.ರೋಣ:ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರನ್ನಾಗಿ ಪ್ರವೀಣ ಬಸೇವಡೆಯರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಗ್ರಾಮ ಪಂಚಾಯತ ಒಟ್ಟು ೧೦ ಬಲ ಸದಸ್ಯರು ಹೊಂದಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು,ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಹೊಸಳ್ಳಿ ಗ್ರಾಮ ಪಂಚಾಯಿತಿಯ ನಿಕಟ ಪೂರ್ವ ಉಪಾಧ್ಯಕ್ಷ ಶಿವಯೋಗಿ ತಡಿ ವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು.

ಚುನಾವಣಾಧಿಕಾರಿಗಳಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಉಪಾಧ್ಯಕ್ಷರಾಗಿ ಪ್ರವೀಣ ಬಸೇವಡೆಯರ ಆಯ್ಕೆಯನ್ನು ಘೋಷಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಸ್ಥಾವರಮಠ,ಮಲ್ಲಿಕಾರ್ಜುನ ರಡ್ಡೇರ, ಬಿ.ಎಸ್.ರಡ್ಡೇರ, ಬಿ.ಕೆ.ಮಾರಣಬಸರಿ, ವಾಯ್.ಎಸ್.ಮಾದರ, ಎಸ್.ಬಿ.ಅಬ್ಬಿಗೇರಿ, ಅಂದಪ್ಪ ಹೊಸಳ್ಳಿ, ಬಿ.ಬಿ.ಕಂಬಳಿ, ಕಳಕಪ್ಪ ರಾಜೂರ,ಹನುಮಂತಪ್ಪ ಗೊಟಗೊಂಡ, ವ್ಹಿ.ಬಿ.ಸಾಲಿ, ಶೋಭಾ ಗೊಟಗೊಂಡ, ಲಲಿತಾ ಕುರಿ, ಶಾರದಾ ಅಂಗಡಿ, ಅನ್ನಪೂರ್ಣ ವೀರಗಾರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
