ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಇಫ್ತಾರ್ ಕೂಟ

ಗಜೇಂದ್ರಗಡ: ಕೋಮು ಸೌಹಾರ್ದತೆಗೆ ಹೆಸರಾಗಿರುವಸಮೀಪದ ಗೋಗೇರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೌಹಾರ್ದಯುತ ಇಫ್ತಾರ್ ಕೂಟ ನಡೆಯಿತು.

ಕಳೆದ ನಾಲ್ಕು ವರ್ಷದಿಂದ ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟ ಅಯೋಜಿಸುತ್ತಿದ್ದು, ಈ ವರ್ಷವೂ ಪ್ರಾರ್ಥನೆ ಮುಗಿಸಿಕೊಂಡು ಶರಣ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಗ್ರಾಮದ ಮುಸ್ಲಿಂ ಸಮುದಾಯದವರಿಗೆ ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಹಣ್ಣುಗಳನ್ನು ತಿನ್ನಿಸುವ ಮೂಲಕ ಉಪವಾಸ ಬಿಡಿಸಿದರು. ನಂತರ ಎಲ್ಲರೂ ಸೇರಿ ಸಾಮೂಹಿಕವಾಗಿ ಭೋಜನ ಸವಿದರು.ಈ ವೇಳೆ ಗಜೇಂದ್ರಗಡ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ‘ದೇಶ ಸೇರಿದಂತೆ ವಿದೇಶಗಳಲ್ಲಿ ಕೋಮು ಸಾಮರಸ್ಯ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಗೋಗೇರಿ ಗ್ರಾಮದ ಜನರು ಕೋಮು ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿರುವುದು ಮಾದರಿಯಾಗಿದೆ’ ಎಂದರು.

ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಹಣ್ಣುಗಳನ್ನು ತಿನ್ನಿಸುವ ಮೂಲಕ ಉಪವಾಸ ಬಿಡಿಸಿದರು. ನಂತರ ಎಲ್ಲರೂ ಸೇರಿ ಸಾಮೂಹಿಕವಾಗಿ ಭೋಜನ ಸವಿದರು.ಈ ವೇಳೆ ಗಜೇಂದ್ರಗಡ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ‘ದೇಶ ಸೇರಿದಂತೆ ವಿದೇಶಗಳಲ್ಲಿ ಕೋಮು ಸಾಮರಸ್ಯ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಗೋಗೇರಿ ಗ್ರಾಮದ ಜನರು ಕೋಮು ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿರುವುದು ಮಾದರಿಯಾಗಿದೆ’ ಎಂದರು.ಗ್ರಾಮದಲ್ಲಿ ಪ್ರತಿವರ್ಷ ಶರಣ ಬಸವೇಶ್ವರ ಜಾತ್ರೆ, ಅನ್ನದಾನೇಶ್ವರ ಜಾತ್ರೆ, ಹೊನಕೇರಿ ಮಲ್ಲಯ್ಯನ ಜಾತ್ರೆ ತುಳಜಾ ಭವಾನಿ ಜಾತ್ರೆ, ಹುಸೇನ್ ಪೀರಾ ದರ್ಗಾದ ಉರುಸು, ರಂಜಾನ್, ಮೊರಹಂ ಹಬ್ಬಗಳು ನಡೆಯುತ್ತವೆ. ಈ ಎಲ್ಲ ಹಬ್ಬ ಆಚರಣೆಗಳಲ್ಲಿ ಎಲ್ಲ ಜನಾಂಗದವರು ಒಟ್ಟಾಗಿ ಭಾಗವಹಿಸುತ್ತಾರೆ.

Leave a Reply

Your email address will not be published. Required fields are marked *