ತಾಳಿಕೋಟೆಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳ ನೇಮಕ


ತಾಳಿಕೋಟೆ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ), ನಾಗವಾರ ಸ್ಥಾಪಿತ ಸಂಘಟನೆಯ ವತಿಯಿಂದ ತಾಳಿಕೋಟಿ ತಾಲೂಕಿನಲ್ಲಿ ತಾಲೂಕು, ಹೋಬಳಿ, ನಗರ ಶಾಖೆಗಳು ಹಾಗೂ ತಾಲೂಕು ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.


ಕಾರ್ಯಕ್ರಮವು ಬೆಳಗಾವಿ ವಿಭಾಗೀಯ ಸಂಚಾಲಕರಾದ ದೇವೇಂದ್ರ ಹಾದಿಮನಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಸದಸ್ಯರಾದ ರಾವುತ್ ತಳಕೇರಿ, ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕರಾದ ಹುಯೋಗಿ ತಳ್ಳೋಳ್ಳಿ, ವಿಜಯಪುರ ಜಿಲ್ಲಾ ಸಂಚಾಲಕರಾದ ಗುರುರಾಜ್ ಗುಡಿಮನಿ ಹಾಗೂ ಸಂಘಟನಾ ಸಂಚಾಲಕರಾದ ಪರಶುರಾಮ ಕಟ್ಟಿಮನಿ ಸೇರಿದಂತೆ ಕಾಮೇಶ ಭಜಂತ್ರಿ, ಪವಡೆಪ್ಪ ಹುಲ್ದೂರು ಮತ್ತು ಕಾಳಪ್ಪ ಮಸಿಬಿನಾಳ ಉಪಸ್ಥಿತರಿದ್ದರು.


ಇದೇ ವೇಳೆ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ನಾಗೇಶ್ ಕಟ್ಟಿಮನಿ ಮತ್ತು ಜಿಲ್ಲಾ ಸಂಘಟನಾ ಸಂಚಾಲಕರಾದ ಮಾಂತೇಶ್ ಕಟ್ಟಿಮನಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕು ಶಾಖೆಯ ಸಂಚಾಲಕರಾಗಿ ಮಹೇಶ್ ಚಲವಾದಿ ಅವರನ್ನು ಆಯ್ಕೆ ಮಾಡಲಾಗಿದ್ದು, ಸಂಘಟನಾ ಸಂಚಾಲಕರಾಗಿ ಬಸವರಾಜ್ ತಳವಾರ್, ಬಸವರಾಜ್ ಉತಾಳೆ, ದೇವು ಗೊಟಗಣಕಿ, ಭೀಮರಾವ್ ರತ್ನಾಕರ್, ಚಂದ್ರು ದೊಡ್ಡಮನಿ ಮತ್ತು ಯಮನಪ್ಪ ಮಾದರ್ ಅವರನ್ನು ನೇಮಕ ಮಾಡಲಾಯಿತು. ಖಜಾಂಚಿಯಾಗಿ ಮಾಯಪ್ಪ ಮಾದರ್ ಆಯ್ಕೆಯಾದರು.


ಹೋಬಳಿ ಶಾಖೆಯ ಸಂಚಾಲಕರಾಗಿ ಪರಶುರಾಮ ಬೋಳವಾಡ ಹಾಗೂ ಸಂಘಟನಾ ಸಂಚಾಲಕರಾಗಿ ಕಾಶಿನಾಥ್ ತುಂಬಿಗಿ, ಸಾಬಣ್ಣ ಗುತ್ತಿಹಾಳ, ಕಾಳಪ್ಪ ಬಡಿಗೇರ್, ಅಪ್ಪು ಚಲವಾದಿ ಮತ್ತು ಶರಣು ನಡುವಿನಮನಿ ನೇಮಕಗೊಂಡರು.


ನಗರ ಶಾಖೆಯ ಸಂಚಾಲಕರಾಗಿ ಶ್ರೀನಿವಾಸ್ ಕುಲಕರ್ಣಿ ಹಾಗೂ ಸಂಘಟನಾ ಸಂಚಾಲಕರಾಗಿ ಪರಶುರಾಮ ನವದಗಿ, ಮುತ್ತು ಮತ್ತು ಆನಂದ ಬೋಳವಾಟ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ತಾಳಿಕೋಟಿ ತಾಲೂಕು ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕರಾಗಿ ನಾಗೇಶ್ ಚಲವಾದಿ ಅವರನ್ನು ನೇಮಕ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಸಂಘಟನೆಯ ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!