ಫೆಬ್ರುವರಿ 28 ರಂದು ಸೇವಾಲಾಲ್‌ ಮಹಾರಾಜರ 287ನೇ ಜಯಂತಿ ಆಚರಣೆ

ನರೇಗಲ್: ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ 287ನೇ ಜಯಂತಿಯನ್ನು ಫೆಬ್ರುವರಿ 28 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ನರೇಗಲ್‌ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ ಶ್ರೀ ಗುರು ಗೋಸಾಯಿಬಾವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ರಾಜ್ಯ ಖನಿಜ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ. ಎಸ್. ಪಾಟೀಲರು ಉದ್ಘಾಟಿಸಲಿದ್ದಾರೆ. ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ್‌ ಜಿ. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಯುವಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ ಐ. ಪಾಟೀಲ ಅವರು ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ ಹಾಗೂ ಡಾ. ಬಿ. ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಿವೃತ್ತ ಶಿಕ್ಷಕ ಹಾಗೂ ಗಜೇಂದ್ರಗಡ ಬಂಜಾರ ಸಮಾಜದ ಹಿರಿಯರಾದ ತಾರಾಸಿಂಗ್‌ ರಾಠೋಡ ಹಾಗೂ ಕರ್ನಾಟಕ ಗೋರ ಸೇನಾ ರಾಜ್ಯಾಧ್ಯಕ್ಷರಾದ ರವಿಕಾಂತ ಅಂಗಡಿಯವರು ವಿಶ್ವ ಶಾಂತಿಗಾಗಿ ಭೋಗ್‌ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನರೇಗಲ್‌ ಬಂಜಾರ ಸಮಾಜದ ಹಿರಿಯ ಮಹಿಳೆ ದೇವಕ್ಕ ಎಸ್‌. ರಾಠೋಡ ಘನ ಉಪಸ್ಥಿಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರೇಗಲ್‌ ಶಹರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಿವನಗೌಡ ಎ. ಪಾಟೀಲ, ನರೇಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಬೆಟಗೇರಿ, ನರೇಗಲ್‌ನ ಹಿರಿಯ ವೈದ್ಯರಾದ ಡಾ. ಜಿ. ಕೆ. ಕಾಳೆ, ಡಾ. ಕೆ. ಬಿ. ಧನ್ನೂರ, ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ಪಿ. ನದಾಫ್‌, ಜೈಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ, ಸಂತೋಷ ಹನಮಸಾಗರ, ಕರವೇ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ, ಕಳಕನಗೌಡ ಪೊಲೀಸ್‌ಪಾಟೀಲ, ಬಿ.ಇ.ಡಬ್ಲೂ. ಇಂಡಸ್ಟ್ರೀಜ್‌ನ ಉದ್ಯಮಿ ಬಸವರಾಜ ವಂಕಲಕುಂಟಿ, ವೈದ್ಯ ಡಾ. ನಾಗರಾಜ ಎಲ್. ಗ್ರಾಮಪುರೋಹಿತ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಯಲ್ಲಪ್ಪ ಮಣ್ಣೊಡ್ಡರ, ಕುಮಾರಸ್ವಾಮಿ ಕೋರಧಾನ್ಯಮಠ, ಮಾರುತೇಶ್ವರ ಟ್ರಸ್ಟ್‌ ಕಮೀಟಿ ಅಧ್ಯಕ್ಷ ದಾದಾಸಾಬ್‌ ನದಾಫ್‌, ಗುಡದಪ್ಪ ಗೋಡಿ, ಸದ್ದಾಂ ನಶೇಖಾನ್‌ ಪಾಲ್ಗೊಳ್ಳಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ನರೇಗಲ್‌ ಪೊಲೀಸ್‌ ಠಾಣೆಯ ಪಿ.ಎಸ್.ಐ ಐಶ್ವರ್ಯ ನಾಗರಾಳ ಹಾಗೂ ನರೇಗಲ್‌ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಅವರು ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ನರೇಗಲ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಂಜಾರ ಸಮಾಜದವರಾದ ಗುತ್ತಿಗೆದಾರ ಲುಂಬಪ್ಪ ಸೋಮಲಪ್ಪ ಲಮಾಣಿ, ಶಿಕ್ಷಕರಾದ ಲಕ್ಷ್ಮಣ ನಾಯಕ, ಶಿಕ್ಷಕಿಯರಾದ ಎ. ಎಂ. ರಾಠೋಡ, ವಿಜಯಲಕ್ಷ್ಮೀ ಜಾಧವ, ಎನ್. ಎಲ್. ಚವ್ಹಾಣ, ಉಪನ್ಯಾಸಕರಾದ ಡಾ. ಡಿ. ಎಲ್. ಪವಾರ, ಸಂದೀಪಕುಮಾರ ರಾಠೋಡ, ಋಷಿಕೇಶ ಪವಾರ, ಡಾ. ಶ್ರೀನಿವಾಸ ಬೇವಿನಕಟ್ಟಿ, ಪೊಲೀಸ್‌ ಇಲಾಖೆಯ ವಸಂತ ರಾಠೋಡ, ಹೆಸ್ಕಾಂ ಇಲಾಖೆಯ ಪ್ರದೀಪ ರಾಠೋಡ, ಕೆವಿಜಿ ಬ್ಯಾಂಕ್‌ ಉದ್ಯೋಗಿ ಕೃಷ್ಣಾ ನರಸಾಪೂರ ಭಾಗವಹಿಸಲಿದ್ದಾರೆ ಎಂದು ಸಮಾಜದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *