; ವಿಜಯ ಸಿಂಧೂರ ರೋಣ
ಕುಷ್ಟಗಿ-ಘಟಪ್ರಭಾ ರೈಲು ಮಾರ್ಗ ರಚನೆಗೆ ಮಾಜಿ ಸಚಿವ,ಶಾಸಕ ಸಿ.ಸಿ.ಪಾಟೀಲ ಹಾಗೂ ಮಾಜಿ ಸಿಎಂ,ಸಂಸದ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂಸದ ಅವರಿಗೆ ಮನವಿ ಸಲ್ಲಿಸಿದರು.
ಈ ಮಾರ್ಗವು ಕುಷ್ಟಗಿ, ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯಲ್ಲಮ್ಮನಗುಡ್ಡ ಮುಖಾಂತರ ಸಂಚರಿಸಲು ಮಹತ್ವದ್ದಾಗಿದ್ದು, ತಾಂತ್ರಿಕ ಸಮೀಕ್ಷೆ ಹಾಗೂ ಮಂಜೂರಿಗಾಗಿ ಒತ್ತಾಯಿಸಲಾಗಿದೆ. ಬಹುದಿನಗಳ ಬೇಡಿಕೆಯಲ್ಲಿರುವ ಕುಷ್ಟಗಿ – ಘಟಪ್ರಭಾ ರೈಲು ಮಾರ್ಗ ರಚನೆಗಾಗಿ ಶಾಸಕರು, ಸಂಸದರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಕುಷ್ಟಗಿ – ಘಟಪ್ರಭಾ ಮಾರ್ಗವಾಗಿ ರೈಲು ಮಾರ್ಗ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಅನೇಕ ವರ್ಷಗಳಿಂದ ಅಲ್ಲಿಯ ತಾಲೂಕು ಜನತೆಯಿಂದ ರೈಲು ಮಾರ್ಗಕ್ಕಾಗಿ ಹೆಚ್ಚಿನ ಒತ್ತಡವಿದೆ. ಈ ಮಾರ್ಗ ರಚನೆಗೊಂಡಲ್ಲಿ ಆನೇಕ ಪಟ್ಟಣಗಳ ಮಾರ್ಗವಾಗಿ ಐತಿಹಾಸಿಕ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡ ಭಾಗದಿಂದ ಪ್ರಯಾಣಿಕರು ಸಂಚರಿಸಲು ಯೋಗ್ಯವಾಗಿದೆ. ರೈಲು ಮಾರ್ಗ ಸಮೀಕ್ಷೆ ಹಾಗೂ ಮಂಜೂರಿಗಾಗಿ ಬೇಡಿಕೆ ಇದೆ. ಆದಷ್ಟು ತೀವ್ರವಾಗಿ ಈ ಮಾರ್ಗದ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಖಾತೆ ಸಚಿವರ ಗಮನಕ್ಕೆ ತರುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ ರೈಲ್ವೆ ಮಾರ್ಗ ರಚನೆಗೆ ಒತ್ತಾಯಿಸಿ ಈಗಾಗಲೇ ಜಂಟಿ ಹೊರಾಟ ಸಮಿತಿಯಿಂದ ಹುಬ್ಬಳ್ಳಿ ನೈಋುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ಸರನ್ ಮಾಥುರ್ ಅವರಿಗೆ ಮನವಿ ನೀಡಲಾಗಿದೆ. ತಾಂತ್ರಿಕ ಸಮೀಕ್ಷೆ ನಡೆಸಲು ಮನವಿಯಲ್ಲಿ ಕೋರಲಾಗಿದೆ. ರೈಲ್ವೆ ಮಾರ್ಗವು ಕುಷ್ಟಗಿ, ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ, ಘಟಪ್ರಭಾ ಮುಖಾಂತರ ಸಂಚರಿಸಲು ಅತೀ ಪ್ರಾಮುಖ್ಯವಾಗಿದೆ.
ಈ ಯೋಜನೆಯಿಂದ ಗಮನಾರ್ಹ ಕಾರ್ಯತಂತ್ರ ಹಾಗೂ ಸಾಮಾಜಿಕ ಮತ್ತು ಅರ್ಥಿಕ ಪ್ರಾಮುಖ್ಯತೆ ಪಡೆಯಲಾಗುತ್ತದೆ. ಕರ್ನಾಟಕದ ಕುಷ್ಟಗಿ ಮೂಲಕ ಮಹಾರಾಷ್ಟ್ರ, ತೆಲಗಾಂಣ ಸಂಪರ್ಕಿಸುವ ಮಹತ್ವದ ಜಂಕ್ಸ್‌ನ್ ಆಗಿ ಬೇಡಿಕೆಯಲ್ಲಿ ಬರುತ್ತದೆ. ಈ ಎಲ್ಲವ್ಯಾಪ್ತಿಯಲ್ಲಿ ಸಾಗುವ ರೈಲ್ವೆ ಎಲ್ಲ ಪ್ರದೇಶದ ವ್ಯಾಪಾರ, ವಹಿವಾಟು, ಕೃಷಿ, ಕೈಗಾರಿಕೆ ಮತ್ತು ಚಲನೆಶೀಲತೆಗೆ ಪ್ರಾಮುಖ್ಯತೆ ನೀಡುವುದಾಗಿದೆ. ಇದರ ಜತೆಗೆ ಐತಿಹಾಸಿಕ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡಕ್ಕೆ ಅನೇಕ ಭಕ್ತರು ವರ್ಷವಿಡೀ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ರೈಲ್ವೆ ಮೂಲಕ ಸಾಗುವ ಪ್ರಯಾಣಿಕರಿಗೆ ನೂತನ ಮಾರ್ಗ ಹೆಚ್ಚಿನ ಪ್ರಾಧಾನ್ಯತೆ ಒದಗಿಸಿದೆ.ಈ ಬೇಡಿಕೆ ನೂತನ ರೈಲು ಮಾರ್ಗಕ್ಕಾಗಿ ತಕ್ಷಣ ಅನುಮೋದನೆ, ಮುಂಬರುವ ರೈಲ್ವೆ ಕಾಮಗಾರಿ ಯೋಜನೆ ತೀವ್ರ ಮಂಜೂರು ಮಾಡುವುದು ಇಂತಹ ಜನಾಭಿಪ್ರಾಯದ ಮನವಿಗೆ ಸಕಾರಾತ್ಮಕ ಪರಿಗಣನೆ ಪಡೆಯುವ ಮಹತ್ವದ ಸಮೀಕ್ಷೆ ಆಗಿದ್ದರಿಂದ ಈ ಯೋಜನೆ ಚಾಲನೆ ಮಹತ್ವ ಪಡೆದುಕೊಂಡಿದೆ ಎಂದು ಶಾಸಕ ಸಿ.ಸಿ.ಪಾಟೀಲ ಸಚಿವರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
