ವಿಜಯ ಸಿಂಧೂರ ತಾಳಿಕೋಟೆ
ತಾಳಿಕೋಟೆ:ಸ್ಥಳೀಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ನಡೆಯುತ್ತಿರುವ ಅನುದಾನರಹಿತ ವಿ.ವಿ.ಎಸ್. ಪಿಯು ಕಾಲೇಜು, ತಾಳಿಕೋಟೆಯಲ್ಲಿ 2026ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಪರೀಕ್ಷೆಯಲ್ಲಿ ಒಟ್ಟು 174 ವಿದ್ಯಾರ್ಥಿನಿಯರು ಹಾಜರಾಗಿದ್ದು, ಅದರಲ್ಲಿ 96.55% ಫಲಿತಾಂಶ ಸಾಧಿಸಲಾಗಿದೆ.ಇದಲ್ಲದೆ, 44 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿ (Distinction)107 ವಿದ್ಯಾರ್ಥಿನಿಯರು ಪ್ರಥಮ ದರ್ಜೆ 17 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ:96.55% ವಿಭಾಗವಾರು ಸಾಧನೆ ವಾಣಿಜ್ಯ ವಿಭಾಗ1)ಕುಮಾರಿ ಬಿಂದು ಸಾಸನೂರ – 581 (96.83%)2)ಕುಮಾರಿ ಕಾವ್ಯ ಬಿಡರಕುಂದಿ-579 (96.50%)3)ಕುಮಾರಿ ಲಕ್ಷ್ಮೀ ಪವಾರ – 569 (94.83%) ಕಲಾ ವಿಭಾಗ1)ಕುಮಾರಿ ಮಂಜುಳಾ ಪೂಲಬಾವಿ – 578 (96.33%)2)ಕುಮಾರಿ ಮಲ್ಲಮ್ಮ ಬಿರಾದಾರ-574 (95.66%)3)ಕುಮಾರಿ ಅಂಬಿಕಾ ವಡ್ಡರ –560 (93.33%)ಶತಶತಮಾನ ಸಾಧನೆ (100/100)
ವ್ಯವಹಾರ ಅಧ್ಯಯನದಲ್ಲಿ:ಬಿಂದು ಸಾಸನೂರ, ಲಕ್ಷ್ಮೀ ಪವಾರ ಶಿಕ್ಷಣಶಾಸ್ತ್ರದಲ್ಲಿ:ಮೀನಾಕ್ಷಿ ರಾಠೋಡ್, ಪವಿತ್ರ ಕೋಳಿ, ಜಯಶ್ರೀ ಲೋಣಗೇರಿ, ರೇಣುಕಾ ಹುಡೇದರಾಜ್ಯಶಾಸ್ತ್ರದಲ್ಲಿ:ಅಂಬಿಕಾ ವಡ್ಡರ ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಘದ ಅಧ್ಯಕ್ಷರಾದವೀರೂಪಾಕ್ಷಯ್ಯ ಹಿರೇಮಠ (ಹಂಪಿ ಮಠ), ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿಯ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
