ಅಂದಪ್ಪ ಸಂಕನೂರ ಕುಟುಂಬ ವರ್ಗದಿಂದ ರಂಜಾನ ದಿನಸಿ ಕಿಟ್ ವಿತರಣೆ

ಗಜೇಂದ್ರಗಡ:
ನಗರದ ಖ್ಯಾತ ಗಣ್ಯ ವ್ಯಾಪಾರಸ್ಥರಾದ, ಯುವ ಮುಖಂಡರಾದ ಅಂದಪ್ಪ ಸಂಕನೂರ ಕುಟುಂಬ ವರ್ಗದಿಂದ ರಂಜಾನ ಹಬ್ಬದ ನಿಮಿತ್ತ ಬಡ ಕುಟುಂಬದ ವರ್ಗದವರಿಗೆ ದಿನಸಿ ಕಿಟ ವಿತರಣೆ ಮಾಡಲಾಯಿತು.

ನಗರದ ಜಾಮಿಯಾ ಮಸ್ಜಿದಿಯಲ್ಲಿ ಸು.೪೦ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಯನ್ನು ಯುವ ಮುಖಂಡರಾದ ಅಂದಪ್ಪ ಸಂಕನೂರ ವಿತರಿಸಿ ಮಾತನಾಡಿ
ಗಜೇಂದ್ರಗಡ ನಗರ ಸಾಮಾಜಿಕ
ಸಾಮರಸ್ಯಕ್ಕೆ , ಸಹೋದರತ್ವ, ಭಾತೃತ್ವಕ್ಕೆ
ತನ್ನದೆಯಾದ ಹೆಗ್ಗಳಿಕೆ ಹೊಂದಿರುವ ನಗರವಾಗಿದೆ.ಸರ್ವರನ್ನು ಪರಸ್ಪರ ಗೌರವ ಆತ್ಮೀಯತೆಯೊಂದಿಗೆ ಎಲ್ಲ ಜನಾಂಗದೊಂದಿಗೆ ಸೌಹಾರ್ದತೆಯಿಂದ ಬೆರೆಯುವ ಗುಣ ಇಂದಿನ ಯುವಕರು ಬೆಳೆಸಿಕೊಳ್ಳಲು ಮುಂದಾಗಬೇಕಿದೆ ಎಂದರು.

ಬಳಿಕ ಅಂಜುಮನ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಜಾತಿ ಜಾತಿ ನಡುವೆ ಕೋಮು ಗಲಭೆಯನ್ನು ಕಾಣುವ ಸಮಾಜದಲ್ಲಿ ಸರ್ವರನ್ನು ಸಮಾನ ಕಾಣುವ ಗುಣವಿರುವ ಇಂತಹ ಸಮಾಜ ಸೇವಕರನ್ನು ಕಾಣುವುದು ವಿರಳ. ಯುವ ಪೀಳಿಗೆಯು ಅಂದಪ್ಪ ಸಂಕನೂರ ಅವರನ್ನು ಸ್ಪೂರ್ತಿಯಾಗಿ ಪಡೆದು ಜಾತಿ ಮೀರಿ ಸಮಾಜಸೇವೆಯಲ್ಲಿ ತೊಡಗಬೇಕಿದೆ ಎಂದರು.

ಇನ್ನೂ ಇದೇ ಸಂದರ್ಭದಲ್ಲಿ
ಅವಿನಾಶ್ ಕೊಟಗಿ ಗಣೇಶ ಗುಗಲೋತ್ತರ, ಮಾತನಾಡಿದರು.ಬಳಿಕ ಅಂಜುಮನ್ ಇಸ್ಲಾಂ ಕಮೀಟಿ ಚೇರ್ಮನ್ ಹಸನಸಾಬ ತಟಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಚೇರ್ಮನ್ ಎ.ಡಿ.ಕೋಲಕಾರ, ಮಾಜಿ ಕಾರ್ಯದರ್ಶಿ ದಾವಲಸಾಬ, ದಾದು ಹಣಗಿ ಮೆಹರಖಾನ ಲೋದಿ, ಇಸ್ಮಾಯಿಲಸಾಬ ನಾಲಬಂದ, ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!