ಆದಾಯಕ್ಕಾಗಿ ಕೆಲಸ ಮಾಡದೇ ಸಮಾಜದ ಹಿತಕ್ಕಾಗಿ ಸೇವೆ ಮಾಡುವ ವ್ಯಕ್ತಿಗಳಿಗೆ ಮಾತ್ರ ಜನರು ಗೌರವ ಪ್ರೀತಿ ನೀಡುತ್ತಾರೆ ಹಾಗೂ ಅಭಿಮಾನದಿಂದ ಹೊತ್ತು ಮೆರೆಸುತ್ತಾರೆ. ಅಂತವರಲ್ಲಿ ಡಾ.ಜಿ.ಕೆ. ಕಾಳೆ ಅವರ ಸಮಾಜಿಕ ಸೇವೆ ಅಪಾರವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನರೇಗಲ್ ಪಟ್ಟಣದ ಡಾ.ಜಿ.ಕೆ. ಕಾಳೆ ಮತ್ತು ಭಾಗ್ಯವತಿ ಅನಿಲ ಕಾಳೆ ಅವರ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕೋಡಿಕೊಪ್ಪದ ವೀರಪ್ಪಜ್ಜನ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಜಾತಿ ಆಧಾರಿತವಾಗಿ ಮಾತನಾಡುವ ಕಾಲಘಟ್ಟದಲ್ಲಿ ಕಾಳೆ ಅವರನ್ನು ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯನ್ನಾಗಿ ಶ್ರೀಗಳು ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಸ್ಥೆಯ ಪೂರ್ಣ ಹಿರಿತನವನ್ನು ಕಾಳೆಯವರ ಕೈಯಲ್ಲಿ ಕೊಟ್ಟಿರುವುದು ಕಾಳೆ ಅವರ ವೈದ್ಯಕೀಯ, ಸಾಮಾಜಿಕ,ಶೈಕ್ಷಣಿಕ, ರಾಜಕೀಯ ಮತ್ತು ಕೃಷಿಕ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯವಾಗಲಿ ಎಂಬ ಉದ್ದೇಶದಿಂದ ಗ್ರಂಥದ ರೂಪದಲ್ಲಿ ಬಿಡಗಡೆಗೊಳಿಸಿರುವುದು ಶ್ಲಾಘನೀಯ ಎಂದರು ಅವರ ಘನತೆ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಾಲ್ಕು ದಶಕಗಳಿಂದ ನನಗೆ ಆತ್ಮೀಯ-ರಾಗಿರುವ ಕಾಳೆಯವರು ಯಾವಾಗಲೂ ಸಮಾಜಕ್ಕೆ ಉಪಯೋಗವಾಗುವ ಮಾರ್ಗದರ್ಶನ ನೀಡಿದ್ದಾರೆ. ನರೇಗಲ್ ಭಾಗದ ಅನೇಕ ಮಕ್ಕಳನ್ನು ಅಧ್ಯಯನಕ್ಕೆ ಹಚ್ಚಿ ಹೃದಯವಂತವರನ್ನಾಗಿ ಮಾಡುವುದಲ್ಲದೆ ಸಮಾಜದ ಹಿತ ಕಾಪಾಡುತ್ತಾ ಬಂದಿದ್ದಾರೆ’ ಎಂದು ಹೇಳಿದರು.

ಹಾಲಕೆರೆ ಅನ್ನದಾನೇ ಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಅಧಿಕಾರ, ಸ್ಥಾನ, ಹಣ, ಅಂತಸ್ತು ಯಾವುದು ಶಾಶ್ವತವಲ್ಲ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಾಧಕರನ್ನು ಸಮಾಜ ಎಂದಿಗೂ ಸ್ಮರಿಸುತ್ತದೆ. ಹಾಗಾಗಿ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದರು ಗುಲಂಜಿಮಠದ ಗುರುಪಾದ ಶ್ರೀಗಳು ಮಾತನಾಡಿ,ಡಾ.ಜಿ.ಕೆ.ಕಾಳೆ ಅವರು ವೈದ್ಯ ವೃತ್ತಿಯಲ್ಲಿ ನಿಸ್ವಾರ್ಥದಿಂದ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕತೆ ಮತ್ತು ನೇರ ನಿಷ್ಠುರ ಮನೋಭಾವದಿಂದ ಸುತ್ತ ಹತ್ತು ಹಳ್ಳಿಯ ಜನರ ಮನಸ್ಸಿನಲ್ಲಿ ಮನೆ ಮಾಡಿರುವ ವೈದ್ಯರಾಗಿದ್ದಾರೆಎಂದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ‘ಯುವಕರು ಹಿರಿಯರಿಗೆ ಗೌರವಸುವುದರಿಂದ ಅನೇಕ ಫಲಗಳು ಸಿಗುತ್ತವೆ. ಸಂಸ್ಕಾರ ಭಾವನೆಗಳು ಮೂಡುತ್ತವೆ ಆದರ್ಶ ಮೌಲ್ಯಗಳು ನಿಜ ಜೀವನದಲ್ಲಿ ಅಳವಡಿ, ಕೆಯಾಗುತ್ತವೆ. ಅದಕ್ಕಾಗಿ ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳ-ಬೇಕು’ ಎಂದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಸಿದ್ದನ. ಕೊಳ್ಳದ ನಿರಂತರ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು.
ಬಾಗಲಕೋಟೆಯ ಅನಂತ ಕುಲಕರ್ಣಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮತ್ತು ಡಾ.ಜಿ. ಕೆ. ಕಾಳೆ ಅವರಿಗೆ ಸಂಘ ಸಂಸ್ಥೆಗಳಿಂದ ಮತ್ತು ಅಭಿಮಾನಿಗಳಿಂದ ಗೌರವ ಸನ್ಮಾನಗಳು ಜರುಗಿತು ಭಾಗ್ಯವತಿ ರವೀಂದ್ರನಾಥ ದೊಡ್ಡಮೇಟಿ, ಸಿದ್ದಣ್ಣ ಬಂಡಿ, ಪ್ರಕಾಶ ಕುಲಕರ್ಣಿ, ಮಲ್ಲಯ್ಯ ಚಪ್ಪನಮಠ, ವಿದ್ಯಾಧರ ದೊಡ್ಡಮನಿ, ಚಂದ್ರು ರಾಠೋಡ ಸೇರಿದಂತೆ ಅನೇಕರು ಇದ್ದರು

ವರದಿ : ಚಂದ್ರು ರಾಠೋಡ, ನರೇಗಲ್
