ರೂ.10 ಸಾವಿರ ಲಂಚಕ್ಕೆ ಕೈ ಚಾಚಿ ಲೋಕಾ ಬಲೆಗೆ ಬಿದ್ದ ಎಎಸ್ಐ

ವಿಜಯ ಸಿಂಧೂರ ಗದಗ

ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ಮುಂದುವರಿದಿದೆ. ಪೊಲೀಸ್ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಗದಗ ಶಹರ ಪೊಲೀಸ್​ ಠಾಣೆಯ ಎಎಸ್​ಐ ಹತ್ತು ಸಾವಿರ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಲಾಕ್​​ ಆಗಿರುವ ಘಟನೆ ನಡೆದಿದೆ. ಲೋಕಾಯುಕ್ತ ಡಿವೈಎಸ್​ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಎಎಸ್​ಐ ಚೆನ್ನಬಸಪ್ಪ ಇಂಗಳಳ್ಳಿ ಲೋಕಾಯುಕ್ತ ಟ್ರ್ಯಾಪ್​ಗೆ ಸಿಲುಕಿದ್ದಾರೆ.

ಶಹರ ಪೊಲೀಸ್ ಠಾಣೆಯ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರು ಪಿಟಿಷನ್ ಅರ್ಜಿ ವಿಚಾರಣೆಗೆ ಸುಮಾರು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವೀರೇಶ ಪೂಜಾರ ಎಂಬುವರು ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆ, ಇವತ್ತು ಪೊಲೀಸ್ ಠಾಣೆಯಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್​​ಹ್ಯಾಂಡ್ ಆಗಿ ಲಾಕ್​ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಸಿಪಿಐಗಳಾದ ಪಿ.ಜಿ ಕವಟಗಿ, ಎಸ್​.ಎಸ್. ತೇಲಿ ಸೇರಿ ಹಲವು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ

Leave a Reply

Your email address will not be published. Required fields are marked *