ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರು: ಸಾಹಿತಿ ಪತ್ತಾರ

ತಾಳಿಕೋಟೆ : ಒಂದು ಆರೋಗ್ಯಪೂರ್ಣ ಸಮಾbಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಅವರು ತಮ್ಮನ್ನು ಜ್ಞಾನದಿಂದ ಗುರುತಿಸಿಕೊಳ್ಳುವವರಾಗಬೇಕು ಎಂದು ಜೆ ಎಸ್ ಜಿ ಪದವಿಪೂರ್ವ ಕಾಲೇಜ್ ಕಾರ್ಯದರ್ಶಿ, ಸಾಹಿತಿ ಶ್ರೀಕಾಂತ ಪತ್ತಾರ ಹೇಳಿದರು.

ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಎಸ್‌ಕೆ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ ಏಳು ದಿನಗಳ ಎನ್ಎಸ್ಎಸ್ ವಿಶೇಷ ಶಿರದಲ್ಲಿ “ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ” ಎಂಬ ವಿಷಯದ ಮೇಲೆ ಅವರು ಶನಿವಾರ ಮಾತನಾಡಿದರು.

ಈ ವಿಶೇಷ ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ನಗರದ ಆಶ್ರಯ ಕಾಲೋನಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.

ವಿವಿ ಸಂಘದ ನಿರ್ದೇಶಕ ಮಾತನಾಡಿ ಶಿಕ್ಷಕರಾದವರು ಉತ್ತಮ ತಯಾರಿಯೊಂದಿಗೆ ಪಾಠಗಳಲ್ಲಿ ಮುಂದುವರೆಯಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಮಾರ್ಗದರ್ಶಕರಾದ ನವೀನ್ ಅವರು, ಶಿಕ್ಷಕ ವಿದ್ಯಾರ್ಥಿಗಳ ನಡುವೆ ಉತ್ತಮ ಗೌರವಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕರಾದ ಯು.ಎನ್.ಮಂಗೊಂಡ ಅವರು ಮಾತನಾಡಿ, ಶಿಕ್ಷಕರು ಹಣಕ್ಕಾಗಿ ದುಡಿಯದೆ ಮಕ್ಕಳ ಹಿತಕ್ಕಾಗಿ ದುಡಿಯವರಾಗಿದ್ದು ಅವರು ನಿಸ್ವಾರ್ಥ ಸಮಾಜ ಸೇವಕರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎ.ಐ.ಜಾಲವಾದಿ ಚೇರ್ಮನ್ನರು ಎಸ್. ಕೆ ಉಚಿತ ಪ್ರಸಾದ ನಿಲಯ ತಾಳಿಕೋಟಿ, ಎಸ್.ಎಸ್. ಸರೂರ ನಿರ್ದೇಶಕರು ವೀ.ವಿ ಸಂಘ ತಾಳೆಕೋಟಿ ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಪಾರ್ವತಿ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಮಲ್ಲಿಕಾ ಹಾಗೂ ತಂಡ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಮಹಾಲಿಂಗ ಸ್ವಾಗತಿಸಿ ಪರಿಚಯಿಸಿದರು. ಉಮಾಶ್ರೀ ಪುಷ್ಪಾರ್ಪಣೆ ನೆರವೇರಿಸಿದರು. ಸಿದ್ದಪ್ಪ ಮುರಾಳ ವಂದನಾರ್ಪಣೆ ಸಲ್ಲಿಸಿದರು. ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಎ.ಎ. ಗಂಗನಗೌಡರ, ಕಾರ್ಯದರ್ಶಿಗಳಾದ ರೇಷ್ಮಾ ಚಲವಾದಿ, ಒಕ್ಕೂಟ ಪ್ರತಿನಿಧಿ ಶಿವರಾಜ ಹಾಗೂ ಪಾರ್ವತಿ ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!