ವಿಜಯ ಸಿಂಧೂರ
ರೋಣ:ಕಳೆದ ಶೀಗೆ ಹುಣ್ಣೆಮೆಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಪಾದಯಾತ್ರೆ ತೆರಳುತ್ತಿದ್ದ ಸಂದರ್ಭದಲ್ಲಿ ಉಂಟಾದ ರಸ್ತೆ ಅಪಘಾತದಲ್ಲಿ ತಾಲೂಕಿನ ತಳ್ಳಿಹಾಳ ಗ್ರಾಮದ ಮೂವರು ಜನ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ ರೂ.2ಲಕ್ಷ ರೂಗಳ ಚೆಕ್‌ಗಳನ್ನು ರಾಜ್ಯ ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ ಎಸ್ ಪಾಟೀಲ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ ಎಸ್ ಪಾಟೀಲ್ ರಾಜ್ಯಾದ್ಯಂತ ಹಲವು ಅಪಘಾತ ಪ್ರಕರಣಗಳು ಇದ್ದು, ನಮ್ಮ ರೋಣ ತಾಲೂಕಿನ ಮೃತರ ಸಂಬಂಧಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶೇಷ ಪ್ರಕಣವೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ, ಪರಿಹಾರ ಹಣ ಮಂಜೂರು ಮಾಡಿಸಿದ್ದೇನೆ. ಪರಿಹಾರ ಪಡೆದ ಕುಟುಂಬಸ್ಥರು ಸರಕಾರದಿಂದ ದೊರೆತ ಪರಿಹಾರದ ಹಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳ ಶಿಕ್ಷಣದ ಜೊತೆಗೆ ಕುಟುಂಬದ ಅಭಿವೃದ್ಧಿಗೆ ವೆಚ್ಚ ಮಾಡಬೇಕು ಎಂದು ತಿಳಿಸಿದರು.

ಘಟನೆ ವಿವರ: ಕಳೆದ ವರ್ಷ ಶೀಗೆ ಹುಣ್ಣೆಮೆಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ತಳ್ಳಿಹಾಳ ಗ್ರಾಮದಿಂದ ಹುಲಿಗೆಮ್ಮದೇವಿ ಪಾದಯಾತ್ರೆ ತೆರಳುತ್ತಿದ್ದ ವೇಳೆ ಕೂಕನಪಳ್ಳಿ ಗ್ರಾಮದ ರಾ.ಹೆ. 50 ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಭೀಕರ ಅಪಘಾತ ಸಂಭವಿಸಿತ್ತು ಘಟನೆಯಲ್ಲಿ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(40),ಪ್ರಕಾಶ್(25), ಶರಣಪ್ಪ(19) ಮೃತರು ಪಟ್ಟಿದ್ದರು. ಪ್ರಾಣಾಪಾಯದಿಂದ ಪಾರಾದ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಈ ಸಂದರ್ಭದಲ್ಲಿ ಐ.ಎಸ್. ಪಾಟೀಲ,ಯೂಸೂಪ್ ಇಟಗಿ, ಬಸವರಾಜ ನವಲಗುಂದ, ನಾಗರಾಜ ಕೆ, ಎಚ್. ಎಸ್ ತಾಳಿ, ಯಚ್ಚರಗೌಡ ಗೋವಿಂದಗೌಡ್ರ, ಈರಪ್ಪ ಹಂಡಿ, ಸುಭಾಸ್ ಪೂಜಾರ, ಶರಣಪ್ಪ ಮಲ್ಲಾಪೂರ, ರುದ್ರಗೌಡ ಬರಮಗೌಡ್ರ, ಸೋಮು ನಾಗರಾಜ ಸೇರಿದಂತೆ ತಳ್ಳಿಹಾಳ, ಕೊತಬಾಳ, ಮುಗಳಿ ಗ್ರಾಮಸ್ಥರು ಮತ್ತಿತರರು ಇದ್ದರು
.
