ತಾಳಿಕೋಟೆ ಬಂದ್ ಯಶಸ್ವೀ

ತಾಳಿಕೋಟೆ : ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟಿ ತಾಲೂಕು ಹೋರಾಟ ಸಮಿತಿ ವತಿಯಿಂದ ಇಂದು ಪಟ್ಟಣದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಿ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಆಡಳಿತವು ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಿದ್ದು, ಈ ಸ್ಥಳ ತಾಳಿಕೋಟಿ ಪಟ್ಟಣದಿಂದ ಸುಮಾರು 4 ರಿಂದ 5 ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತಾಲೂಕಿನ ಸಾರ್ವಜನಿಕರು, ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಅಂಗವಿಕಲರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಆರ್ ಎಸ್ ಪಾಟೀಲ(ಕೂಚಬಾಳ )ಸ್ವಯಂ ಪ್ರೇರಣೆ ಯಾಗಿ ತಾಳಿಕೋಟೆ ಬಂದ್ ಮಾಡಿ ನಾವು ಯಾರು ವಿರುದ್ಧ ಅಲ್ಲ ಯಾರು ಪರ ಅಲ್ಲ ಇದರಲ್ಲಿ ರಾಜಕೀಯ ಇಲ್ಲ ನಾವು ಈ ಪ್ರತಿಭಟನೆಯಲ್ಲಿ ಒಂದೇ ಒಂದು ದಿಕ್ಕಾರ ಹಾಕಿಲ್ಲ ನಮ್ದೇ ಒಂದೇ ಒಂದು ಉದ್ದೇಶ ಸಾರ್ವಜನಿಕರ ಅನುಕೂಲಕ್ಕಾಗಿ ವೆಕ್ತಿಗಳು ಇವತ್ತು ಇರುತ್ತೆವೆ ನಾಳೆ ಹೋಗುತ್ತೀವೆ ಇಲ್ಲಿ ಯಾರು ಶಾಶ್ವತ ಅಲ್ಲಾ ನಾವುಗಳು ಮಾಡಿರು ಕೆಲಸಗಳು ಮುಂದಿನ ದಿನಮಾನದ ಪೀಳಿಗೆ ಗೋಸ್ಕರ ಉಳಿಯುತ್ತೆದೆಪ್ರಜಾ ಸೌಧ ನಗರದಲ್ಲಿ ಆಗಬೇಕು ಜನರಿಗೆ ಅನಕೂಲವಾಗುತ್ತದೆ ಧರಣಿ ಮಾಡಲು ಸ್ಥಳಾವಕಾಶ ಕೂಡಾ ನೀಡಲಿಲ್ಲಾ ನಾವು ಶಾಂತಿ ಯ ಮಾರ್ಗದಿಂದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ತಾಳಿಕೋಟೆ ಹೋರಾಟ ಸಮಿತಿಯ ಅಧ್ಯಕ್ಷರಾಧಾ ದಶರಥ ಸಿಂಗ್ ಮನಗೂಳಿ ಹಳ್ಳಿಯಿಂದ ತಾಳಿಕೋಟೆಗೆ 20ರೂಪಾಯಿ ಕೊಟ್ಟು ಬಂದು ತಾಳಿಕೋಟೆಯಿಂದ ಪ್ರಜಾಸೌಧ ಸ್ಥಳಕ್ಕೆ 200ರೂಪಾಯಿ ಕೊಡಬೇಕಾಗುತ್ತೆದೆ ಮತ್ತು ವೃದ್ಧರು ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ ಈಗ ಗುರುತಿಸಿರುವ ಸ್ಥಳವು ಸಾರ್ವಜನಿಕರಿಗೆ ಅನುಕೂಲಕರವಲ್ಲ. ಆದ್ದರಿಂದ ಪ್ರಜಾಸೌಧ ಕಟ್ಟಡವನ್ನು ತಾಳಿಕೋಟಿ ಪಟ್ಟಣದ ವ್ಯಾಪ್ತಿಯಲ್ಲಿಯೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಬಂದ್‌ಗೆ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಬೀದಿಬದಿ ವ್ಯಾಪಾರಸ್ಥರು ಹಾಗೂ ಎಲ್ಲಾ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದರು. ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿದ್ದು, ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.

ಈ ಸಂದರ್ಭದಲ್ಲಿ ತಾಳಿಕೋಟಿ ಹೋರಾಟ ಸಮಿತಿಯ ಅಧ್ಯಕ್ಷರಾದ ದಶರಥ ಸಿಂಗ್ ಮನಗೂಳಿ, ಕಾಶೀನಾಥ್ ಮುರಾಳ,ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಎಂ. ಕೆ. ಜೋರಗಸ್ತಿ, ಮಾಸುಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ಪ್ರಕಾಶ್ ಹಜೇರಿ, ರವೀಂದ್ರ ಕಟ್ಟಿಮನಿ,ದತ್ತು ಹೆಬಸೂರ,ರಾಜು ಹಂಚಾಟೆ, ಗಂಗಾಧರ್ ಕಸ್ತೂರಿ, ಮಂಜು ಶೆಟ್ಟಿ, ಸುರೇಶ ಹಜೇರಿ, ಸದ್ದಾಂ ಬೀಳಗಿ, ಲತೀಫ್ ಬೀಳಗಿ,ಅಮಿತ್ ಮನಗೂಳಿ, ನಾಗೇಶ ಕಟ್ಟಿಮನಿ,ತಿಪ್ಪಣ್ಣ ಸಜ್ಜನ, ಮಾನಸಿಂಗ ಕೋಕಟನೂರ, ಸಿರಸಕುಮಾರ ಹಜೇರಿ, ನಿತಿನ ವಿಜಾಪುರ್, ಹಾಗೂ ಸರ್ವ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *