ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ: ಕೂಚಬಾಳ

ತಾಳಿಕೋಟೆ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರಷ್ಟೇ ಪಾಲಕರಿಗೂ ಜವಾಬ್ದಾರಿಯಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಿ. ಎಂದು ಭಾಜಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ಪಟ್ಟಣದ ಕೌಟಿಲ್ಯ ಅಕಾಡೆಮಿಯಲ್ಲಿ ಶೈಕ್ಷಣಿಕ ಸಮಾವೇಶ ಹಾಗೂ ಜೀನಿಯಸ್ ಸ್ಟುಡೆಂಟ್ ಅವಾರ್ಡ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು ಮಕ್ಕಳಿಗೆ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಹಾಗೂ ಕೌಶಲ್ಯಗಳನ್ನು ತುಂಬಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ನೀಡಿ ಎಂದರು.

ಮುಖ್ಯ ಅತಿಥಿಯಾಗಿದ್ದ ಶ್ರೀಕಾಂತ ಪತ್ತಾರ ಮಾತನಾಡಿ, ಕೌಟಿಲ್ಯ ಅಕಾಡೆಮಿಯು ಕೇವಲ ಒಂದೇ ವರ್ಷದ ಅವಧಿಯಲ್ಲಿ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಹಗಲಿರುಳು ಕೆಲಸ ಮಾಡುತ್ತಿದೆ ಎಂದರು. ಕೌಟಿಲ್ಯಅಕಾಡೆಮಿಯು ಜಿಲ್ಲೆಯಲ್ಲಿಯೇ ಶೈಕ್ಷಣಿಕ ಕ್ರಾಂತಿಯನ್ನುಂಟುಮಾಡಿದೆ. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಕೌಟಿಲ್ಯದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆಯಿದೆ ಪ್ರಸಕ್ತ ವಿದ್ಯಮಾನದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದರು. ಮೊಬೈಲ್ ಮತ್ತು ಟಿವಿಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಬೇಕಿದೆ. ಭಾರತ ಮುಂದೊಂದು ದಿನ ಜ್ಞಾನವಂತರ ದೇಶವಾಗಲಿದ್ದು ಇದನ್ನು ಜ್ಞಾನವಂತರೆ ಆಳಲಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಸ್ಲಿಂ ಧಾರ್ಮಿಕ ಮುಖಂಡ ಶಕೀಲ ಅಹಮ್ಮದ ಖಾಜಿ, ಖಾಸ್ಗತೇಶ್ವರಮಠದ ಆಡಳಿತಾಧಿಕಾರಿ ಮುರಿಗೇಶ ವಿರಕ್ತಮಠ ಆಶೀರ್ವಚನ ನೀಡಿದರು.

ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ ಮನಗೂಳಿ ಉದ್ಘಾಟಿಸಿದರು. ವೇದಿಕೆಯಲ್ಲಿ ಗಣ್ಯರಾದ, ಕೆ.ಎಸ್.ಸಜ್ಜನ, ಕಾಶಿನಾಥ ಮುರಾಳ, ಮುತ್ತಪ್ಪಣ್ಣ ಚಮಲಾಪುರ, ಮಾನಸಿಂಗ ಕೊಕಟನೂರ, ಅಶೋಕ ಕೆಂಭಾವಿ, ಅಶೋಕ ಬಳಗಾನೂರ, ಗುರುಸಂಗಪ್ಪ ಕಶೆಟ್ಟಿ, ಘನಶ್ಯಾಮ ಚವಾಣ, ಎಸ್.ಐ.ಚೌದ್ರಿ, ಅಣ್ಣಪ್ಪ ಜಗತಾಪ, ವೀರೇಶಗೌಡ ಬಾಗೇವಾಡಿ, ಕಾಶಿನಾಥ ಹಡಪದ, ಶ್ರದ್ಧಾನಂದ ತುಂಬಗಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಸಜ್ಜನ, ಕೌಟಿಲ್ಯ ಉಪಾಧ್ಯಕ್ಷೆ ಶರಣಮ್ಮ ಸಜ್ಜನ, ಡಿ.ಕೆ.ಪಾಟೀಲ, ಮಹಾಂತೇಶ ಮುರಾಳ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ ಧರಮಣ್ಣ ಅರಸಗೊಂಡ ಇತರರಿದ್ದರು.

ಪರೀಕ್ಷೆಯಲ್ಲಿ 750 ಮಕ್ಕಳು ಭಾಗವಹಿಸಿದ್ದರು. ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ 50 ಮಕ್ಕಳಿಗೆ ಪದಕ ಪ್ರಶಸ್ತಿ ವಿತರಣೆ ಮಾಡಿದರು. ಮೊದಲ ಐದು ಸ್ಥಾನ ಪಡೆದ ಏಳು ವಿದ್ಯಾರ್ಥಿಗಳಾದ ಅಚ್ಯುತಗೌಡ ಎಸ್ ತುಂಬಗಿ, ಬಸವಪ್ರಭು, ಸರ್ವೇಶ ಚಳಗೇರಿ, ಶಶಾಂಕ ರುದ್ರಗೌಡ ಪಾಟೀಲ, ಕಾರ್ತೀಕ ಜಾಧವ, ಪ್ರಜ್ವಲ ಕಟ್ಟಿಮನಿ, ತನ್ಮಯ ಡಿ.ಅವರುಗಳಿಗೆ , ಜಿನಿಯಸ್ ಅವಾರ್ಡ 2026 ಪ್ರಶಸ್ತಿ ಪತ್ರ ಪದಕ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *