ಪ್ರಜಾಸೌಧ ಸ್ಥಳ ವಿರೋಧಿಸಿ 13 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಕ್ಷತ್ರೀಯ ಮರಾಠ ಸಮಾಜ ಹಾಗೂ ಬಸವೇಶ್ವರ ಆಟೋಸಂಘ ಬೆಂಬಲ


ವಿಜಯ ಸಿಂಧೂರ ತಾಳಿಕೋಟೆ :

ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶನಿವಾರ 12 ನೇ ದಿನದ ಸತ್ಯಾಗ್ರಹವು ತಾಳಿಕೋಟಿಯ ಕ್ಷತ್ರೀಯ ಮರಾಠ ಸಮಾಜ ತಾಳಿಕೋಟಿ, ಹಾಗೂ ಬಸವೇಶ್ವರ ಅಟೋ ಸಂಘ ತಾಳಿಕೋಟಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ 12 ನೇ ದಿನದ ಸತ್ಯಾಗ್ರಹ ನಡೆಸಿದರು.

ಧರಣಿ ಸತ್ಯಾಗ್ರಹ ಕುರಿತು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಸಂಬಾಜಿರಾವ್ ವಾಡಕರ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ನಾಲ್ಕು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಈ ಸ್ಥಳ ಬಹಳದೂರ ವಾಗುವುದರಿಂದ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು ಎಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಮಾನೆ, ಶಿವಾಜಿ ಮೋಹಿತೆ ,ರಂಗನಾಥ ನೂಲಿಕಾರ,ಸಂಜು ಕದಂ, ನಾರಾಯಣ ಸುಬೇದಾರ, ಸಾಗರ್ ಕೋಡಗೆ, ಅಂಬಾಜಿ ಜಾದವ್, ಧನಂಜಯ್ ಶಿಂಧೆ, ಸುಭಾಷ್ ಗಾವಾಡೆ, ಆನಂದ್ ಪಿಸಾಳೆ, ಸಂಭಾಜಿ ಡಿಸ್ಲೆ, ರಾಜು ನಿಕ್ಕಂ, ಸಂತೋಷ ಕದಂ, ಬಸವೇಶ್ವರ ಆಟೋ ಸಂಘದ ಪದಾಧಿಕಾರಿಗಳು ರಮೇಶ್ ಹರಿಜನ, ರಫಿಕ್ ಕೈರೋಬ, ವಿಠ್ಠಲ್ ದೊಡ್ಮನಿ, ಗೌಡಪ್ಪ ಗೌಡ ಪಾಟಿಲ, ಶಿವಾನಂದ ಸಜ್ಜನ, ಶ್ರೀಕಾಂತ್ ತಳವಾರ, ಜುಮ್ಮಣ್ಣ ಬಸರಿಕಟ್ಟಿ, ಶರಣು ಜಾಲಹಳ್ಳಿ, ಸಂತೋಷ ಬಾಗೇವಾಡಿ, ಶಿವು ಅಂಬಿಗೇರ ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚುಬಾಳ) ಮುತ್ತಪ್ಪ ಚಮಲಾಪುರ, ಕಾಶಿನಾಥ ಮುರಾಳ, ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, , ವಿಜಯಸಿಂಗ್ ಹಜೇರಿ . , ಗಂಗಾಧರ ಕಸ್ತೂರಿ, ಪ್ರಕಾಶ ಹಜೇರಿ, ಮಯೂರ ಪಾಟೀಲ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ,, ಅಮಿತ್ ಮನಗೂಳಿ, ಮಹೇಶ ಚಲವಾದಿ , ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ರಾಗು ಪಡಾಸಲಿ, ಬಸವರಾಜ ಬಿಸನಾಳ ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.

Leave a Reply

Your email address will not be published. Required fields are marked *