ಡಾ. ಪ್ರವೀಣ್ ಬಿರಾದಾರ್ ಅವರಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ’ ಘೋಷಣೆ

ತಾಳಿಕೋಟೆ : ತಾಲೂಕಿನ ಬೇಕಿನಾಳ ಗ್ರಾಮದ ಡಾ . ಪ್ರವೀಣ್ ಬಿರಾದಾರ ಅವರಿಗೆ ಕಲಬುರ್ಗಿ : ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಕಲಬುರ್ಗಿಯ ಜ್ಞಾನ ಶಾರದೆ ಅಕಾಡೆಮಿಯ ಅಧ್ಯಕ್ಷರಾದ ಡಾ. ಪ್ರವೀಣ್ ಬಿರಾದಾರ್ ಅವರು 2026ನೇ ಸಾಲಿನ ಪ್ರತಿಷ್ಠಿತ “ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.

ಭಾರತ ಸರ್ಕಾರದ ನೋಂದಾಯಿತ ಸಂಸ್ಥೆಯಾದ “ಅಂತರರಾಷ್ಟ್ರೀಯ ಹಿಂದೂ ಮಹಾಸಭಾ” ವತಿಯಿಂದ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭ:ದಿನಾಂಕ: ಏಪ್ರಿಲ್ 15, 2026ಸಂದರ್ಭ: ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಲಾದ ಅಂತರರಾಷ್ಟ್ರೀಯ ಪ್ರಧಾನ ಸಮಾರಂಭ.ಡಾ. ಪ್ರವೀಣ್ ಬಿರಾದಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಸುಧಾರಣೆಗಳು ಹಾಗೂ ಅವರ ಅಮೂಲ್ಯವಾದ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಅಹಲಕರ್ ಸಿಂಗ್ ನಗರ್, ರಾಜ್ಯಾದ್ಯಕ್ಷರಾದ ಶ್ರೀ ಸೋಮಶೇಖರ ಪಿ. ಯಾದವ್ ಹಾಗೂ ವಿದ್ಯಾರ್ಥಿ ಘಟಕದ ರಾಜ್ಯಾದ್ಯಕ್ಷರು ಅಂತಾರಾಷ್ಟ್ರೀಯ ಹಿಂದೂ ಮಹಾಸಭಾ ಸಾಗರ್ ಆರ್. ಕಲಾದಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಪ್ರತಿಯನ್ನು ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಲೋಕಸಭಾ ಸಭಾಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸೇರಿದಂತೆ ವಿವಿಧ ಉನ್ನತ ಕಚೇರಿಗಳಿಗೆ ಮಾಹಿತಿಗಾಗಿ ರವಾನಿಸಲಾಗಿದೆ. ಡಾ. ಬಿರಾದಾರ್ ಅವರ ಈ ಸಾಧನೆಗೆ ಜಿಲ್ಲೆಯ ಗಣ್ಯರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!