ಗದಗ ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಇದರ ಜೊತೆಗೆ ರಥೋತ್ಸವದ 50ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸೂಡಿ ಗ್ರಾಮವು ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಪ್ರದೇಶವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರಸಿದ್ಧಿಯಾಗಿದೆ.ಈ ವಿಶೇಷ ಮಹೋತ್ಸವದ ಅಂಗವಾಗಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದೆ ಭಕ್ತರ ಸಮ್ಮುಖದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದೇ ಸಂದರ್ಭದಲ್ಲಿ 50ನೇ ವರ್ಷದ ರಥೋತ್ಸವದ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ನೂತನ ರಥವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಗುತ್ತದೆ. ರಥೋತ್ಸವವು ಗ್ರಾಮಸ್ಥರು ಮತ್ತು ಭಕ್ತರಿಗಾಗಿ ಪ್ರಮುಖ ಧಾರ್ಮಿಕ ಹಬ್ಬವಾಗಿದ್ದು, ಹಲವು ವರ್ಷಗಳಿಂದ ಭಕ್ತಿಭಾವದೊಂದಿಗೆ ಆಚರಿಸಲಾಗುತ್ತಿದೆ.ಮಹೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಕೃಷಿ ಸಮ್ಮೇಳನ, ಮಹಿಳಾ ಜಾಗೃತಿ, ಯುವ ಜಾಗೃತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

06-05-2026 ರಂದು 11-00 ಘಂಟೆಗೆ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ
ಸಂಜೆ 6-30 : ಜಿ. ವಿ. ಕಲಾ ಬಳಗ ಹುಬ್ಬಳ್ಳಿ ಇವರಿಂದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಹಾತ್ಮ ನಾಟಕ ಪ್ರದರ್ಶನ.
07-05-2026 ಗುರುವಾರ ಬೆಳಿಗ್ಗೆ 11-00 ಗಂಟೆಗೆ ಕೃಷಿ ಋಷಿಯ ನೆನಹು ಕಾರ್ಯಕ್ರಮದಲ್ಲಿ ಸಾವಯವ ಕೃಷಿ, ಹೈನು ಅಭಿವೃದ್ಧಿ, ಪರಿಸರ ಜಾಗೃತಿಯ ಅರಿವು
ಸಂಜೆ 6-30 : ಗ್ರಾಮದ ಹಾಗೂ ಸುತ್ತಲಿನ ಗ್ರಾಮದ ಕಲಾವಿದರಿಂದ ಜಾನಪದ-ನೃತ್ಯ ಕಲಾಪ್ರದರ್ಶನ, 08-05-2026 ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆಮಹಿಳಾ ಜಾಗೃತಿ ಸಮಾರಂಭ ಧರ್ಮ-ಪರಂಪರೆ ಕಾರ್ಯಕ್ರಮದಲ್ಲಿ ಆರೋಗ್ಯ-ನೆಮ್ಮದಿಯ ಬದುಕಿಗೆ ಮಹಿಳೆಯ ಪಾತ್ರ, ಉಡಿ ತುಂಬುವ ಕಾರ್ಯಕ್ರಮ
ಸಂಜೆ 6-30 : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಸಾ. ಕೆರಮನೆ ಅವರಿಂದ ದಕ್ಷಯಜ್ಞ ಪ್ರಸಂಗ ಜರುಗುವುದು.
09-05-2026 ಬೆಳಿಗ್ಗೆ 11-00 ಗಂಟೆಗೆ ಯುವ ಜಾಗೃತಿ ಸಮಾವೇಶದಲ್ಲಿ ಯುವಕರಿಗಾಗಿ ವ್ಯಸನಮುಕ್ತ ಸಮಾಜದ ಆಗಿದ್ದು ಯುವಕರಿಗೆ ಪ್ರೇರಣೆಯ-ಶಕ್ತಿ ವರ್ಧನೆಯ ಶಿಬಿರ ಜರುಗುವುದು,
ಸಂಜೆ 6-30 ಕ್ಕೆ ಗಂಗಾವತಿ ಪ್ರಾಣೇಶ್ ಹಾಗೂ ಸಂಗಡಿಗರಿಂದ ಹಾಸ್ಯ ಉತ್ಸವ ಜರುಗುವುದು.
10-05-2026 ಬೆಳಿಗ್ಗೆ 9-00ಪಂಚಪೀಠಾಧೀಶ್ವರರ ಶುಭಾಗಮನ & ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು.ಮದ್ಯಾಹ್ನ 12-00 ಗಂಟೆಗೆ ಧರ್ಮ ಪರಂಪರೆಸಂರಕ್ಷಣೆಯ ಸಮಾರಂಭ ಶ್ರೀಮಠದ ಪ್ರಶಸ್ತಿ ಮತ್ತುನೂತನ ರಥ ಲೋಕಾರ್ಪಣೆ ಸಮಾರಂಭ,ಸಂಜೆ 6-30 : ಬೆಂಗಳೂರಿನ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು.
ವೀರಶೈವ ಧರ್ಮ ಪರಂಪರೆಯ ಮೂಲ ಆಚಾರ್ಯರೇ ಪಂಚಪೀಠದ ಪರಮಾಚಾರ್ಯರು, ಕಾಶೀ ಪೀಠದ ಶಾಖಾಮಠವೇ ಸೂಡಿಯ ಶ್ರೀ ಜುಕ್ತಿಹಿರೇಮಠ, 900 ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀ ಜುಕ್ತಿಹಿರೇಮಠದ ಮೂಲಪುರುಷರು ಇಂದಿನ ವಿಜಯಪುರ ಜಿಲ್ಲೆಯ ಯಳಮಲಿ-ಲಿಂಗದಳ್ಳಿ ಮಸೂತಿಯಿಂದ ಧರ್ಮಪ್ರಸಾರಕ್ಕೆ ಸೂಡಿಗೆ ಎರಡು ಶತಮಾನಕ್ಕಿಂತ ಪೂರ್ವದಲ್ಲಿ ಬಂದವರು. ಈ ಮಠಕ್ಕೆ ಭೌತಿಕ ಆಸ್ತಿಯಿಲ್ಲ. ಆಸಕ್ತಿಯಿಂದ ಶಿಷ್ಯರನ್ನು ಕಟ್ಟಿ ಬೆಳೆಸಿದ ಮಠದ ಪರಂಪರೆ ಇದೆ. ಸೂಡಿಯ ಮಹಾಜನತೆ ಪೂರ್ವಜ ಹಿರಿಯರಿಗೆ, ಮಠದ ಸಂರಕ್ಷಣೆಗೆ, ಅನ್ನ-ಆಶ್ರಯ ನೀಡಿ ಈ ಮಠ ಕಟ್ಟಲು ದಾನ ಗೈಯ್ದವರು. ಪ್ರಸ್ತುತ ಮಠಾಧ್ಯಕ್ಷರಾದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು 14ನೆಯವರು. ಇವರ ಅವಧಿಯಲ್ಲಿ ನೂತನ ಮಠ ಲೋಕಾರ್ಪಣೆ (2017), ಈಗ ನೂತನ ರಥ ಲೋಕಾರ್ಪಣೆಯ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ.ಘಟದಿಂದ ಮಠವೆಂಬುದಕ್ಕೆ ನಮ್ಮ ಜುಕ್ತಿಹಿರೇಮಠವೇ ಸಾಕ್ಷಿ! ಊರಲ್ಲಿರುವ ಸರ್ವರಿಗೂ ಶ್ರೀಮಠದ ಶಿಷ್ಯರಿಗೆ ಸದ್ವಿಚಾರ, ಸಂಸ್ಕಾರ, ಅನ್ನ-ಆಶ್ರಯದ ಜೊತೆಗೆ ಅರಿವಿನ ಜ್ಯೋತಿ ಹಚ್ಚಿದವರು. ಜ್ಯೋತಿಷ್ಯ – ಆಯುರ್ವೇದ ಪಂಡಿತರಾಗಿ ಹೆಸರಾದವರು. ಭಕ್ತರ ಭಿಕ್ಷೆಯೇ ಶ್ರೀಮಠಕ್ಕೆ ಸಂಪತ್ತು. ಇಂದಿನ ಶ್ರೀಗಳ ಸತ್ ಸಂಕಲ್ಪದಂತೆ ಪಂಚಪೀಠಗಳ ಜಗದ್ಗುರುಗಳನ್ನು ಬರಮಾಡಿಕೊಂಡು ಅಡ್ಡಪಲ್ಲಕ್ಕಿ ಮಹೋತ್ಸವದ ಮೂಲಕ ಗ್ರಾಮದ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಿಂದ ದಾಖಲಾಗುವ ಕಾರ್ಯವನ್ನು ಮಾಡುತ್ತಿರುವುದು ನಮಗೆಲ್ಲ ಆನಂದವನ್ನುಂಟು ಮಾಡಿದೆ. ಈ ಸಮಾರಂಭದಲ್ಲಿ ತಾವುಗಳು ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗಬೇಕೆಂದು ನಮ್ಮೆಲ್ಲರ ಇಚ್ಛೆ. ತಾವುಗಳು ಸಹ ತನು-ಮನ-ಧನ ಸಹಾಯ-ಸಹಕಾರವನ್ನು ನೀಡುವಿರೆಂದು ನಂಬಿದ್ದೇವೆ ಎಂದರು.
