ತಾಳಿಕೋಟೆ : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ ಮೂರನೇ ದಿನ ದಲಿತ ಸಂಘರ್ಷ ಸಮಿತಿ ಹಾಗೂ ಶ್ರೀ ಶಿವಶರಣ ಮಾದರ ಚನ್ನಯ ಸಮಾಜದ ವತಿಯಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು.

ಶುಕ್ರವಾರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಡಾ.ವಿನಯಾ ಹೂಗಾರ ಭೇಟಿ ನೀಡಿ ಹೋರಾಟಗಾರರ ಬೇಡಿಕೆಗಳನ್ನು ಆಲಿಸಿದರು ಹೋರಾಟ ಸಮಿತಿಯ ಅಧ್ಯಕ್ಷರಾದ ದಶರಥಸಿಂಗ್ ಮನಗೂಳಿ ಮಾತನಾಡಿ ನೀವು ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ನಾಲ್ಕೈದು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ದೂರ ಹಾಗೂ ಅನಾನುಕೂಲ ವಾಗಿರುವುದರಿಂದ ಪಟ್ಟಣದಲ್ಲಿಯೇ ಸಾಕಷ್ಟು ಸರ್ಕಾರಿ ಜಮೀನುಗಳು ಇದ್ದು ಅವುಗಳಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ರದ್ದುಪಡಿಸಬೇಕು ಎಂದು ಅಗ್ರಹಿಸಿದರು.
ಜಿಲ್ಲಾಡಳಿತ, ಮತ್ತು ಸರ್ಕಾರ ಈ ಸಮಸ್ಯೆಯನ್ನು ಗಂಬಿರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.ಆಗ ತಹಶೀಲ್ದಾರರು ಮಾತನಾಡಿ ನಿಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತಕ್ಕೆ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ) ಮತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮಸೂಮಸಾಬ್ ಕೆಂಬಾವಿ. ಮೆಹೆಬೂಬ ಚೋರಗಸ್ತಿ , ಪ್ರಕಾಶ ಹಜೇರಿ, ಮುದಕಪ್ಪ ಬಡಿಗೇರ,ನಾಗೇಶ್ ಕಟ್ಟೆಮನಿ, ಅಮಿತ್ ಹಜೇರಿ, ಮಹೇಶ್ ಚಲವಾದಿ, ಯಮನಪ್ಪ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಬಸವರಾಜ ಮಾದರ,ನಾಗಪ್ಪ ಕಟ್ಟಿಮನಿ, ಹುಲಗಪ್ಪ ಕಟ್ಟಿಮನಿ, ಕಾಶೀನಾಥ್ ಕಟ್ಟಿಮನಿ, ಯಲ್ಲಪ್ಪ ಜಾಲಹಳ್ಳಿ, ಶೇಕಪ್ಪ ನಾಗೂರ್, ನಿಂಗಪ್ಪ ಶಿರೋಳ, ಕಾಶೀನಾಥ ಕಪನೂರ, ಮುತ್ತಪ್ಪ ಆಲೂರ, ರಾಮು ಮಾದರ ಸಂಜು ಬರದೇನಳ , ಪರಶುರಾಮ ಮಾದರ್ ನಿಂಗನಗೌಡ ದೇಸಾಯಿ. ಮಾದರ ಸಮಾಜದ ಗಣ್ಯರು ಉಪಸ್ಥಿತರಿದ್ದರು.
