ತಾಳಿಕೋಟೆ :
ನಗರದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬೆಸ್ಟ್ ಪಿ.ಯು ಸೈನ್ಸ್ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶತ ಪ್ರತಿಶತ ಫಲಿತಾಂಶ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 152 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಕಾಲೇಜು ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಈ ಬಾರಿ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಕಮಲಾಪುರ 589/600 (98.2%) ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ಸ್ಥಾನ ಹಾಗೂ ಜಿಲ್ಲೆಗೆ 4ನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಇನ್ನು ಕುಮಾರಿ ಜಯಾ ಸುರೇಶ ಸಜ್ಜನ 583/600 (97.2%) ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಕುಮಾರಿ ರಾಜೇಶ್ವರಿ ಉಳ್ಳಾಗಡ್ಡಿ 573/600 (95.5%) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಷಯವಾರು ವಿಶೇಷ ಸಾಧನೆ:
ಭೌತಶಾಸ್ತ್ರ: ರಾಜೇಶ್ವರಿ ಉಳ್ಳಾಗಡ್ಡಿ — 100/100
ಗಣಿತ: ಸಿಂಚನಾ ಕಮಲಾಪುರ — 100/100
ಜೀವಶಾಸ್ತ್ರ: ಪ್ರಜ್ಞಾ ಹೊನ್ನಳ್ಳಿ ಮತ್ತು ಪೂಜಾ — 100/100
ಒಟ್ಟು 21 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಕಾಲೇಜಿಗೆ ಹೆಮ್ಮೆಯನ್ನ ತಂದಿದ್ದಾರೆ.
ಫಲಿತಾಂಶ ವಿವರ:ಡಿಸ್ಟಿಂಕ್ಷನ್: 42 ವಿದ್ಯಾರ್ಥಿಗಳು
ಪ್ರಥಮ ದರ್ಜೆ: 60 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ: 50 ವಿದ್ಯಾರ್ಥಿಗಳು
ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್.ಎಂ. ಸಜ್ಜನ, ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಪ್ರಾಚಾರ್ಯರಾದ ಎಂ. ಮಾರಣ್ಣ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
