ವಿಜಯ ಸಿಂಧೂರ ಮುಂಡರಗಿ

ಮುಂಡರಗಿ ಲಕ್ಷ್ಮಿ ಕನಕ ನರಸಿಂಹ ದೇವರ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಮುಂಡರಗಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಕೊಪ್ಪಳ ಭಾಗದ ಭಕ್ತರು ಪಾಲ್ಗೊಂಡಿದ್ದರು
ಮುಂಡರಗಿಯಲ್ಲಿರುವ ಐತಿಹಾಸಿಕ ಮತ್ತು ಸ್ವಯಂ ಉದ್ಭವ ಶ್ರೀ ಲಕ್ಷ್ಮಿ ಕನಕನರಸಿಂಹ ಸ್ವಾಮಿ ದೇವಸ್ಥಾನವು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಕನಕಪ್ಪನ ಗುಡ್ಡದ ಮೇಲಿರುವ ಈ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ದೇವಸ್ಥಾನವು ತನ್ನ ಜಾತ್ಯಾತೀತ ಪರಂಪರೆಗೆ ಹೆಸರುವಾಸಿಯಾಗಿದೆ.
ವಿಶೇಷತೆ:

ಮುಂಡರಗಿ ನಾಡಗೌಡ ಮನೆತನಕ್ಕೆ ಒಲಿದ ದೈವವೆಂದು ನಂಬಲಾಗಿದೆ.
ಮುಂಡರಗಿಯ ಕನಕನರಸಿಂಹನ ದರ್ಶನ ಪಡೆಯಲು ಭಕ್ತರು ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದರು. ಲಕ್ಷ್ಮಿ ಕನಕನರಸಿಂಹ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
