ವಿಜಯ ಸಿಂಧೂರ ವಿಶೇಷ
ರಾಜ್ಯದಲ್ಲಿ ಯುಗಾದಿ ಮುನ್ನವೇ ಆರಂಭವಾದ ಪೂರ್ವ ಮುಂಗಾರು ಅಬ್ಬರ ಆರಂಭಿಸಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಅಬ್ಬರಿಸಿದೆ.
ಕಳೆದ ಕೆಲ ವರ್ಷಗಳಿಂದ ಯುಗಾದಿ ಬಳಿಕ ಆರಂಭವಾಗುತ್ತಿದ್ದ ಪೂರ್ವ ಮುಂಗಾರು ಈ ಬಾರಿ ಹಬ್ಬಕ್ಕೂ ಮುನ್ನವೇ ಬರುತ್ತಿದೆ. ಅದು ಕೂಡ ಆಲಿಕಲ್ಲು ಸುರಿಸಿ ಅಬ್ಬರಿಸುತ್ತುದೆ. ಸೋಮವಾರ ಹಾಸನದಲ್ಲಿ ಮೊದಲು ಆಲಿಕಲ್ಲು ಮಳೆಯಾಯಿತು. ಆ ಬಳಿಕ ದಾವಣಗೆರೆ, ಕೊಪ್ಪಳದ ವಿವಿಧೆಡೆಯು ಬಿದ್ದಿವೆ. ಮಂಗಳವಾರ ಸಂಜೆಯಿಂದ ಗದಗ,ಬೆಳಗಾವಿ, ಬಾಗಲಕೋಟೆ, ಚಾಮರಾಜನಗರದಲ್ಲಿ ಆಲಿಕಲ್ಲು ಮಳೆ ಮುಂದುವರೆದಿದೆ.
5 ಜಿಲ್ಲೆಗಳಿಗೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಭಾರತೀಯ ಹವಾಮಾನ ಇಲಾಖೆಯು, ಸೋಮವಾರ ರಾತ್ರಿ ಕರ್ನಾಟಕದ ಕೋಲಾರ, ತುಮಕೂರು, ಬೀದರ್, ಕಲಬುರಗಿ, ಗದಗ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.

ಮೂರು ದಿನ ಮುಂದುವರೆಯಲಿದೆ ಮಳೆ :
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮಾರ್ಚ್ 18, 19 ಹಾಗೂ 20 ರಂದು ಕರ್ನಾಟಕ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ಬಾಗಲಕೋಟೆಯಲ್ಲಿ ಭಾರೀ ಗಾಳಿಯೊಂದಿಗೆ ಮಳೆ
ಬಾಗಲಕೋಟೆ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆ ಸುರಿದಿದೆ. ಜಿಲ್ಲೆಯ ಬೇವೂರನಲ್ಲಿ ಆಲಿಕಲ್ಲು ಮಳೆಯಾಗಿದೆ. ಕಮತಗಿ, ಹುನಗುಂದ, ಕೆರೂರ, ಬಾಗಲಕೋಟೆ ಸೇರಿದಂತೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೆಲವು ಕಡೆ ಆಲಿಕಲ್ಲು ಮಳೆ ಸುರಿದಿದೆಸಿಡಿಲಿಗೆ ಜೀವ ಹಾನಿಯೂ ಇಗಿಧೇ. ನಾನಾ ಕಡೆ ಮಳೆಯಾಗಿದೆ. ಭಾರೀ ಗಾಳಿ ಬೀಸಿದ ಪರಿಣಾಮ ವಾಹನ ಸಂಚಾರ ಕೆಲ ಹೊತ್ತು ಅಸ್ತವ್ಯಸ್ತಗೊಂಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ದಾಖಲೆಯ ಮಳೆ
ದಾವಣಗೆರೆ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ವರ್ಷದ ಮೊದಲ ಮಳೆ ಹನಿಯಿತು. ಜಿಲ್ಲೆಯ ನಗರ ಸೇರಿದಂತೆ ಕೆಲವೆಡೆ ಆಲಿಕಲ್ಲುಸಹಿತ ಮಳೆ ಸುರಿಯಿತು. ಹೊನ್ನಾಳಿಯ ರಾಮಪುರದಲ್ಲಿ ದಾಖಲೆಯ 80 ಮಿ.ಮೀ ಮಳೆಯಾಗಗಿದೆ.
ಸಿಡಿಲು ಬಡಿದು ಬಾಲಕ ಹಿಗೂ ರೈತ ಮೃತ
ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ಹಾಗೂ ತಡ ರಾತ್ರಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಎನ್.ಜರಕುಂಟಿ ಗ್ರಾಮದ ಜಮೀನಿನಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಮಂಜುನಾಥ್ ಬಾಲಕ ಮೃತಪಟ್ಟಿದ್ದು, ಮಂಗಳವಾರ ರೋಣ ತಾಲೂಕಿನ ಮೆಣಸಗಿ ಗ್ರಾಮದ ರೈತ ನಿಂಗಪ್ಪ ಅಮಾತಿ ಸಿಡಿಲಿಗೆ ಕೊನೆಯುಸಿರು ಎಳೆದಿದ್ದಾರೆ.

ಹೊಸಪೇಟೆ ನಗರದಲ್ಲಿರಾತ್ರಿ 9ರ ಸುಮಾರಿಗೆ ದೊಡ್ಡ ಹನಿಗಳೊಂದಿಗೆ ಆರಂಭವಾದ ಮಳೆ, ನಂತರ ಕೆಲಕಾಲ ಬಿರುಸಾಗಿ ಸುರಿಯಿತು. ನಗರದ ಹಲವು ಬಡಾವಣೆಗಳಲ್ಲಿವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿಬಿರುಗಾಳಿ ಸಹಿತ ಆಲಿಕಲ್ಲುಮಳೆ ಸುರಿದಿದೆ. ಹೂವಿನಹಡಗಲಿ, ಹರಪನಹಳ್ಳಿ ಮತ್ತು ಕೊಟ್ಟೂರು ತಾಲೂಕುಗಳಲ್ಲೂಸಾಧಾರಣ ಮಳೆಯಾಗಿದೆ.
ಸಿಡಿಲಿಗೆ ಹೊತ್ತಿ ಉರಿದ ವಿಂಡ್ ಫ್ಯಾನ್
ಕೂಡ್ಲಿಗಿ ತಾಲೂಕಿನ ಪಟ್ಟಣ ಸೇರಿ ಹುರುಳಿಹಾಳು, ಕಾನಹೊಸಹಳ್ಳಿ, ತಾಯಕನಹಳ್ಳಿ, ಹುಡೇಂ, ಕಾತ್ರಿಕೆಹಟ್ಟಿ, ಆಲೂರು, ಕೆಂಚಮಲ್ಲನಹಳ್ಳಿ, ಯಂಬಳಿ, ಕಾನಮಡುಗು, ಹುಲಿಕೆರೆ ಹಾಗೂ ಇತರ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಯಿತು. ಯಂಬಳಿ ವಡ್ಡರಹಟ್ಡಿ ಗ್ರಾಮದ ರೈತ ನೀಲಪ್ಪ ಅವರ ಜಮೀನಿನಲ್ಲಿ ಅಳವಡಿಸಿರುವ ವಿಂಡ್ ಫ್ಯಾನ್ ಗೆ ಸಿಡಿಲು ಬಡಿದು ಯಂತ್ರದ ಭಾಗ ಹೊತ್ತಿ ಉರಿಯಿತು.
