ರಾಜ್ಯದಲ್ಲಿ ಅಂಗನವಾಡಿ ಬಲ ಕುಗ್ಗುತ್ತಿದೆ: ಮಹೇಶ ಹಿರೇಮಠ

ವಿಜಯ ಸಿಂಧೂರ, ರೋಣ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳಾಯಿತು ಸರ್ಕಾರ ಕೂಡ ICDS 50ರ ಕಾರ್ಯಕ್ರಮವನ್ನು ನಡೆಸಿದೆ. ಪಾಲನೆ-ಪೋಷಣೆ-ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ ಮತ್ತು 2013 ರ ಆಹಾರ ಭದ್ರತಾ ಕಾಯ್ದೆ 2009 ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನ ಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ ಸುಪ್ರಿಂ ಕೋರ್ಟ್ ಮತ್ತು ಗುಜರಾತ್ ಹೈ ಕೋರ್ಟ್‌ಗಳು ಇವರನ್ನು 3 ಮತ್ತು 4ನೇ ಗ್ರೇಡ್ ನೌಕರರಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದೆ ಎಂದು ಸಿಐಟಿಯು ಮುಖಂಡ ಮಹೇಶ ಹಿರೇಮಠ ಒತ್ತಾಯಿಸಿದರು

ಅವರು ಶನಿವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರೋಣ ತಾಲೂಕಾ ಸಮಿತಿ ವತಿಯಿಂದ ಶಾಸಕ ಜಿ.ಎಸ್.ಪಾಟೀಲರಿಗೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲರ ಮೂಲಕ ಮನವಿ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನ ಗೊಳಿಸಲು ಶಿಕ್ಷಣ ಇಲಾಖೆ 10000 ಶಾಲೆಗಳಲ್ಲಿ LKG-UKG ಪ್ರಾರಂಬಿಸಲು 4 ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಮ.ಮ.ಆ. ಇಲಾಖೆ ಕಡೆಹಾಕಿ ಅಂಗನವಾಡಿ ಕೇಂದ್ರಗಳಲ್ಲಿ LKG-UKG ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ ಇದೊಂದು ಐತಿಹಾಸಿಕ ತೀರ್ಮಾನ ಆದರೂ ಇದಕ್ಕೆ ಬೇಕಾಂದಂತಹ ಹಣಕಾಸು ಬಿಡುಗಡೆ ಇಲ್ಲದೆ ನಿಧಾನ ಗತಿಯಲ್ಲಿ ಇದೆ ಆದರೆ ಶಿಕ್ಷಣ ಇಲಾಖೆಯಲ್ಲಿ ಎಲ್ಲೆಡೆ LKG-UKG ತೆರೆಯಲು ಅಂಗನವಾಡಿ ಪಲಾನುಭವಿಗಳನ್ನು ಕಸಿಯಲು ಮುಂದಾಗಿ ಯೋಜನೆಯನ್ನು ದುರ್ಬಲ ಗೊಳಿಸಲಾಗುತ್ತಿದೆ ಎಂದು ದೂರಿದರು.

ಈ ಯೋಜನೆಯ ಕೆಲಸಗಳಲ್ಲದೆ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜಾರಿ ಮಾಡುವಲ್ಲಿ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆಯನ್ನ ಜನತೆಗೆ ತಲಪಿಸುವ ಕೆಲಸದಲ್ಲಿ ಸಂಪೂರ್ಣವಾಗಿ ಸರ್ಕಾರಕ್ಕೆ ಬೆನ್ನಲುಬಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 15,000-10,000 ಇನ್ನೂ ಹೆಚ್ಚಳ ಮಾಡಲು ಮುಂದಾಗಲಿಲ್ಲ ಎಂದರು

ರಾಜ್ಯದಲ್ಲಿ ಈ ಬಾರಿ ಬಜೆಟ್‌ನಲ್ಲಿ ತಮ್ಮ ಸರ್ಕಾರ ನೀಡಿದ ಭರವಸೆಯನ್ನು ಪೂರ್ಣಗೊಳಿಸಲು ಸಾದ್ಯವಾಗಲಿಲ್ಲ. 1948 ರ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ 4 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು ಎಂದು ತಿಳಿಸಿದರೂ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡಲು ಮುಂದಾಗಿಲ್ಲ ಎಂದರು

ತಾಲ್ಲೂಕ ಸಮಿತಿ ರೋಣ ಬೇಡಿಕೆಗಳು :

  1. 6 ವರ್ಷದೊಳಗಿನ ಮಕ್ಕಳು ICDS ನಡೆಯಲ್ಲಿರುವುದನ್ನು ಖಾತ್ರಿ ಪಡಿಸಿ.

ICDS ಯೋಜನೆ ಪ್ರಾರಂಭವಾಗಿರುವುದೇ 6 ವರ್ಷದೊಳಗಿನ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರದ ಮುಖಾಂತರ ಆಹಾರ, ಆರೋಗ್ಯ ಮತ್ತು ಶಿಕ್ಷಣ ಕೊಡಲಾಗುತ್ತಿದೆ.

ಇಂದಿನ ಸಾಮಾಜಿಕ ವ್ಯವಸ್ಥೆಗನುಗುಣವಾಗಿ ಅಂಗನವಾಡಿ ಕೇಂದ್ರಗಳು ಬಹಳಷ್ಟು ವೈಜ್ಞಾನಿಕವಾಗಿ ಮುಂದುವರೆದೂ ಕೆಲಸ ಮಾಡುತ್ತಿವೆ. ಈ ಕೇಂದ್ರಗಳಲ್ಲಿ ಇಂದು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಲಾಗುತ್ತಿದೆ. 2025 ನವೆಂಬರ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳು 5,000 ಅಂಗನವಾಡಿ ಕೇಂದ್ರಗಳಲ್ಲಿ LKG-UKG ಯನ್ನು ಪ್ರಾರಂಭಿಸಲು ಘೋಷಿಸಿ 12/11/2025 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶ ಮಾಡಿದೆ.

ಶಿಕ್ಷಣ ಇಲಾಖೆ 2025 ರಲ್ಲಿ 5,000 ಸರ್ಕಾರಿ ಶಾಲೆಯಲ್ಲಿ LKG-UKG ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ-1,105 ಶಾಲೆ, ಪಿ.ಎಮ್.ಶ್ರೀ-126. KKRDB-1,126, ಮ್ಯಾಗ್ನೆಟ್-1,699, ಸೇರಿದಂತೆ-4,056 ಶಾಲೆಗಳಲ್ಲಿ LKG-UKG ನಡೆಸಲು ಅನುಮತಿ ನೀಡಿದೆ.

ಈ ಶಾಲೆಗಳಿಗೆ 4 ರಿಂದ 5 ವರ್ಷದ ಮಕ್ಕಳು ಒಂದು ಶಾಲೆಗೆ 20 ರಿಂದ 40 ಮಕ್ಕಳು ಮಧ್ಯಾಹ್ನದ ಊಟ 418 ಕ್ಯಾಲೋರಿ, 8.7 ಗ್ರಾಂ ಪ್ರೋಟಿನ್ ಇರುವ ಆಹಾರ. ಕೊಡಬೇಕು ಎಂಬ ನಿಯಮಗಳನ್ನು ರೂಪಿಸಿಕೊಂಡಿದ್ದಾರೆ.

ಹಾಗೆಯೇ ಶಾಲಾ ಕಾಂಪೌಂಡ್ ನೊಳಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಇದನ್ನು ಪ್ರಾರಂಭಿಸಲಾಗುತ್ತಿದೆ ಎಂದು ನಡಾವಳಿಯಲ್ಲಿ ಹೇಳಿ 14/14/2025 ರಲ್ಲಿ ಹೇಳಿದ ಆದೇಶದಲ್ಲಿ ಹೇಳಲಿಲ್ಲ. ಆದ್ದರಿಂದ ಇಡೀ ರಾಜ್ಯದಲ್ಲಿ ತಾಲಾ ಕಾಂಪೌಂಡ್ ಅಲ್ಲದೇ ಎಲ್ಲಡೆ ಪ್ರಾರಂಭಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ.

ಆದ್ದರಿಂದ 14/11/2025 ಶಿಕ್ಷಣ ಇಲಾಖೆ ಮಾಡಿರುವ ಆದೇಶ ರದ್ದು ಮಾಡಬೇಕು. ಬಜೆಟ್‌ನಲ್ಲಿ ಘೋಷಿಸಿರುವಂತೆ 800 ಪಬ್ಲಿಕ್ ಶಾಲೆಗಳಲ್ಲಿ LKG-UKG ಪ್ರಾರಂಭಿಸುವಾಗ ಆ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಬೇಕು.

ರಾಜ್ಯದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ LKG-UKG ಪ್ರಾರಂಭಿಸಲು ಆದೇಶಿಸಿ ಅಗತ್ಯವಿರುವ ಬಜೆಟ್‌ನ್ನು ಮೀಸಲಿಡಬೇಕು ಎಂದು ವಿನಂತಿಸುತ್ತೇವೆ.

  1. ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ESI, PFನ್ನು ಕೊಡಬೇಕು.
  2. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ BS ಪರವಾನಿಗೆ ರದ್ದು ಮಾಡಿ ಸ್ಥಳೀಯವಾಗಿ ಸಿಗುವ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ‘ಸರಬರಾಜು ಮಾಡಬೇಕು.
  3. ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು ಎಂಬ ಮನವಿಯನ್ನು ಸಲ್ಲಿಸಿದರು

Leave a Reply

Your email address will not be published. Required fields are marked *