ಬಜೆಟ್ ಗದಗ ಜಿಲ್ಲೆಗೆ ಬೇವು, ಬೆಲ್ಲ

ವಿಜಯ ಸಿಂಧೂರ ಗದಗ

ರಾಜ್ಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಈ ಬಾರಿಯೂ ಹಿಂದಿನ ಬಜೆಟ್‌ನಂತೆ ವಿಶೇಷ ಕೊಡುಗೆ ಸಿಕ್ಕಿಲ್ಲ. ಜತೆಗೆ ಯಾವುದೇ ಹೊಸ’ ಯೋಜನೆಗಳಿಗೂ ಆದ್ಯತೆ ಸಿಕ್ಕಿಲ್ಲ, ಕೇವಲ ಹಳೆ ಯೋಜನೆಗಳಿಗೆ ಮಣೆ ಹಾಕಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ ಇದರಿಂದ 2026-27ರ ಬಜೆಟ್ ಗದಗ ಜಿಲ್ಲೆಯ ಪಾಲಿಗೆ ಬೇವು,ಬೆಲ್ಲದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ. ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಹೆಸರು ಅಚ್ಚಳಿಯದೆ ಉಳಿಯುವಂಥ ಯಾವುದೇ ಕೊಡುಗೆ ಕೊಟ್ಟಿಲ್ಲ. ಕಳೆದ ಬಾರಿ ರೋಣ ವಿಧಾನಸಭೆ ಮತಕ್ಷೇತ್ರದ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ತೋಟಗಾರಿಕೆ ಕಾಲೇಜ್ ಸ್ಥಾಪನೆ ಕಾರ್ಯ ಸಾಧ್ಯತಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಆ ಕಾರ್ಯ ಸಾಧ್ಯತಾ ವರದಿ ಅನ್ವಯ ಈ ಬಾರಿ ಕಾಲೇಜ್ ಸ್ಥಾಪನೆಗೆ ಪ್ರಥಮ ಹಂತದ ಮೂಲ ಸೌಕರ್ಯ ಕಾಮಗಾರಿ ಕೈಗೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನಿತರ ಕೊಡುಗೆಗಳು:

ಅದೇ ರೀತಿ ಈ ಹಿಂದಿನ ವರ್ಷಗಳಲ್ಲಿ ಘೋಷಣೆಯಾದಂತೆ ಗದಗ-ಕಪ್ಪತಗುಡ್ಡ-ಲಕ್ಕುಂಡಿ ಪ್ರವಾಸೋ ದ್ಯಮ ಸರ್ಕ್ಯೂಟ್ ಅಭಿವೃದ್ಧಿ ಘೋಷಣೆಯಾಗಿದೆ. ರಾಮದುರ್ಗ, ಹೊನ್ನಾಳಿ, ಗದಗನಲ್ಲಿ ನೂತನ ಬಸ್ ನಿಲ್ದಾಣ ಘೋಷಣೆ ಮಾಡಲಾಗಿದೆ.ಗದಗ ನಗರದಲ್ಲಿ ಈಗಾಗಲೇ ಕೇಂದ್ರ ಬಸ್ ನಿಲ್ದಾಣ ಮತ್ತು ಪಂ.ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣಗಳಿದ್ದು, ಬಜೆಟ್‌ನಲ್ಲಿ ಮತ್ತೊಂದು ಬಸ್ ನಿಲ್ದಾಣ ಮಂಜೂರಾಗಿರುವುದು ಅಚ್ಚರಿ ಮೂಡಿಸಿದೆ.

ಇನ್ನು 2026 27ನೇ ಸಾಲಿನಲ್ಲಿ ಮುಕ್ತಾಯಗೊಳಿಸಲು ಉದ್ದೇಶಿಸಿದ ಯೋಜನೆಗಳ ಪೊಕಿ ಶಿರಹಟ್ಟಿಕೆರೆ ತುಂಬಿಸುವ ಯೋಜನೆಗೆ
ಅನುಮೋದನೆ ದೊರೆತಿದೆ.
ಅದೇ ರೀತಿ ರೋಣ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಮಲಪ್ರಭಾ ಯೋಜನೆಯಡಿ ರೋಣ ಮತಕ್ಷೇತ್ರದಲ್ಲಿ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ವಸತಿ ಶಾಲೆ :
ಗದಗ ಹಾಗೂ ರೋಣದಲ್ಲಿ ಕಾರ್ಮಿಕ ಇಲಾಖೆ ವ್ಯಾಪ್ತಿಯ ಹಂತ 1 ಮತ್ತು 2 ರಲ್ಲಿ ಅನುಮೊದನೆಯಾಗಿರುವ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.ಇನ್ನು ಗದಗ ಜಿಲ್ಲೆಗೆ ಸಂಬಂಧವೇ ಇರದ ಗದಗ ವಾಡಿ ರೈಲು ಮಾರ್ಗದ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ಶೇ.50 ನಿರ್ಮಾಣ ವೆಚ್ಚ ರಾಜ್ಯ ಸರ್ಕಾರವೇ ಭರಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸ ನಿರೀಕ್ಷೆ:
ಇನ್ನು ನಬಾರ್ಡ್ ಸಂಸ್ಥೆಯ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ನಬಾರ್ಡ್ ಸಹಕಾರ ಬ್ಯಾಂಕ್ ಸ್ಥಾಪಿಸಲು ಆ‌‌ಬಿಐಗೆ
ಪ್ರಸ್ತಾವನೆ ಸಲ್ಲಿಕೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಏತ ನೀರಾವರಿ, ಚೆಕ್ ಡ್ಯಾಂ,ಕೆರೆಗಳ ಅಭಿವೃದ್ಧಿಗೆ 112 ಕಾಮಗಾರಿಗಳನ್ನು ರೂ.1793 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ಕೈಗೊಂಡಿರುವುದು ಜೆಲ್ಲೆಯ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ನೆರೆಯ ಜಿಲ್ಲೆಗಳಿಗೆ ಬಂಪರ್

ಈ ಬಾರಿಯ ಬಜೆಟ್‌ನಲ್ಲೂ ನೆರೆಯ ಕೊಪ್ಪಳ, ಬಾಗಲಕೋಟೆ, ವಿಜಯನಗರ ಮತ್ತು ಹುಬ್ಬಳ್ಳಿ-ಧಾರವಾಡಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಬಜೆಟ್ ನಲ್ಲಿ ಗದಗ ಜಿಲ್ಲೆಗೆ ಸಿಕ್ಕಿದ್ದು ಕಡಿಮೆ.

ಆಶಾದಾಯಕ ಘೋಷಣೆಗಳು:

ಬಜೆಟ್ ನಲ್ಲಿ ಜಿಲ್ಲೆಗೆ ಪ್ರತ್ಯೇಕ ಕೊಡುಗೆ ಸಿಗದಿದ್ದರೂ 56,432 ಹುದ್ದೆ ಭರ್ತಿ ಮಾಡಿಕೊಳ್ಳಲು ನಿರ್ಧರಿಸುವುದು ಮತ್ತು ಒಂದು ಬಾರಿಗೆ ಅನ್ವಯವಾಗುವಂತೆ 5 ವಯೋಮಿತಿ ಸಡಿಲಿಕೆ ಮಾಡಿರುವುದು ನಿರುದ್ಯೋಗಿ ಪದವೀಧರರಲ್ಲಿ ಭರವಸೆ ಮೂಡಿಸಿದೆ. ಪ್ರತಿ ಜಿಲ್ಲೆಗೊಂದು ಮೆಟ್ರಿಕ್ ನಂತರದ ಬಾಲಕರು ಮತ್ತು ಬಾಲಕಿಯರ ವಸತಿ ನಿಲಯ, ಮೂಲ ಸೌಕರ್ಯ ಅಭಿವ್ಯ ದ್ವಿಗಾಗಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಜಾರಿ ಗೊಳಿಸಿ 8600 ಕೋಟಿ ರೂ. ಮೀಸಲಿಟ್ಟಿ ಯೋಜನೆಗೆ 100 ಕೋಟಿ ರೂ. ರುವುದು, ಮುಖ್ಯಮಂತ್ರಿಗಳ ಕೃಷಿ ವಿಸ್ತಾರ ಸಂಜೀವಿನಿ, ರೈತ ಕರೆ ಕೇಂದ್ರ ಸ್ಥಾಪನೆ ಬಗ್ಗೆ ರೈತರಿಗೆ ಸಂತಸ ತಂದಿದೆ.

ಸಿಕ್ಕಿದ್ದು ಏನು? :

ಮುಂಡರಗಿ ತಾಲೂಕಿನ ಡಂಬಳದಲ್ಲಿ ತೋಟಗಾರಿಕೆ ಕಾಲೇಜ್ ಸ್ಥಾಪನೆ ಮೊದಲ ಹಂತದ ಮೂಲ ಸೌಕರ್ಯ ಕಾಮಗಾರಿಗೆ ಗ್ರೀನ್ ಸಿಗ್ನಲ್

ಗದಗ-ಕಪ್ಪತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ

ಗದಗದಲ್ಲಿ ಹೊಸ ಬಸ್‌ ನಿಲ್ದಾಣ

ಶಿರಹಟ್ಟಿ ರೋಣ ಕ್ಷೇತ್ರ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ

ರೋಣ ಕ್ಷೇತ್ರದ ಕಾಲುವೆಗಳ ಆಧುನಿಕರಣ ಕಾಮಗಾರಿಗೆ ಆದ್ಯತೆ

ಕಾರ್ಮಿಕ ಇಲಾಖೆಯಿಂದ ರೋಣ, ಗದಗದಲ್ಲಿ ತಲಾ ಒಂದು ವಸತಿ ಶಾಲೆ

ಗದಗದಲ್ಲಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್

ಅಭಿಪ್ರಾಯ

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ದಿಕ್ಕು ದಿಸೆ ಇಲ್ಲದ್ದಾಗಿದೆ. ರಾಜ್ಯವನ್ನು ಹೆಚ್ಚುವರಿ ಸಾಲದ ಕಡೆಗೆ ಕೊಂಡೊಯ್ಯುವ ಬಜೆಟ್, 72 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಲಾಗಿದೆ. 1.32 ಲಕ್ಷ ಕೋಟಿ ಸಾಲ ಮಾಡುವುದನ್ನು ಸಾಧನೆ ಎಂದು ಹೇಳಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಹಾಗೂ ಮಹದಾಯಿ ಯೋಜನೆಗಳ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಉತ್ತರ ಕರ್ನಾಟಕಕ್ಕೂ ಪ್ರಮುಖ ಯೋಜನೆಗಳ ಘೋಷಣೆ ಇಲ್ಲದೆ ಜನರಲ್ಲಿ ನಿರಾಸೆ ಉಂಟಾಗಿದೆ.-ಸಿ.ಸಿ.ಪಾಟೀಲ, ಶಾಸಕ, ನರಗುಂದ

ಜನಸ್ನೇಹಿ ಸಮನ್ವಯ ಬಜೆಟ್

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನಸಾಮಾನ್ಯರಿಗೆ ಹೊರೆಯಾಗದ ಜನಸ್ನೇಹಿ ಸಮನ್ವಯ ಬಜೆಟ್ ಆಗಿದೆ. ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ 47,224 ಕೋಟಿ ರೂ. ಅನುದಾನ ನೀಡಿದ್ದು, ಒಟ್ಟು ಬಜೆಟ್‌ನ ಶೇ.10 ಮೀಸಲಿಡ ಲಾಗಿದೆ. ಶಾಲಾ ಕಟ್ಟಡ ನಿರ್ಮಾಣ ಮತ್ತು ದುರಸ್ತಿ, ಅತಿಥಿ ಶಿಕ್ಷಕರು, ಉಪನ್ಯಾಸಕರ, ಬಿಸಿಯೂಟ ನೌಕರರ ಗೌರವಧನ ಹೆಚ್ಚಳ ಸೇರಿದಂತೆ ಹಲವು ಕ್ರಮಗಳು ಶ್ಲಾಘನೀಯ. ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನು ಮಾಡಿರುವುದು ಉತ್ತಮ ಕ್ರಮ. ಒಟ್ಟಾರೆ ಇದು ಅಭ್ಯುದಯದ ಜನಪರ ಬಜೆಟ್ ಆಗಿದೆ.- ಬಸವರಾಜ ಗುರಿಕಾರ, ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತ ಶಿಕ್ಷಕರ ಫೆಡರೇಷನ್

Leave a Reply

Your email address will not be published. Required fields are marked *