ಪತ್ರಕರ್ತರ ವಾರ್ಷಿಕ ಪ್ರಶಸ್ತಿಗೆ ಶಾಸಕ ಜಿ ಎಸ್ ಪಾಟೀಲ್ ರೂ 1 ಲಕ್ಷ ಘೋಷಣೆ ಸ್ವಾಗತಾರ್ಹ

ಗಜೇಂದ್ರಗಡ ಜಿಲ್ಲೆಯ ಹಾಗೂ ತಾಲೂಕಿನ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಲು ರೂ. 1 ಲಕ್ಷ ರೂ. ಠೇವಣಿ ಇಡಲು ಶಾಸಕ ಜಿ.ಎಸ್. ಪಾಟೀಲ ಅವರು ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದು ಕಕಾನಿಪ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸೈಯದ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತೋಂಟ- ದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಮಾತೋಶ್ರೀ ಬಸಮ್ಮಸಂಗನಗೌಡ ಪಾಟೀಲ ಅವರ 22ನೇ ರೋಣ ಮತಕ್ಷೇತ್ರದ ಶಾಸಕರು, ಸ್ಮರಣೋತ್ಸವದಲ್ಲಿ ಎಂಎಸ್‌ಐಎಲ್‌ ನಿಗಮದ ಅಧ್ಯಕ್ಷರು ಆದ ಜಿ.ಎಸ್. ಪಾಟೀಲ ಅವರು ತಮ್ಮ ತಾಯಿ ಹೆಸರಿನಲ್ಲಿ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರೂ. 1 ಲಕ್ಷ ಠೇವಣ ಇಡುವ ಬಗ್ಗೆ ಘೋಷಿಸಿದ್ದಾರೆ.

ಗದಗ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಒಬ್ಬರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಉದ್ದೇಶದ ಹಿನ್ನಲೆಯಲ್ಲಿ ಶಾಸಕರು ಕೈಗೊಂಡಿರುವ ನಿರ್ಧಾದ ಸ್ವಾಗತಾರ್ಹ ಎಂದು ಸೈಯದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *