ಪ್ರಜಾಸೌಧ ಸ್ಥಳ ವಿರೋಧಿಸಿ 18ನೇ ದಿನಕ್ಕೂ ಮುಂದುವರೆದ ಧರಣಿ ಸತ್ಯಾಗ್ರಹ – ವಿವಿಧ ಸಂಘ ಸಂಸ್ಥೆಗಳ ಬೆಂಬಲ

ತಾಳಿಕೋಟೆ: ತಾಲೂಕಿನ ಮೈಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟೆ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸಬೇಕು ಎಂದು ಆಗ್ರಹಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 17ನೇ ದಿನಕ್ಕೆ ತಲುಪಿತು.

ಈ ವೇಳೆ ತಾಳಿಕೋಟಿಯ ಬಸವೇಶ್ವರ ಮಾರ್ಕೆಟ್ ಯಾರ್ಡ್ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ವ್ಯಾಪಾರಸ್ಥರು ಹಾಗೂ ನೌಕರರ ಸಂಘದವರು ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವ್ಯಾಪಾರಸ್ಥ ಮುರಿಗೆಪ್ಪ ಸರಶೆಟ್ಟಿ ಹಾಗೂ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಬಡಿಗೇರ, ಈಗಾಗಲೇ ಪ್ರಜಾಸೌಧಕ್ಕೆ ನಿಗದಿಪಡಿಸಿರುವ ಸ್ಥಳವು ತಾಳಿಕೋಟೆ ಪಟ್ಟಣದಿಂದ ಸುಮಾರು ಐದ ರಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಇದರಿಂದ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ತಾಳಿಕೋಟೆ ಪಟ್ಟಣದಲ್ಲಿರುವ ಇರುವ ಸರ್ಕಾರಿ ಜಾಗದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಬೇಕು. ಈಗಾಗಲೇ ಗುರುತಿಸಿರುವ ಸ್ಥಳವನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ತಾಳಿಕೋಟೆ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣವಾಗುವವರೆಗೆ ತಮ್ಮ ಸಂಘದ ಹಿರಿಯರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಬಾಬು ಹಜೇರಿ, ವಿಶ್ವನಾಥ ಬಿದರಕುಂದಿ, ಗುರುಸಂಗ ಕಶೆಟ್ಟಿ, ಐ.ಬಿ. ಬೆಳೆಬಾವಿ, ಬಿ.ಎಂ. ಪಾಟೀಲ, ಎ.ಐ. ಚಿನಗುಡಿ, ಎಸ್.ವೈ. ಅನೆಸೂರ, ಖಾಸ್ಗತೇಶ್ವರ ಟ್ರೇಡಿಂಗ್ ಕಂಪನಿ, ಜಗದೀಶ ಬೆಳಬಾವಿ, ಪ್ರಭು ಕತ್ತಿ, ಬಸವರಾಜ ಪಂಚಗಲ, ಐ.ಬಿ. ಮೈಲೇಶ್ವರ, ಕವಿತಾ ಟ್ರೇಡರ್ಸ್, ಚಂದ್ರು ದುಮಗುಂಡಿ, ಎಂ.ಸಿ. ಕತ್ತಿ, ಆನಂದ ಪಿಸಾಳೆ, ಅಂಬರೀಶ ಕಶಟ್ಟಿ, ಜಿ.ಜಿ. ಕೋರಳ್ಳಿ, ಪ್ರಭು ಬೆಳಬಾವಿ, ಶ್ರೀಶೈಲ್ ಸಾಸನೂರ, ಈರಯ್ಯ ಹಿರೇಮಠ, ಎಂ.ಎಸ್. ಬಡಿಗೇರ, ಎನ್.ಎಸ್. ಕಲ್ಲೂರ, ನಾಗಪ್ಪಗೌಡ ಚಿನಗುಡಿ, ಬಾಬೂ ಟ್ರೇಡರ್ಸ್, ಸಿದ್ದಲಿಂಗ ಮೈಲೇಶ್ವರ, ನಾಗರಾಜ್ ಬಳಗಗಾರ, ಜಿ.ಎಸ್. ಜಮ್ಮಲದಿನ್ನಿ, ಕಾಶಿನಾಥ್ ಕುಂಬಾರ, ರಾಮಚಂದ್ರ ಜಾದವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮೆಹೆಬೂಬ ಚೋರಗಸ್ತಿ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಯೂರ ಪಾಟೀಲ, ರಾಗು ಮಾನೆ, ನೀಲಕಂಠ ಕೊಣ್ಣೂರ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ, ಅಮಿತ್ ಮನಗೂಳಿ, ಮಹೇಶ ಚಲವಾದಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ ಸೇರಿದಂತೆ ಪಟ್ಟಣದ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *