ವಿಜಯ ಸಿಂಧೂರ, ರೋಣ
ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ತಾಲೂಕಿನ ಮೆಣಸಗಿ ಗ್ರಾಮದ ರೈತ ನಿಂಗಪ್ಪ ರಾಮಪ್ಪ ಅಮಾತಿ (58) ಮೃತರು. ಇವರ ನಿತ್ಯದಂತೆ ಕ್ರಷಿ ಕಾರ್ಯದಲ್ಲಿ ತೊಡಗಿರುವ ಸಮಯದಲ್ಲಿ ಸಂಜೆ ಆರಂಭವಾದ ಗುಡುಗು, ಸಿಡಿಲು ಅಬ್ಬರದ ಮಳೆಯಿಂದ ಪಾರಾಗಲು ಮನೆಗೆ ತೆರಳುತ್ತಿದ್ದ ವೇಳೆ ರಭಸದಿಂದ ಸಿಡಿಲು ಬಡಿದ ಪರಿಣಾಮ ರೈತ ನಿಂಗಪ್ಪ ಜಮೀನಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.

ಎರಡನೇ ದಿನವೂ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.ಕೆಲವು ಕಡೆ ಗುಡುಗು,ಸಿಡಿಲು ಹಾಗೂ ಆಲಿಕಲ್ಲು ಮಳೆಯಾದ ಪರಿಣಾಮ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ
