ವಿಜಯ ಸಿಂಧೂರ,ಗಜೇಂದ್ರಗಡ
ರಾಜಕೀಯ,ಸಾಮಾಜಿಕ,ಧಾರ್ಮಿಕ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವಾಗ ನಾವೆಲ್ಲರೂ ವೀರಶೈವರು ಎಂಬ ಮನೋಬಲದಿಂದ ಮಾಡಬೇಕು.ಲಿಂಗಾಯತ-ವೀರಶೈವ ಬೇರೆ ಬೇರೆ ಪದ ಬಳಸವುವುದು ಬೇಡ.ನಾವೆಲ್ಲರೂ ವೀರಶೈವರು.ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವ-ಲಿಂಗಾಯತರ ಶಕ್ತಿ ಹತ್ತಿಕ್ಕುವ ಪ್ರಯತ್ನ ಕಡೆಯುತ್ತಿದೆ. ರಾಜ್ಯದ ಇತಿಹಾದಲ್ಲಿ ಹೆಚ್ಚು ಮುಖ್ಯಮಂತ್ರಿ ಸ್ಥಾನ ಪಡೆದವರು ಯಾರು ? ಈಗ ಅಂತಹ ಅವಕಾಶ ದೊರೆಯುತ್ತಿಲ್ಲ,ಇದು ಪಂಚಮಸಾಲಿಗಳು ಅಷ್ಟೇ ಒಗ್ಗಟ್ಟಾಗುವುದು ಬೇಡ,ವೀರಶೈವ,ಲಿಂಗಾಯತರು ಒಂದಾದಾಗ ಒಂದು ಅದ್ಬುತ ಶಕ್ತಿ ಬರುತ್ತಿದೆ. ರಾಜ್ಯದಲ್ಲಿದ್ದ ೧.೬೦ ಕೋಟಿ ವೀರಶೈವ ಲಿಂಗಾಯತರು ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಕೇವಲ ೭೦ ಲಕ್ಷಕ್ಕೆ ತಂದು ನಿಲ್ಲಿಸಿರುವುದು ದುರಂತ ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಭಾನುವಾರ ಗಜೇಂದ್ರಗಡ ನಗರದಲ್ಲಿ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘ ಇವರ ಆಶ್ರಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿದರು
೧೨ನೇ ಶತಮಾನದಲ್ಲಿ ಲಿಂಗ ಪೂಜೆ ಮಾಡುವವರು ಲಿಂಗವAತರು,ವೀರಶೈವರು ಎಂದು ಬಸವಣ್ಣನವರು ಹೇಳಿದ್ದಾರೆ.ಸಮಾಜದಲ್ಲಿ ವೀರಶೈವ,ಲಿಂಗಾಯತರ ಪರಸ್ಥಿತಿ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.ರಾಜ್ಯದಲ್ಲಿ ೧.೬೦ ಕೋಟಿ ಜನ ವೀರಶೈವ ಲಿಂಗಾಯತರು ಇದ್ದೇವೆ.ರಾಜಕೀಯವಾಗಿ,ಸಾಮಾಜಿಕವಾಗಿ ಕಾರ್ಯ ಮಾಡುವಾಗ ನಾವೆಲ್ಲರೂ ವೀರಶೈವರು ಎಂದಾಗಲೇ ರಾಜಕೀಯ,ಸಾಮಾಜಿಕ ಶಕ್ತಿ ತುಂಬಲಿದೆ ಎಂದರು

ಇವತ್ತಿನ ಈ ಕಾರ್ಯಕ್ರಮ ಹೊಸ ಹುರುಪು,ಹುಮ್ಮಸ್ಸನಿಂದ ಮಾಡುತ್ತಿರುವ ಕೆಲಸಕ್ಕೆ ಮೊದಲು ನಿಮಗೆ ಅಭಿನಂಧನೆ ಸಲ್ಲಿಸುವೆ. ಪ್ರತಿಯೊಂದು ಸಮಾಜದವರಿಗೂ ತಮ್ಮದೆಯಾದ ಕಲ್ಯಾಣ ಮಂಟಪ,ಸಾAಸ್ಕೃತಿಕ ಭವನ,ಸಮುದಾಯ ಭವನಗಳು ಅಗಬೇಕು ಎನ್ನುವ ಬಹಳಷ್ಟು ಹಂಬಲವಿದೆ. ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಸಮಾಜದವರು ತಮ್ಮ ತಮ್ಮ ಸ್ವಾಮಿಜಿಗಳನ್ನು ಮಾಡಿಕೊಂಡು,ಸಮಾಜದಲ್ಲಿ ತಮ್ಮದೆಯಾದ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಿತ್ತೂರ ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನ ಮಾಡುವ ನಿರ್ಧಾರ ನೀವು ತೆದುಕೊಂಡಿರುವುದು ಒಳ್ಳೆಯ ನಿರ್ಧಾರ ಇದನ್ನು ಸಂಪೂರ್ಣ ಯಶಸ್ವಿಗೊಳಿಸಬೇಕು.ಅದರ ಜೊತೆಗೆ ಸಮಾಜದಲ್ಲಿ ವೀರಶೈವ,ಲಿಂಗಾಯತರ ಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ಮಾಡಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ.ನಮ್ಮ ಇತಿಹಾಸ ನೋಡಿದರೆ ಹೆಚ್ಚಾನುಹೆಚ್ಚು ಈ ರಾಜ್ಯದ ಮುಖ್ಯಮಂತ್ರಿಯಾದವರು ಯಾರು ? ಇವತ್ತು ನಮಗೆ ಅವಕಾಶ ದೊರೆಯುತ್ತಿಲ್ಲ, ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವ ಲಿಂಗಾಯತರನ್ನು ಶಕ್ತಿ ಹತ್ತಿಕ್ಕುವ ಹುನ್ನಾರು ನಡೆಯುತ್ತಿದೆ.ನಮ್ಮ ಸಂಖ್ಯೆ ೧.೬೦ ಕೋಟಿ ಇದ್ದರೂ ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಕೇವಲ ೭೦ ಲಕ್ಷಕ್ಕೆ ತಂದು ನಿಲ್ಲಿಸಿದ್ದಾರೆ.ಇದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು

ಒAದು ಕಡೆ ನಮ್ಮ ಉಪ ಘಟಕಗಳು ಇವೆ ಅವುಗಳನ್ನು ಉದ್ದಾರ ಮಾಡೋಣ,ಕೇವಲ ಪಂಚಮಸಾಲಿ ಒಗ್ಗಟ್ಟು ನನಗೆ ಬೇಕಾಗಿಲ್ಲ, ನಾವೆಲ್ಲರೂ ಸೇರಿ ಲಿಂಗಾಯತರು ಒಂದಾಗುವ ಕೆಲಸ ಮಾಡೋಣ.ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ನಮ್ಮ ಪಕ್ಷಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆ ಬಾಗುವುದು ಅನಿವಾರ್ಯ.ಇಂತಹ ಕಾರ್ಯಕ್ರಮಗಳಲ್ಲಿ ಸಂಘಟನಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವುದು ಅನಿವಾರ್ಯ,ವೀರಶೈವರಾಗಿ ಸರ್ವರೂ ಸಂಘಟಿತರಾದಾಗ ಒಂದು ಅಘಾಧ ಶಕ್ತಿ ಬರಲಿದೆ ಎಂದರು
ಸಮುದಾಯವದರು ೨೫-೩೦ ವರ್ಷಗಳ ಹಿಂದೆ ಹಿರಿಯರು ಮಹತ್ವದ ವಿಚಾರ ಮಾಡಿ ಭೂಮಿಯನ್ನು ಖರೀದಿ ಮಾಡಿದ್ದಾರೆ.ಹಿರಿಯರ ಕನಸು ಇಡೇರಿಸುವ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ. ಶಿದ್ದಣ್ಣ ಬಂಡಿ ಬಹಳಷ್ಟು ಬುದ್ದಿವಂತರು ಇದ್ದಾರೆ. ಇವರು ಚಾಣಾಕ್ಷತನದಿಂದ ಸರಳ ರೀತಿಯಲ್ಲಿ ಆಡಂಭರವಿಲ್ಲದ ರೂ.೨ ಕೋಟಿ ಅಂದಾಜು ವೆಚ್ಚದಲ್ಲಿ ಕಲ್ಯಾಣ ಮಂಟಪ,ಸಾAಸ್ಕೃತಿಕ ಭವನ,ಮದುವೆಗಳು ನಡೆದರೆ ಉಳಿದುಕೊಳ್ಳಲು ಕೊಠಡಿಗಳು,ಗಾರ್ಡನ್ ಹೀಗೆ ಅಚ್ಚುಕಟ್ಟಾಗಿ ಮಾಡುವ ವಿಚಾರ ಮಾಡಿರುವುದು ಸಮಾಜದ ಬಡ ಮಕ್ಕಳಿಗೆ ಶಿಕ್ಷಣ,ವಸತಿ ನಿಲಯ ಮಾಡಿ ನೀವೂ ಕೈಜೋಡಿಸಿ,ನನಗೂ ಆಶಿರ್ವಾದ ಮಾಡಿ,ಸೇವೆ ಮಾಡಲು ಅನುಕೂಲ ಮಾಡಿರಿ,ಓಟ ಹಾಕಲಿ ಬಿಡಲಿ ರಾಜಕೀಯ ಬೇಡ.ಅಭಿವೃದ್ದಿ ಕಾರ್ಯಕ್ಕೆ ಒಣ ರಾಜಕೀಯ ಬೇಡ. ಬಹಿರಂಗವಾಗಿ ಬೆಂಬಲ ನೀಡದಿದ್ದರೂ ಬಾಹ್ಯವಾಗಿ ಆರ್ಶೀವಾದ ಮಾಡಿದ್ದಿರಿ,ನಿಮ್ಮ ಜೋತೆ ಸದಾ ನಾನೂ ಇರುವೆ.ಇದನ್ನು ಕೇವಲ ೮ ತಿಂಗಳಲ್ಲಿ ಕೆಲಸ ಪೂರ್ಣ ಮಾಡೋಣ ಎಂದರು
ಎಲ್ಲ ಸಮುದಾಯದವರು ಬಡವರೇ ಅಂತಿರಿ,ಒಕ್ಕಲುತನ ನಿಮ್ಮ ಕೆಲಸವಾದರೂ ಒಂದು ಊರಿನ ಹಿಡಿತವೇ ನಿಮ್ಮ ಕೈಯಲ್ಲಿದೆ ನೀವು ಬಡವರು ಎನ್ನುವ ಮಾತು ಬಳಸಬೇಡಿ,ಉಳಿದವರು ಅನ್ನಲಿ,ದಿವಂಗತ ಗುರುಶಾಂತಪ್ಪ ಬಂಡಿ ಮುಂದಾಲೋಚನೆ ಮಾಡಿ ಈ ಜಾಗಾ ಖರೀದಿ ಮಾಡಿದ್ದಾರೆ.ಈ ಕೆಲಸದಲ್ಲಿ ಯಾರನ್ನೂ ಕೈಬಿಡಬೇಡಿ,ಎಲ್ಲರನ್ನೂ ಕರೆಯಿರಿ,ಯುವಕರು,ದಾನಿಗಳು ಮುಂದೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ,ಸಹಕಾರ ಮಾಡಿ,ಕಟ್ಟಡ ನಿರ್ಮಾಣ ಮಾಡುವ ಮುನ್ನ ಈ ಜಾಗೆಯಲ್ಲಿ ಸುತ್ತಲೂ ಸಸಿಗಳನ್ನು ನೆಡಬೇಕು.ಅಂದಾಗ ವಾತಾವರಣ ಬದಲಾವಣೆ ಆಗುತ್ತದೆ.ಪರಿಸರ ಕಾಳಜಿಗೆ ಒತ್ತು ಕೊಟ್ಟಂತಾಗುತ್ತದೆ ಎಂದು ಹೇಳಿದರು
ದಿವ್ಯಸಾನಿಧ್ಯ, ಹಾಲಕೆರೆ ಶ್ರೀಮಠದ ಮನಿಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ಸಿದ್ದಣ್ಣ ಬಂಡಿ,ಬಸವರಾಜೇಶ್ವರಿ ಚನ್ನು ಪಾಟೀಲ,ವಿಶ್ವನಾಥ ಜಿಡ್ಡಿಬಾಗಿಲ,ನಾಗರಾಜ ಪಾಟೀಲ,ಬಸವರಾಜ ಪಲ್ಲೇದ ರಮೇಶ ಪಲ್ಲೇದ,ಅನೀಲಕುಮಾರಪಲ್ಲೇದ,ಮಲ್ಲಿಕಾರ್ಜುನ ಬಿದರೂರ,ಪ್ರಭು ಮೇಟಿ,ಬಸಣ್ಣ ಮೂಲಿಮನಿ,ಬಸಪ್ಪ ಅಕ್ಕಿ,ಮುತ್ತಣ್ಣ ಪಲ್ಲೇದ,ಶಿವಾನಂದ ಗುಗ್ಗರಿ,ಅಶೋಕ ಪವಾಡಶೆಟ್ಟಿ,ಸಂಗಣ್ಣ ಮುದಗಲ್,ಶಿವಪ್ಪ ಅಕ್ಕಿ,ವೀರಪ್ಪ ಚಿನ್ನೂರು,ಚನ್ನಮಲ್ಲಪ್ಪ ಹಳ್ಳದ,ರಾಜು ಬಾಣದ,ಶಾಂತಗೌಡ ಪಾಟೀಲ,ಅಂದಪ್ಪ ಸರ್ವಿ,ಶಂಕ್ರಪ್ಪ ಸರ್ವಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.
