ರೋಣ:ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಹಿರೇಮಠದ ಲೋಕಾರ್ಪಣೆ,ಶ್ರೀಮದ್ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರು ರಂಭಾಪುರಿ ಅಡ್ಡಪಲ್ಲಕಿ ಮಹೋತ್ಸವ ಲಿಂ.ಶ್ರೀ ಷ.ಬ್ರ ರೇಣುಕಾಚಾರ್ಯ ಸ್ವಾಮಿಗಳ ಕರ್ತೃಗದ್ದುಗೆ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ,ಸಾಮೂಹಿಕ ವಿವಾಹ ಧಾರ್ಮಿಕ ಕಾರ್ಯಕ್ರಮಗಳು ದಿ.೧೬ ರಿಂದ ದಿ.೨೦ ವರಗೆ ಜರಗುತ್ತವೆ.

ಮಾ.೧೬ ರಂದು ಬೆಳ್ಳಿಗ್ಗೆ ೧೦ ಗಂಟೆಗೆ ಶ್ರೀಮದ್ರಂಭಾಪುರಿ ಜಗದ್ಗುರವರ ಅಡ್ಡಪಲ್ಲಕಿ ಮಹೋತ್ಸವ ಹಾಗೂ ನೂತನ ಹಿರೇಮಠದ ಲೋಕಾರ್ಪಣೆ ನೆಡೆಯುವದು.೧೧.೩೦ ಕ್ಕೆ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವವರು.
ಕಾರ್ಯಕ್ರಮದ ಸಮ್ಮುಖದಲ್ಲಿ ಬೆನಹಾಳದ ಶ್ರೀ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮಿಗಳು,ಶ್ರೀ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು,ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು,ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು,ಪೂಜ್ಯಶ್ರೀ ಡಾ.ಕಲ್ಲಯ್ಯಜ್ಜನವರು,ಶ್ರೀ ಮಾತಾ ನಂದಿಕೇಶ್ವರಿ ಅಮ್ಮನವರು ಸಮ್ಮುಖ ನೆರವೇರುವುದು.
ದಿ.೧೭,೧೮,೧೯ ರಂದು ಸಂಜೆ ೬.೩೦ ಗಂಟೆಗೆ ಮಹಾತ್ಮರ ಬದುಕು ಬೆಳಕು ಪ್ರವಚನವು ಶ್ರೀ ಶಿವಕುಮಾರ ಸ್ವಾಮಿಗಳು ನಂದಿವೇರಿಮಠ,ಶ್ರೀ ಡಾ.ಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾಶ್ರಮ,ಶ್ರೀ ಮಾತಾ ನಂದಿಕೇಶ್ವರಿ ಅಮ್ಮನವರು,ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು ಅನ್ನದಾನೇಶ್ವರಮಠ,ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಬೃಹನ್ಮಠ,ಶ್ರೀ ಗುರುಪಾದೇಶ್ವರ ಸ್ವಾಮಿಗಳು ಗುಲಗಂಜಿಮಠ,ಶ್ರೀ ಗಂಗಾಧರ ಸ್ವಾಮಿಗಳು ಅಂಕಲಿ ಅಡವಿ ಸಿದ್ದೇಶ್ವರಮಠ,ಶ್ರೀ ಶಾಂತವೀರ ಸ್ವಾಮಿಗಳು ಶಿವಮೂರ್ತೇಶ್ವರಮಠ,ಶ್ರೀ ಶಿವಮೂರ್ತಿ ಸ್ವಾಮಿಗಳು ಫಲಹಾರೇಶ್ವರಮಠ,ಶ್ರೀ ಶಿವಶಾಂತವೀರ ಶರಣರು ಬಳಗಾನೂರ ನೇತೃತ್ವ ವಹಿಸುವವರು.
ದಿ.೨೦ ರಂದು ೧೨.೩೦ ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುವುದು,ಸಂಜೆ ೬.೩೦ ಗಂಟೆಗೆ ಮಹತ್ಮರ ಬದುಕು ಬೆಳಕು ಪ್ರವಚನ ಮಹಾಮಂಗಲ,ರಾತ್ರಿ ೮.೩೦ ಗಂಟೆಗೆ ಅರುಣೋದಯ ಸಾಂಸ್ಕೃತಿಕ ಕಲಾತಂಡ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರುವುದು
