ರಂಗ ಚತುರೆ ಮಾಲತಿಶ್ರೀ ಗೆ ಗೌರವ ಸನ್ಮಾನ

ವಿಜಯ ಸಿಂಧೂರ, ಹುಬ್ಬಳ್ಳಿ

ಉತ್ತರ ಕರ್ನಾಟಕ ರಂಗಭೂಮಿಗೆ ಹೆಚ್ಚು ಆದ್ಯತೆ ನೀಡುವ ಜೊತೆಗೆ ಹಲವು ಕಲಾವಿದರಿಗೆ ಪೋಷಕವಾಗಿ ನಿಂತಿದೆ ಎಂದು ಹಿರಿಯ ಚಲನಚಿತ್ರ ನಿರ್ದೇಶಕ,ಕಲಾವಿದ, ಸಾಹಿತಿ,ಪತ್ರಕರ್ತರಾದ ಹಿರಿಯೂರು ರಾಘವೇಂದ್ರ ಹೇಳಿದರು.

ಅವರು ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ರಂಗ ಚತುರೆ ಮಾಲತಿಶ್ರೀ ಮೈಸೂರು ಅವರಿಗೆ ಭವಾನಿ ನಗರದಲ್ಲಿ ಏರ್ಪಡಿಸಿದ ಗೌರವ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ರಂಗಕರ್ಮಿ, ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುತ್ತ ಮನೆಮಾತಾಗಿರುವ ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರು ಅವರಿಗೆ ಹುಬ್ಬಳ್ಳಿ ನೆಲದಲ್ಲಿ ಸನ್ಮಾನಿಸುತ್ತಿರುವುದು ಸಂತಸದ ವಿಷಯ. ಹುಬ್ಬಳ್ಳಿ ಧಾರವಾಡ ಈ ನೆಲದಲ್ಲಿ ಹಲವಾರು ಪ್ರತಿಭೆಗಳು ಮಿಂಚುತ್ತಿವೆ.ಅವುಗಳಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ ಎಂದ ಅವರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಹಲವಾರು ನಟ,ನಟಿಯರು ಹಾಗೂ ತಾಂತ್ರಿಕ ವರ್ಗದವರು ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನನ್ನ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಈ ಭಾಗದ ಕಲಾವಿದರನ್ನು ಬಳಸಿಕೊಂಡಿರುವೆ ಎಂದರು.

ಹಿರಿಯ ನಟಿ ಮಾಲತಿಶ್ರೀ ಮೈಸೂರು ಅವರನ್ನು ಪ್ರತಿಷ್ಠಾನದಿಂದ ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾಲತಿಶ್ರೀ ಮೈಸೂರು ದ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದೇನೆ.ಉತ್ತರ ಕರ್ನಾಟಕದ ಜನರ ಋಣ ತೀರಿಸಲು ಆಗದು. ರಂಗಭೂಮಿಯ ಪಯಣದ ನೆನಪಿಗಾಗಿ ಗೋಕಾಕದಲ್ಲಿ ಪ್ರತಿ ವರ್ಷ ರಂಗಕರ್ಮಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿರುವೆ ಎಂದು ಹೇಳಿ ನಿಮ್ಮೆಲ್ಲರ ಆಶೀರ್ವಾದ ಕಲಾವಿದರ ಮೇಲೆ ಇರಲಿ ಎಂದರು.

ಸನ್ಮಾನಿತರ ಕುರಿತು ಪ್ರೊ.ವೆಂಕಟೇಶ ಚೌತಾಯ್, ಚಿತ್ರ ಕಲಾವಿದ ಗೋವರ್ಧನ್ ಮಾತನಾಡಿದರು. ಬಸವರಾಜ ಕರ್ಕಿ, ರಾಘವೇಂದ್ರ ರಾಯ್ಕರ್, ಕವಿತಾ ಹಿರೇಮಠ ಚಂದ್ರಹಾಸ ವೇರ್ಣೇಕರ್ ಇತರರು ಇದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ , ಡಾ. ವೀರೇಶ್ ಹಂಡಿಗಿ ಸ್ವಾಗತಿಸಿದರು. ಪ್ರತಿಷ್ಠಾನದ ಸಾಹಿತ್ಯ ಸಮಿತಿಯ ಡಾ.ಪ್ರಭು ಗಂಜಿಹಾಳ್ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *