ವಿಜಯ ಸಿಂಧೂರ, ಮುಂಡರಗಿ
ಸಾವಿರಾರು ಜಾತಿ,ಧರ್ಮ ಹೊಂದಿದ ಭಾರತ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಭಾತೃತ್ವದಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು ಎಂಬ ಪರಿಕಲ್ಪನೆ ಹೊಂದಿದ್ದ ಡಾ. ಅಂಬೇಡ್ಕರ್ ಅವರು ಅಪ್ರತಿಮ ಹೋರಾಟಗಾರರು. ಅಂಥವರ ಮೂರ್ತಿ ಸ್ಥಾಪನೆಯಿಂದ ಅವರ ತತ್ವಾ ದರ್ಶಗಳನ್ನು ನಾವು ಪಾಲಿಸುವಂತಾಗ ಬೇಕು” ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ತಾಲೂಕಿನ ಡಂಬಳ ಗ್ರಾಪಂ ಆವರಣ ದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಎಂದಿಗೂ ಸ್ವಂತಕ್ಕಾಗಿ ಶ್ರಮಿಸಲಿಲ್ಲ. ಹಿಂದುಳಿದ ಶೋಷಿತರ ತುಳಿತಕ್ಕೊಳಗಾದವರಿಗೆ ನ್ಯಾಯ ಸಿಗಲಿ ಎಂದು ಬಯಸಿದ್ದರು. ಅವರು ಉನ್ನತ ಹುದ್ದೆಗೆ ಹೋಗಿ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ಹೊರಬರಲು ಕಾರಣ ಅವರು ಪಡೆದ ಶಿಕ್ಷಣ, ಸಾಧನೆಗೆ ಶಿಕ್ಷಣವೊಂದೇ ದಾರಿ, ಸಂವಿಧಾನದ ಆಶಯಗಳು
ಈಡೇರುವುದರ ಜತೆಗೆ ಎಲ್ಲರೂ ಶಿಕ್ಷಣದ ಜತೆಗೆ ಆರ್ಥಿಕ ಸ್ಥಿರತೆ ಸಾಧಿಸಬೇಕು. ಇದು ಸ್ವಾವಲಂಬಿ ಬದುಕಿಗೆ ಆಸರೆಯಾಗುತ್ತದೆ. ಜಾತೀಯತೆ ಎಷ್ಟೇ ಹೋಗಿದೆ ಎಂದರೂ ಸಂಪೂರ್ಣ ತೊರೆದಿಲ್ಲ.ಹೀಗಾಗಿ ಎಲ್ಲರೂ ಮುಖ್ಯವಾಹಿನಿಗೆ ಬರಲು ಶಿಕ್ಷಣವಂತರಾಗಬೇಕು ” ಎಂದು ಹೇಳಿದರು.

ತಾಲೂಕು ಡಿಎಸ್‌ಎಸ್ ಸಂಚಾಲಕ ಎಚ್.ಡಿ.ಪೂಜಾರ ಜೆ.ಟಿ.ಮಠ ಆಡಳಿ ತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ ಡಂಬಳದಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಲಿಂ.ಸಿದ್ದಲಿಂಗ ತೋಂಟದಾರ್ಯ ಪೂಜ್ಯರ ಕನಸಾಗಿತ್ತು ಎಂದರು.
ಸಾನ್ನಿಧ್ಯ ವಹಿಸಿದ್ದ ನಿಜುಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಮಾತನಾಡಿ, “ಸಮಾಜಕ್ಕೆ ತಮ್ಮನ್ನು ಅರ್ಪಿಸಿ ಕೊಂಡು ಎಲ್ಲರೂ ಸಮಾನತೆ ಹೊಂದ ಬೇಕು. ಜಾತಿಯತೆ ಇರಬಾರದು ಎಂಬ ಮಹದಾಸೆ ಹೊಂದಿದ್ದ ಮಹಾನದಾರ್ಶನಿಕರಾದ ಬುದ್ಧ ,ಬಸವ, ಅಂಬೇಡ್ಕರ್ ಅವರು ಎಂದಿಗೂ ತಮ್ಮ ಮೂರ್ತಿಗಳಾಗಬೇಕು ಎಂದು ಬಯಸಿದವರಲ್ಲ. ಮೂರ್ತಿ ಸ್ಥಾಪನೆ ಅವರ ಬಗ್ಗೆ ಅಭಿಮಾನದ ಸಂಕೇತವಾಗಿದೆ. ಅವರು ಅನುಸರಿಸಿದ ಮಾನವೀಯತೆಯ ಹೆಜ್ಜೆ ಗುರುತುಗಳನ್ನು ಗುರ್ತಿಸಿಕೊಂಡು ಸಮಾಜದಲ್ಲಿ ಏಕತೆ ಐಕ್ಯತೆ ಭಾವ ಹೊಂದುವುದೇ ನಾವು ಅವರಿಗೆ ಸಲ್ಲಿಸಬೇಕಾದ ಗೌರವ” ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ರಾಜ್ಯ ಮಾದಿಗ ಮಹಾಸಭಾ ಉಪಾಧ್ಯಕ್ಷ ಮೋಹನ ಅಲಮೇಲ್ಕರ್, ಮರಿತಮಪ್ಪ ಆದಮ್ಮನವರ, ಸೋಮಣ್ಣ ಹೈತಾಪೂರ, ಎಸ್.ಎನ್.ಬಳ್ಳಾರಿ, ಎಸ್.ಡಿ.ಮಕಾನ ದಾರ, ಮಿಥುನಗೌಡ ಪಾಟೀಲ, ರಾಮಣ್ಣ ಮೇಗಲಮನಿ, ಮಲ್ಲಪ್ಪ ಮಠದ, ಮಾರುತಿ ಜೋಗದಂಡಕರ, ತಹಸೀಲ್ದಾರ ಯರಿಸ್ವಾಮಿ, ಡಿ.ಡಿ.ಮೋರನಾಳ, ಮರಿ ಯಪ್ಪ ಸಿದ್ದಣ್ಣವರ, ಲಕ್ಷ್ಮಣ ತಗಡಿನಮನಿ, ಮಂಜುನಾಥಸ್ವಾಮಿ ಅರವ ಟಗಿಮಠ, ಉದಯಕುಮಾರ ಯಲಿವಾಳ, ಜಿ.ಎಸ್.ಅಣ್ಣಿಗೇರಿ, ಡಿ.ಜಿ.ಪೂಜಾರ, ಬಾಲರಾಜ ಅರಬರ, ಗೋಣಿಬಸಪ್ಪ ಕೊರ್ಲ ಹಳ್ಳಿ, ಚನ್ನಪ್ಪಗಣಪ್ಪನವರ, ದುರ್ಗಪ್ಪಪೂಜಾರ, ಜಿ.ವಿ.ಹಿರೇಮಠ,ಮಹೇಶ ಗಡಗಿ, ಸಿದ್ದಪ್ಪ ನಂಜಪ್ಪನವರ, ಮಂಜುನಾಥ ಮೇಗಲ ಮನಿ, ಗವಿಸಿದ್ದಪ್ಪ ಬಿಸನಳ್ಳಿ, ಗೌಸುಸಾಬ ತಾಂಬೋಟಿ, ಸೋಮಣ್ಣ ಗುಡ್ಡದ, ಚಿನ್ನಪ್ಪ ವಡಟ್ಟಿ, ಮಲ್ಲಣ್ಣಯರಾಶಿ, ಲಕ್ಷ್ಮಣ ದೊಡ್ಡಮನಿ ಪಾಲ್ಗೊಂಡಿದ್ದರು.
ಪ್ರೊ.ಸತೀಶ ಪಾಸಿ ಸಂವಿಧಾನ ಪೀಠಿಕೆ ಬೋಧಿ ಸಿದರು. ಮಂಜುನಾಥ ಬಿಸನಳ್ಳಿ ಸ್ವಾಗತಿಸಿದರು. ಮರಿಯಪ್ಪ ಸಿದ್ದಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ `ಗೌಡಣ್ಣವರ ನಿರೂಪಿಸಿದರು.
*ತೋಟಗಾರಿಕೆ ವಿವಿಗೆ ಲಿಂ.ತೋಂಟದ ಶ್ರೀ ಹೆಸರಿಡಿ:
ಸ್ವತ: ಲಿಂ.ಜ.ಡಾ.ತೋಂಟದ ಸಿದ್ದಲಿಂಗ ಶ್ರೀಗಳು ಕಾಯಕಯೋಗಿ ಮತ್ತು ಕೃಷಿ ಕಾಳಜಿ ಹೊಂದಿ ಈ ಭಾಗದಲ್ಲಿ ತೋಟಗಾರಿಕೆಗೆ ಒತ್ತು ನೀಡುವ ವಿಶ್ವವಿದ್ಯಾಲಯವಾಗ ಬೇಕು ಎಂದು ಕನಸು ಕಂಡಿದ್ದರು ಇದೀಗ ಅದು ನನಸಾಗುವ ಹೊತ್ತು ಬಂದಿದೆ. ಹೀಗಾಗಿ ಅವರ ಗೌರವ ದ್ಯೋತಕವಾಗಿ ಡಂಬಳದಲ್ಲಿ ಸ್ಥಾಪನೆಯಾಗಲಿರುವ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಶ್ರೀಗಳ ಹೆಸರು ಇಡಬೇಕೆಂದರು.*
