ವಿಜಯ ಸಿಂಧೂರ
ಗಜೇಂದ್ರಗಡ :ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸಕಾಲದಲ್ಲಿ ಸಿಗಲು ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮ ಶ್ಲಾಘನೀಯ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಶನಿವಾರ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಆಯುಷ್ಮಾನ ಯೋಜನೆಯ ರೂ.61 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು ಬಡಜನರು ಸರ್ಕಾರಿ ಆಸ್ಪತ್ರೆ ಬಂದಾಗ ಅವರಿಗೆ ಸೂಕ್ತ ಹಾಗೂ ಅಗತ್ಯ ಚಿಕಿತ್ಸೆ ಸಿಗಬೇಕು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಶ್ರಮಿಸಬೇಕು ಎಂದರು.ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತಾಗುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಕ ಸಾಮಾನ್ಯ ತಪಾಸಣೆ, ತಾಯಿ–ಮಗು ಆರೈಕೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಸೇವೆಗಳು ಗ್ರಾಮದಲ್ಲೇ ಲಭ್ಯವಾಗಲಿವೆ ಹಾಗೂ ಗ್ರಾಮಸ್ಥರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಬಿ.ಎಸ್.ಭಜಂತ್ರಿ ಮಾತನಾಡಿ, ‘ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ನನ್ನ ಆಶಯ. ಸೇವೆ ಸಲ್ಲಿಸಿದ ಕಡೆಗಳಲ್ಲಿ ರೋಗಿಗಳಿಗೆ ಕೈಲಾದಷ್ಟು ಉತ್ತಮ ಸೇವೆ ಮಾಡಿದ್ದೇನೆ. ಇಲ್ಲೂ ಉತ್ತಮ ಸೇವೆ ದೊರಕಿಸಲು ಪ್ರಯತ್ನ ಮಾಡುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ರೋಗಿಗಳು ನೇರ ಸಂಪರ್ಕ ಮಾಡಬಹುದು’ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಡಾ. ಕೆ.ಎ.ಹಾದಿಮನಿ, ಡಾ.ಚಿದಾನಂದ ಮುಡಾಸದ, ಪಡಿಯಪ್ಪ ಮಾದರ, ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ವಿ ಬಿ.ಸೋಮನಕಟ್ಟಿಮಠ, ಎಚ್.ಎಸ್. ಸೊಂಪೂರ, ಸುಭಾಸ್ ಮ್ಯಾಗೇರಿ,ಹನುಮಂತ ರಾಮೋಜಿ, ಕೊಟ್ರೇಶ್ ಹೂಗಾರ,ವೀರಯ್ಯ ಬಾಳಿಕಾಯಿಮಠ, ಪರಶುರಾಮ ಚಿಟಗಿ, ಬಾಲಚಂದ್ರ ವಾಲ್ಮೀಕಿ, ಶ್ರೀಧರ ಬಿದರಳ್ಳಿ, ನಾಗಯ್ಯ ಹಿರೇಮಠ,,ಕುಮಾರ ರಾಠೋಡ,ರಾಜು ನದಾಫ,ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು.
