ನಗುಮೊಗದ ಒಡೆಯ ಅಪ್ಪು ನೆನಪು ಶಾಸ್ವತ : ಮೊತೆಖಾನ್

ವಿಜಯ ಸಿಂಧೂರ, ರೋಣ

ಸಿನಿ ಪ್ರಿಯರ ನೆಚ್ಚಿನ ಹೀರೋ, ಅಭಿಮಾನಿಗಳಿಗೆ ಪವರ್‌ ಸ್ಟಾರ್‌, ಅಪ್ಪು ಆಗಿ ಮಿಂಚಿರುವ ಪುನೀತ್‌ ರಾಜ್‌ಕುಮಾರ್‌ ಹೆಸರು ಕೇಳುವಾಗಲೇ ಕರುಳು ಹಿಂಡಿದಂತಾಗುತ್ತೆ. ನಗುಮೊಗದ ಒಡೆಯ ಇಹಲೋಕ ತ್ಯಜಿಸಿ ಈಗಾಗಲೇ 4 ವರ್ಷ ಕಳೆದಾಯ್ತು. ಇದೀಗ ಇಂದು ಕನ್ನಡ ಸಿನಿ ಜಗತ್ತಿನ ‘ಅಪ್ಪು’ ಅಭಿಮಾನಿಗಳ ಪಾಲಿನ ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ನೆನಪು ಮಾತ್ರ ಶಾಸ್ವತ ಎಂದು ರೋಣ ತಾಲೂಕು ಪಂಚಾ ಸಂಘದ ಅಧ್ಯಕ್ಷ ಮೆಹಬೂಬ್ ಮೋತೆಖಾನ ಹೇಳಿದರು

ಅವರ ಉಮೇಶ ಮಾಲಿಕತ್ವದ ವಿಷ್ಣು ದಾಬಾದಲ್ಲಿ ಆಯೋಜಿಸಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅವರು 1975ರ ಮಾರ್ಚ್‌ 17ರಂದು ಜನಿಸಿ ಪುನೀತ್‌ ರಾಜ್‌ಕುಮಾರ್‌, ಹುಟ್ಟಿದ ಕೆಲವೇ ತಿಂಗಳಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಪ್ಪು ಸಾವನ್ನಪ್ಪಿ 4 ವರ್ಷ ಕಳೆದರೂ, ಅಭಿಮಾನಿಗಳು, ಕುಟುಂಬಸ್ಥರು, ಕನ್ನಡ ಚಿತ್ರರಂಗದ ಸ್ಟಾರ್‌ ಮಾತ್ರ ಅವರ ಹುಟ್ಟಿದ ದಿನದಂದು ಭಾವುಕರಾಗಿ, ಹುಟ್ಟುಹಬ್ಬವನ್ನು ಆಚರಿಸುತ್ತಾರೆ ಎಂದರು.

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪುನೀತ್‌, ಆ ನಂತರ ಪವರ್‌ ಸ್ಟಾರ್‌ ಎಂಬ ಬಿರುದಿಗೂ ಪಾತ್ರರಾದರು. ಸಿನಿಮಾ ಮಾತ್ರವಲ್ಲದೇ ಪುನೀತ್‌, ಸರಳತೆ, ಪ್ರಾಣಿಪ್ರೀತಿ, ದಾನ ಮತ್ತು ಸಾಮಾಜಿಕ ಕಾರ್ಯಗಳಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಚಿರಂಜೀವಿಯಾಗಿದ್ದಾರೆ ಎಂದು ಹೇಳಿದರು

ಕಾನಿಪ ಮಾಜಿ ಕಾರ್ಯದರ್ಶಿ ವೀರಯ್ಯ ಪಾಟೀಲ ಮಾತನಾಡಿ,ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಪುನೀತ್‌ ರಾಜ್‌ ಕುಮಾರ್‌ ಅವರ ಒಟ್ಟು ಆಸ್ತಿಯ ಬಹುತೇಕ ಪಾಲು ದಾನ ಧರ್ಮ ಮಾಡಿ ಹೆಸರು ಅಜರಾಮರವಾಗಿ ಅಚ್ಚಳಿಯದೆ ಅಪ್ಪು ಆಗಿ ನಮ್ಮನ್ನು ಅಗಲಿರುವುದು ಅತೀವ ನೂವಿನ ಸಂಗತಿ ಎಂದರು.

ವಿಷ್ಣು ದಾಬಾ ಮಾಲಿಕ ಉಮೇಶ ಕುರಿ ಮಾತನಾಡಿ,
ಕರ್ನಾಟಕದ ಮನೆ ಮಗ, ಬಾಲ್ಯದಲ್ಲೇ ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ, ನಟ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ಅಗಲಿದರೂ, ಕೋಟ್ಯಾಂತರ ಅಭಿಮಾನಿಗಳ ಮನೆ, ಮನದಲ್ಲಿ ಇಂದಿಗೂ ಫೇವರೀಟ್‌ ಸ್ಟಾರ್‌ ಆಗಿ ಉಳಿದಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು, ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆ ಬಳಸುತ್ತಿದ್ದರು, ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗ, ಗೋಶಾಲೆಗಳಿಗೆ ಅಪಾರ ದಾನ ಮಾಡಿದ ಪುಣ್ಯಾತ್ಮ ಅವರಾಗಿದ್ದರು. ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದ ಪುನೀತ್‌ ರಾಜ್‌ಕುಮಾರ್‌, ತನ್ನ ಸೇವೆಯನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಆದ್ರೆ ಅವರ ನಿಧನದ ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರೆಷ್ಟು ದಾನಿ ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು

ಅನೀಲಕುಮಾರ ನವಲಗುಂದ ಮಾತನಾಡಿ,ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿದರೂ, ಅವರ ನೆನಪು ಮಾತ್ರ ಶಾಶ್ವತ. ಸದಾ ನಗುಮೊಗದಲ್ಲೇ ಇರುತ್ತಿದ್ದ ಪುನೀತ್‌ ರಾಜ್‌ಕುಮಾರ್‌ ಅವರು, ಅಕ್ಟೋಬರ್‌ 29, 2021 ರಂದು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಪುನೀತ್‌ ನಿಧನ, ಇಡೀ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ,ಅವರ ಹುಟ್ಟುಹಬ್ಬದ ಮೂಲಕ ಅವರು ನಮ್ಮೊಂದಿಗೆ ಇದ್ದಾರೆ ಎಂಬ ನಂಬಿಕೆ ನಮ್ಮದು ಎಂದು ಹೇಳಿದರು

ಈ ಸಮಯದಲ್ಲಿ ಬಸವರಾಜ ಯರಗೊಪ್ಪ, ಸಂಗಪ್ಪ ಬಗಲಿ, ಜಗದೀಶ ನೀಡಗುಂದಿ, ಶರಣಪ್ಪ ಗಿಡ್ಡನಾಯಕನಾಳ, ಮುತ್ತಪ್ಪ ಕುರಿ, ಶಿವು ಕುಂಬಾರ ಸೇರಿದಂತೆ ಅಪ್ಪು ಅಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!