ಪತ್ರಕರ್ತರಿಗೆ ಪ್ರಶಸ್ತಿ ಠೇವಣಿ ಶಾಸಕ ಜಿ.ಎಸ್.ಪಾಟೀಲ

ವಿಜಯ ಸಿಂಧೂರ,ಗದಗ

ಪತ್ರಕರ್ತರು ಸಮಾಜದ ಕಣ್ಣು, ಸತ್ಯದ ಅನ್ವೇಷಕರು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದ್ದಾರೆ. ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತಾರೆ. ನಿಖರವಾದ ಮಾಹಿತಿ ಸಂಗ್ರಹ, ವರದಿಗಾರಿಕೆ, ಸಂಪಾದನೆ ಮತ್ತು ಜನರಿಗೆ ವಿಷಯಗಳನ್ನು ತಲುಪಿಸುವ ಮೂಲಕ ಜಾಗೃತಿ ಮೂಡಿಸುವ ಮಹತ್ತರ ಪಾತ್ರ ಅವರದು. ಅವರಲ್ಲೇ ಉತ್ತಮ ಕೆಲಸವನ್ನು ಮಾಡುವವರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಲು ರೂ.1 ಲಕ್ಷ ಠೇವಣಿ ನೀಡುವೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ವಾಗ್ದಾನ ಮಾಡಿದರು.

ಅವರು ಶನಿವಾರ ಗಧಗ ನಗಲಧ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಮಾತೋಶ್ರೀ ಬಸಮ್ಮ ಸಂಗನಗೌಡ ಪಾಟೀಲ ಅವರ 22 ನೇ ಸ್ಮರಣೋತ್ಸವದಲ್ಲಿ ಘೋಷಣೆ ಮಾಡಿದ್ದಾರೆ.

ನಿಖರ ಮತ್ತು ಸತ್ಯಾಂಶಗಳನ್ನು ಸಾರ್ವಜನಿಕರಿಗೆ ತಿಳಿಸುವುದು.
ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು:ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು.
ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಪ್ರಶಸ್ತಿಗೆ ಠೇವಣಿ ಇಡುವುದು ನನಗೆ ಹೆಮ್ಮೆಯ ವಿಷಯ ಎಂದರು

ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುವುದು.ಸಂಕೀರ್ಣ ವಿಷಯಗಳನ್ನು ಸರಳವಾಗಿ ಜನರಿಗೆ ತಲುಪಿಸುವುದು. ತನಿಖಾ ಪತ್ರಿಕೋದ್ಯಮದ ಮೂಲಕ ಸತ್ಯವನ್ನು ಹೊರತರುವುದು.
ಒಟ್ಟಾರೆಯಾಗಿ, ಪತ್ರಕರ್ತರು ಸಮಾಜವನ್ನು ಜಾಗೃತಗೊಳಿಸುವ ಮತ್ತು ಸತ್ಯದ ಹಾದಿಯಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು

ಕಾನಿಪ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಪತ್ರಕರ್ತರ ಸೇವೆಯನ್ನು ಗೌರವಿಸಲು ರೋಣ ಶಾಸಕರಾದ ಜಿ.ಎಸ್.ಪಾಟೀಲರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ (KUWJ) ರೂ.1 ಲಕ್ಷ ರೂಪಾಯಿ ಠೇವಣಿ ಘೋಷಿಸಿದ್ದಾರೆ. ಈ ಠೇವಣಿಯ ಬಡ್ಡಿಯಿಂದ ಪ್ರತಿವರ್ಷ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುವುದು, ಇದು ಅವರ ಆತ್ಮೀಯ ಬಾಂಧವ್ಯದ ಸಂಕೇತವಾಗಿದೆ ಎಂದರು

ಕಾನಿಪ ಜಿಲ್ಲಾ ಕಾರ್ಯದರ್ಶಿ ಶರಣು ದೊಡ್ಡೂರ ಮಾತನಾಡಿ,
ರೂ.1 ಲಕ್ಷ ಠೇವಣಿ ನಿರ್ಧಾರ ಘೋಷಣೆ ಮಾಡಿರುವ ಆತ್ಮೀಯ, ಪತ್ರಕರ್ತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶಾಸಕ ಜಿ.ಎಸ್.ಪಾಟೀವರಿಗೆ ಸಮಸ್ತ ಪತ್ರಕರ್ತರಿಂದ ತುಂಬು ಹೃದಯದ ಧನ್ಯವಾದಗಳು.
ಅವರ ಠೇವಣಿ ಹಣದಿಂದ ಬರುವ ಬಡ್ಡಿ ಹಣವನ್ನು ಅವರೇ ಸೂಚನೆ ನೀಡಿರುವಂತೆ ಮಾತೋಶ್ರೀ ಬಸಮ್ಮತಾಯಿ ಪಾಟೀಲ ಅವರ ಹೆಸರಿನಲ್ಲಿ ವಾರ್ಷಿಕ ಪತ್ರಕರ್ತ ಪ್ರಶಸ್ತಿ ಸ್ಥಾಪನೆ ಮಾಡಲಾಗುವುದು ಎಂದರು

ಅಭಿಪ್ರಾಯ:
ಪತ್ರಕರ್ತರ ಕಾರ್ಯವನ್ನು ಪ್ರೋತ್ಸಾಹಿಸುವ ಮತ್ತು ಗೌರವಿಸುವ ನಿಟ್ಟಿನಲ್ಲಿ ಮಾತೋಶ್ರೀ ಬಸಮ್ಮತಾಯಿ ಅವರ ಸವಿ ನೆನಪು ಶಾಶ್ವತವಾಗಿ ಉಳಿಯುವಂತೆ ಈ ಕ್ರಮ ತೆಗೆದುಕೊಂಡಿರುವ ರೋಣ ಶಾಸಕರಾದ ಜಿ.ಎಸ್.ಪಾಟೀಲರ ಹ್ರದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾನಿಪ ಮಾಜಿ ಅಧ್ಯಕ್ಷ ಎಚ್.ಎಮ್.ಶರೀಪನವರ ಪತ್ರಿಕೆಗೆ ತಿಳಿಸಿದ್ದಾರೆ

ನಿರೂಪಣೆ ಮಾಡುತ್ತಿದ್ದ ಕಕಾನಿಪ ಸಂಘದ ಗದಗ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಆನಂದಯ್ಯ ವಿರಕ್ತಮಠ ಅವರು ಈ ಬಗ್ಗೆ ಮಾನ್ಯ ಶಾಸಕರ ಗಮನಕ್ಕೆ ತಂದು, ಬಹುದಿನಗಳ ಬೇಡಿಕೆ ಕಾರ್ಯರೂಪಕ್ಕೆ ಬರುವಂತೆ ಮಾಡಿದ ಅವರಿಗೂ ವಿಶೇಷ ಅಭಿನಂದನೆಗಳು.

ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕವು ಅಭಿನಂದಿಸಲಿದೆ.

Leave a Reply

Your email address will not be published. Required fields are marked *