲ್ಲರ, ಬಲಭೀಮ ಗೊಲ್ಲರ, , ಜಂಗಪ್ಪ ಗೊಲ್ಲರ, ಭೀಮಪ್ಪ ಗೊಲ್ಲರ, ಭೀಮಣ್ಣ ಗೊಲ್ಲರ, ಕೃಷ್ಣ ಗೊಲ್ಲರ, ಶಿವಾಜಿ ಸೂರ್ಯವಂಶಿ, ಹಣಮಂತ ವಾಸ್ಟರ್, ಆದಿ ವಾಗ್ನೋರೆ, ಪುಂಡಲಿ ಪಾರ್ಗೆ, ಪರಶುರಾಮ್ ಸೂರ್ಯವಂಶಿ, ನಾಮದೇವ ವಾಸ್ಟರ್ ಹನುಮಂತ ಸುಪಟೆಕಾರ್ ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಪ್ರಕಾಶ ಹಜೇರಿ, ಮಯೂರ ಪಾಟೀಲ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ,, ಅಮಿತ್ ಮನಗೂಳಿ, ಅನಿಲಸಿಂಗ್ ವಿಜಾಪುರ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ರಾಗು ಪಡಾಸಲಿ, ಬಸವರಾಜ ಬಿಸನಾಳ ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.

Leave a Reply

Your email address will not be published. Required fields are marked *