ಪ್ರಜಾಸೌಧ ಸ್ಥಳ ವಿರೋಧಿಸಿ 12 ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ. ಧರಣಿಗೆ ಹಲವಾರು ಸಂಘಗಳು ಸಾಥ.


ತಾಳಿಕೋಟೆ : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶನಿವಾರ 11 ನೇ ದಿನದ ಸತ್ಯಾಗ್ರಹವು ತಾಳಿಕೋಟಿಯ ವೈದ್ಯರ ಸಂಘ ತಾಳಿಕೋಟಿ, ಔಷಧ ವ್ಯಾಪಾರಸ್ತರ ಸಂಘ, ಲ್ಯಾಬ್ ಟೇಕ್ನಿಶಿಯನ್ ತಾಳಿಕೋಟಿ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ವತಿಯಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ 11 ನೇ ದಿನದ ಸತ್ಯಾಗ್ರಹ ನಡೆಸಿದರು

ಧರಣಿ ಕುರಿತು ವೈದ್ಯರ ಸಂಘದ ಅಧ್ಯಕ್ಷ ಡಾ : ನಾಲಬಂದ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ಐದು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಈ ಸ್ಥಳ ಅನಾನುಕೂಲ ವಾಗಿರುವುದರಿಂದ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು ಎಂದು ಅಗ್ರಹಿಸಿದರು.

ಡಾ : ಪ್ರಭುಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಡಾ : ವಿಜಯಕುಮಾರ್ ಕಾರ್ಚಿ, ಡಾ : ಆನಂದ ಭಟ್, ಡಾ : ವಿಜಯಕುಮಾರ ಅಮಲ್ಯಾಳ, ಡಾ : ನಾಗುರ, ಡಾ : ಗಿರೀಶ್ ಯಾದವಾಡ, ಔಷದ ವ್ಯಾಪಾರಸ್ಥರ ಸಂಘದ ವಾಸುದೇವ ಹೆಬ್ಸೂರ್, ರಾಮನಗೌಡ ಬಾಗೇವಾಡಿ ಪ್ರವೀಣ್ ಪಾಟೀಲ, ಕಾಂತು ಸಜ್ಜನ, ಸಂತೋಷ ಪ್ರಥಮ್ ಶೆಟ್ಟಿ , ಶಿವಲಿಂಗ ಸಾಳಂಕಿ, ಕುಮಾರ ಸುರಪುರ, ಶಾಂತಗೌಡ ಪಾಟೀಲ ಹೊಸಳ್ಳಿ, ಶಂಗು ಶೆಟ್ಟಿ , ಮೈನುದ್ದನ್ ಕೊರ್ತಿ, ಸಂಜು ಹಂಚಾಟೆ, ಕಾಶಿನಾಥ ಪಾಟೀಲ, ಸಂಗಯ್ಯ ಮುದ್ನೂರ ಮಠ, ಪುಟ್ಟು ಕುಲಕರ್ಣಿ, ರಾಘವೇಂದ್ರ ಅಗಡಿ, ಬಸವರಾಜ ಬಿರಾದಾರ, ವಿಜಯ್ ಜಮ್ಮಲದಿನ್ನಿ , ಮಲ್ಲಿಕಾರ್ಜುನ ಮಡಿವಾಳರ, ಆರಿಫ್ ಮುರಾಳ, ರಿಯಾಜ್ ಮುಲ್ಲಾ, ಕುಮಾರ ಸುರಪುರ, ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, ದೇವೇಂದ್ರ ಕೊಪ್ಪದ, ವಿಜಯಸಿಂಗ್ ಹಜೇರಿ . ರಾಜು ಹಂಚಾಟೆ, ಗಂಗಾಧರ ಕಸ್ತೂರಿ, ಪ್ರಕಾಶ ಹಜೇರಿ, ಮಯೂರ ಪಾಟೀಲ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ,, ಅಮಿತ್ ಮನಗೂಳಿ, ಅನಿಲಸಿಂಗ್ ವಿಜಾಪುರ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ರಾಗು ಪಡಾಸಲಿ, ಬಸವರಾಜ ಬಿಸನಾಳ ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.

Leave a Reply

Your email address will not be published. Required fields are marked *