ಸಾರಿಗೆ ಸಂಸ್ಥೆ ಬಸ್, ಬೈಕ್ ಅಪಘಾತ ಯುವಕ ಸಾವು

ವಿಜಯ ಸಿಂಧೂರ, ಮೈಸೂರ

ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್‍ ನಡುವೆ ಮೈಸೂರು ಜಿಲ್ಲೆಯ ಹುಣಸೂರು ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೌಡಗೇರಿ ಗ್ರಾಮದ ಯುವಕ ಆನಂದ ಪೂಜಾರ (40) ಮೃತ ಯುವಕ. ಕೆಲಸಕ್ಕೆ ಹುಣಸೂರನಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿ ಕೆಲಸ ಮಾಡುತ್ತಿದ್ದ ಅವರು ಬೈಕ್‍ನಲ್ಲಿ ಹುಣಸೂರಿಗೆ ತೆರಳುತ್ತಿದ್ದರು. ಆಗ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಸಾರಿಗೆ ಸಂಸ್ಥೆ ಬಸ್, ಆನಂದ ಪೂಜಾರ ಅವರ ಬೈಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಸಾರಿಗೆ ಸಂಸ್ಥೆಯ ಬಸ್ ಚಾಲಕ ಅತಿವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಅದೇ ಘಟನೆಗೆ ಕಾರಣವಾಗಿದೆ. ಈ ಕುರಿತು ಹುಣಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಕೈಗೊಂಡಿದ್ದಾರೆ.

ಹೆಂಡತಿ,ಇಬ್ಬರೂ ಮಕ್ಕಳು, ತಾಯಿ ಸೇರಿದಂತೆ ಗ್ರಾಮದ ಜನತೆ ಮತ್ತು ಅಪಾರ ಬಂದು ಮಿತ್ರರು ಆನಂದ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಇಂದು ರಾತ್ರಿ ಗೌಡಗೇರಿ ಗ್ರಾಮದ ಸ್ಮಶಾನದಲ್ಲಿ ಶವಸಂಸ್ಕಾರ ಕಾರ್ಯಕ್ರಮ ನಡೆಯುವದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ಕೊಡಲಿ.

Leave a Reply

Your email address will not be published. Required fields are marked *