ಮಾನವ ಕುಲಕ್ಕೆ ವಚನಗಳ ಮೂಲಕ ಸನ್ಮಾರ್ಗ ತೋರಿದ ದೇವರ ದಾಸಿಮಯ್ಯ

ವಿಜಯ ಸಿಂಧೂರ,ರೋಣ

ಇತಿಹಾಸ ಎಂಬುದು ಕೊನೆಯ ಪುಟ. ಇಲ್ಲಿ ಯಾರು ಮೊದಲಿಗರಲ್ಲ ಯಾರು ಅಂತ್ಯರಲ್ಲ. ದೇವರ ದಾಸಿಮಯ್ಯ ಅವರು ದೇವರ ಕುಲದಿಂದ ಬಂದAತಹ ದೇವ ಮಹರ್ಷಿ. ದೇವರ ದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಮಾನವ ಕುಲಕ್ಕೆ ವಚನಗಳ ಮೂಲಕ ಸನ್ಮಾರ್ಗ ತೋರಿದ ದೇವರ ದಾಸಿಮಯ್ಯ ಎಂದು ಮುಖಂಡ ಸುಧಾಕರ ಗೊಟೂರ ಹೇಳಿದರು.

ಅವರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯಿತಿ, ಪುರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂತಹ ಮಹರ್ಷಿಗಳು ಲೋಕ ಕಲ್ಯಾಣಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಹುಟ್ಟಿ ಬಂದವರಾಗಿದ್ದಾರೆ. ಪುರಾಣದಲ್ಲಿ ದಾಸಿಮಯ್ಯನವರ ಹಿನ್ನೆಲೆಗೆ ಮಹತ್ವಪೂರ್ಣವಾದ ಇತಿಹಾಸವಿದೆ. ದೇವರ ದಾಸಿಮಯ್ಯ . ತ್ರಿಕಾಲಜ್ಞಾನಿ ಸರ್ವಜ್ಞನಾಗಿ ಅವತಾರ ತಾಳಿದವರಾಗಿದ್ದಾರೆ ಎಂದರು.

ದೇವಾAಗ ಸಮಾಜದ ಹುಟ್ಟಿಗೆ ದೇವರ ದಾಸಿಮಯ್ಯನರೇ ಮೂಲಕಾರಣ. ಅವರ ಹುಟ್ಟು ಮುಖ್ಯ ಅಲ್ಲ, ಅವರ ಗುಣ ಮುಖ್ಯ. ಚಾಲುಕ್ಯರ ಕಾಲದಲ್ಲಿ ಲಿಂಗ ದೀಕ್ಷೆಯನ್ನು ಪಡೆದ ವ್ಯಕ್ತಿ, ದಾಸಿಮಯ್ಯನವರದು ಪ್ರಮುಖವಾಗಿ ತೆಲುಗು ಸಾಹಿತ್ಯವಾಗಿತ್ತು. ಜೇಡರಹುಳು ಸೃಷ್ಟಿಕರ್ತನ ಸೃಷ್ಟಿಯಲ್ಲಿ ಯಾವ ರೀತಿಯಾಗಿ ಜೇಡಬಲೆಯನ್ನು ಕಟ್ಟುತ್ತದೆಯೋ, ಅದೇ ರೀತಿಯಲ್ಲಿ ದೇವರ ದಾಸಿಮಯ್ಯನವರು ನೇಕಾರ ವೃತ್ತಿಯಲ್ಲಿ ಬಟ್ಟೆಯನ್ನು ಸುತ್ತಿ, ನೇಕಾರಿಕೆಯನ್ನು ಹುಟ್ಟು ಹಾಕಿದರು ಎಂದು ತಿಳಿಸಿದರು.

ಉಪನ್ಯಾಸಕ ಮಂಜುನಾಥ ಹೂವಿನಾಳ ಮಾತನಾಡಿ, ದಾಸಿಮಯ್ಯನವರ ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸೃಷ್ಟಿಕರ್ತನ ಮುಂದೆ ವ್ಯಕ್ತಿಗಳ ವ್ಯಕ್ತಿತ್ವ ಏನು ಅಲ್ಲ. ಮೂಲ ವಸ್ತುವನ್ನು ಮಾನವ ಸೃಷ್ಟಿ ಮಾಡಲಾರ. ಅದಕ್ಕಾಗಿ ನಮ್ಮೊಳಗಿನ ಚೈತನ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ವೃತ್ತಿಯನ್ನು ಪಾರಮಾರ್ಥದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗಲು ಸಾಧ್ಯ ಎಂದು ಹೇಳಿದರು

ತಾಲೂಕಾ ಕುರುಹಿನಶೆಟ್ಟಿ ನೇಕಾರ ಸಂಘದ ಅಧ್ಯಕ್ಷ ಕೆ.ಎಸ್.ಪ್ಯಾಟಿಗೌಡ್ರ ಮಾತನಾಡಿ, ೧೨ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ಎಂಬ ಹೆಗ್ಗಳಿಕೆಗೆ ದಾಸಿಮಯ್ಯ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ವಚನಗಳು ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು

ಗೌರವಾಧ್ಯಕ್ಷ ಎಂ.ಬಿ.ಇಟಗಿ ದೇವರ ದಾಸಿಮಯ್ಯ ಶಿವಭಕ್ತರಾಗಿದ್ದು, ಸರಳ ಶೈಲಿಯಲ್ಲಿ ಭಕ್ತಿ ಮತ್ತು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದರು.ದೇವರ ದಾಸಿಮಯ್ಯನ ವಚನಗಳು ಸಂಕ್ಷಿಪ್ತತೆ, ಸರಳತೆ ಮತ್ತು ನೇರ ನುಡಿಗಳಿಗೆ ಪ್ರಸಿದ್ಧವಾದವರು ಮತ್ತು ಅವರ ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು

ಈ ಸಂದರ್ಭದಲ್ಲಿ ರೋಣ ತಾಲೂಕಾ ಸಮಾಜದ ಹಿರಿಯರು ಮತ್ತು ಗುರು ಹಿರಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!