ತಾಳಿಕೋಟಿ:ಸಮೀಪದ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು ವಿದ್ಯಾಸಂಸ್ಥೆಯ ,ಎಮ್ಎಮ್ಎಸ್ ಎ ಪದವಿ ಪೂರ್ವಕಾಲೇಜು ಈ ವರ್ಷದ ಪಿಯುಸಿ ಫಲಿತಾಂಶಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ.

ವಿಜ್ನಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ರಷ್ಟು ಫಲಿತಾಂಶ ಸಾಧಿಸಿದ್ದು, ಒಬ್ಬರೂ ಅನುತ್ತೀರ್ಣರಾಗಿಲ್ಲವೆಂಬುದು ವಿಶೇಷವಾಗಿದೆ.ವಿಜ್ನಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಧಾ ವಜ್ಜಲ 97% ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಸಲ್ಮಾ ಶೇಖ 97% ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ ಮತ್ತು ಸೋಪಿಸಾಬ 96% ಅಂಕಗಳೊಂದಿಗೆ ತೃತಿಯ ಸ್ಥಾನ ತೆಗೆದುಕೊಂಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಅಭಿಷೇಕ ಬಿರಾದಾರ 96% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ, ವಿನಯ್ತಿವಾರಿ 94.16% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಪ್ರಿಯಾಂಕ ಪಟೇದಾರ 93.16% ಅಂಕಗಳೊಂದಿಗೆ ತೃತಿಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಅಕ್ಷತಾ ಸಜ್ಜನ 89 % ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಅಬ್ದುಲ್ ಮಜೀದ್ 84% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಭರತಕುಮಾರ ಮದರಿಮಠ 84% ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
