ವಿಜಯ ಸಿಂಧೂರ ತಾಳಿಕೋಟೆ
ಶಾಸಕರ ಮಲತಾಯಿ ಧೋರಣೆ ಸಲ್ಲದು. ಯಾರ ಹಿತಕ್ಕಾಗಿ ಈ ಪ್ರಜಾಸೌಧ ಮತ ನೀಡಿದವರು ಇಷ್ಟು ಪ್ರತಿಭಟನೆ ನಡೆಸಿದರೂ ಕವಡೆ ಕಾಸಿನ ಕಿಮ್ಮತ್ತು ನೀಡದ ಶಾಸಕರ ವರ್ತನೆ ಖಂಡನೀಯ ಎಂದು ಆರ್ ಎಸ್ ಪಾಟೀಲ (ಕೂಚಬಾಳ ) ಆಕ್ರೋಶ ವ್ಯಕ್ತಪಡಿಸಿದ್ದಾರೆ

ಅವರು ಸೋಮವಾರ ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ನಡೆಯುತ್ತಿರುವ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ, ಅವರು ತಾಳಿಕೋಟಿ ಪಟ್ಟಣದಲ್ಲಿ ಹದಿಮೂರು ದಿನಗಳಿಂದ ನಡೆಯುತ್ತಿರುವ ಈ ಧರಣಿ ಸ್ಥಳಕ್ಕೆ ಶಾಸಕರು ಬರದೆ ಧರಣಿ ನಿರತರ ಮುಂದೆ ಹಾದು ಹೋದರೂ ಕೂಡ ಸೌಜನ್ಯಕ್ಕೂ ಬಾರದೆ ಜಾಣ ಕುರುಡರಂತೆ ಹೋದದ್ದು ಖಂಡನಿಯ, ಅಕ್ಷಮ್ಯ ಅಪರಾಧ,ಶಾಸಕರೇ ನಿಮಗೆ ತಾಳಿಕೋಟಿ ಜನತೆ ಹೆಚ್ಚಿನ ಮತಗಳನ್ನ ನೀಡಿದ್ದಾರೆ ಅದನ್ನು ಶಾಸಕರು ಮರೆತಿದ್ದಾರೆ. ಹಾಲಿ ಶಾಸಕರು ತಾಳಿಕೋಟಿ ಪಟ್ಟಣದ ಋಣವನ್ನು ತೀರಿಸಬೇಕಾದರೆ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸಬೇಕು ಎಂದರು
ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿಯ ಉಪಾಧ್ಯಕ್ಷ ವಿಜಯ ಸಿಂಗ್ ಹಜೇರಿ ಮಾತನಾಡಿ, ತಾಲೂಕು ಆಡಳಿತ ಸಂಪೂರ್ಣ ಏಕ ಪಕ್ಷಿಯವಾಗಿ ನಡೆದು ಕೊಳ್ಳುತ್ತಿದ್ದು, ತಮ್ಮದೆ ಕುಟುಂಬಕ್ಕೆ ಅನಕೂಲವಾಗುವ ಹಾಗೆ ನಡೆಕೊಳ್ಳುತ್ತಿರುವುದು ವಿಷಾಧನಿಯ ಸಂಗತಿ ಯಾಗಿದೆ ಎಂದರು.

ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು.ಜನ ಸಾಮಾನ್ಯರ ಇಚ್ಚೆಯಂತೆ ತಾಳಿಕೋಟೆ ಪಟ್ಟಣದ ಹ್ರದಯ ಭಾಗದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ.ಹೋರಾಟ ಸಮಿತಿಯ ಪದಾಧಿಕಾರಿಗಳಾದ ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚುಬಾಳ) ಮುತ್ತಪ್ಪ ಚಮಲಾಪುರ, ಕಾಶಿನಾಥ ಮುರಾಳ, ಮೆಹೆಬೂಬ ಚೋರಗಸ್ತಿ , ಪರಶುರಾಮ ತಂಗಡಗಿ, , ಪ್ರಕಾಶ ಹಜೇರಿ, ಮಯೂರ ಪಾಟೀಲ, ಅಮಿತ್ ಮನಗೂಳಿ, ಮಹೇಶ ಚಲವಾದಿ , ರವಿ ಕಟ್ಟಿಮನಿ, ಹಾಗೂ ಪಟ್ಟಣದ ರಜಪೂತ ಸಮಾಜದ ಗುರುಹಿರಿಯರು ಹಾಜರಿದ್ದರು.
