ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಭಾಷೆಗಳ ವೈವಿಧ್ಯತೆಯ ಉತ್ಸವ

.

ವಿಜಯ ಸಿಂಧೂರ ಗಜೇಂದ್ರಗಡ:
ನಗರದ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಭಾಷೆಗಳ ವೈವಿಧ್ಯತೆ ಉತ್ಸವಯನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಚೇರ್ಮನ್ ಸೀತಲ ಓಲೇಕಾರ ಉದ್ಘಾಟಿಸಿ ಮಾತನಾಡಿ ಮಕ್ಕಳು ತಯಾರು ಮಾಡಿದ ವಿವಿಧ ಭಾಷೆಗಳ ವೈವಿಧ್ಯಮಯ ಮಾದರಿಗಳನ್ನು ವೀಕ್ಷಣೆ ಮಾಡಿ, ಮಕ್ಕಳ ಸೃಜನಶೀಲತೆಗೆ ಪಾಲಕರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಯಾಕೆಂದರೆ ಪ್ರತಿ ಮಗುವಿನಲ್ಲೂ ವಿಭಿನ್ನತೆಯನ್ನು ಕಾಣಬಹುದು ಎಂದರು.

ಬಳಿಕ ಸಂಸ್ಥೆಯ ಕಾರ್ಯದರ್ಶಿ ನಾಜೀಯಾ ಮುದಗಲ್ ಮಾತನಾಡಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಯಲ್ಲಿ ಪೂರ್ವ ಪ್ರಾಥಮಿಕ ಹಂತ ಅತ್ಯಂತ ಮಹತ್ವದಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆಯೇ ಮಕ್ಕಳಲ್ಲಿನ ಸೂಪ್ತ ಪತ್ರಿಭೆಗಳ ಅನಾವರಣಕ್ಕೆ ಇಂತಹ ವೇದಿಕೆಗಳು ಮಾದರಿ ಎಂದರು.

ಎಲ್ಲಾ ವಯಸ್ಸಿನ ಮಕ್ಕಳಿಂದ ವಿವಿಧ ಭಾಷೆಗಳ ಪ್ರದರ್ಶನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಇವಿಎಸ್ ಮತ್ತು ಅನೇಕ ಬೇರೆ ಭಾಷೆಗಳ ಪ್ರತಿನಿಧಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.

ಇನ್ನೂ ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಅನುಷಾ ತಳವಾರ, ಎಚ್.ಎಚ್.ಮಾದರ, ಸೇರಿದಂತೆ ಶಾಲೆಯ ಬೋಧಕೇತ್ತರ ಸಿಬ್ಬಂದಿಗಳು ಹಾಗೂ ಪಾಲಕರು, ಮುದ್ದು ಮಕ್ಕಳು ಇದ್ದರು.

Leave a Reply

Your email address will not be published. Required fields are marked *