ಗ್ರೀನವುಡ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

ರೋಣ : ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಪಟ್ಟಣದ ಗ್ರೀನವುಡ್ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಾಲ್ಕನೆಯ ತರಗತಿಯಿಂದ 8ನೆಯ ತರಗತಿವರೆಗಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ತಯಾರಿಸಿ ಗಮನ ಸೆಳೆದರು. ಸ್ಟ್ರೀಟ್ ಲೈಟ್ ಕಾರ್ಯ ನಿರ್ವಹಿಸುವ ಮಳೆ ನೀರು ಕೊಯ್ಲು, ನೀರು ಶುದ್ಧೀಕರಣ, ಮಾನವನ ಉಸಿರಾಟ ಕ್ರಿಯೆ, ಜಾಗತಿಕ ತಾಪಮಾನ ಏರಿಕೆ, ಜ್ವಾಲಾಮುಖಿ ಸ್ಪೋಟ, ವಿದ್ಯುತ್ ವಾಹಕ, ಪೆರಿಸ್ಕೊಪ್, ಭೂಕಂಪನ ಸಂಭವಿಸುವ ಕ್ರಿಯೆ, ಮಣ್ಣು ನೀರು, ಶುದ್ಧ ಗಾಳಿಯ ರಕ್ಷಣೆ, ದೇಹದ ಅಂಗಾಂಗಗಳು, ಚರ್ಮ, ಕಣ್ಣು, ಹಲ್ಲುಗಳ ವಿಶಿಷ್ಟತೆ, ಶಕ್ತಿಯ ಮೂಲಗಳು, ಸೌರವ್ಯೂಹ, ಸಸ್ಯದ ಬೆಳವಣಿಗೆ, ಹೀಗೆ ವಿದ್ಯಾರ್ಥಿಗಳು ನಾನಾ ತರಹದ ವಸ್ತುನಾನಾ ತರಹದ ವಸ್ತು ಪ್ರದರ್ಶನಗಳು ಕಣ್ಮನ ಸೆಳೆದವು.

ವಸ್ತು ಪ್ರದರ್ಶನವನ್ನು ವೈದ್ಯರಾದ ಶ್ರೀ ತಿಪ್ಪಣ್ಣ ಕುಕನೂರ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಮತ್ತು ಸಮಾಜದಲ್ಲಿ ಮೌಢ್ಯ ಹಾಗೂ ಮೂಡನಂಬಿಕೆಗಳ ಆಚರಣೆ ಅತಿ ಹೆಚ್ಚಾಗಿ ನಡೆಯುತ್ತಿದೆ. ಸಮಾಜದ ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತೊಲಗಿಸಿ ವೈಚಾರಿಕತೆಯ ಬಗ್ಗೆ ಅರಿವು ಮೂಡಿಸಬೇಕು ವಿದ್ಯಾರ್ಥಿ ಜೀವನದಲ್ಲಿಯೇ ‘ಏಕೆ, ಏನು, ಹೇಗೆ’ ಎಂಬ ಪ್ರಶ್ನೆಗಳು ಮೂಡಬೇಕು. ಇಂತಹ ಕುತೂಹಲದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತವೆ ಎಂದು ಹೇಳಿದರು.

ನಂತರ ಮಾತನಾಡಿದ ಶ್ರೀಮತಿ ಸುನೀತಾ ರಾಬಾ ವಿದ್ಯಾರ್ಥಿಗಳ ಕಲಿಕೆ ಶಾಶ್ವತವಾಗಬೇಕಾದರೆ ಅದು ಸ್ವಯಂ ಕಲಿಕೆಯಾಗಬೇಕು. ಇಂದಿನ ಜೀವನದಲ್ಲಿ ವಿಜ್ಞಾನಿಗಳ ಮನಸ್ಥಿತಿಯ ಬಗ್ಗೆ ವಿದ್ಯಾರ್ಥಿ ಹಂತದಲ್ಲಿಯೇ ಅರಿವು ಮೂಡಬೇಕು. ವಿಜ್ಞಾನ ವಸ್ತುಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ವಿವಿಧ ಮಾದರಿಗಳು, ಚಿತ್ರಪಟಗಳು ಹಾಗೂ ಪ್ರಯೋಗಗಳನ್ನು ಸಿದ್ಧಪಡಿಸಿ ಇತರರೊಂದಿಗೆ ಹಂಚಿಕೊಳ್ಳುವುದರಿಂದ ಕಲಿತ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ,” ಎಂದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಸುನೀತಾ ರಾಬಾ, ಮಹೇಶ ಅಚ್ಚಿನಗೌಡ್ರ ಪಲ್ಲವಿ ರಾಠೋಡ, ವಿಜ್ಞಾನ ಶಿಕ್ಷಕರಾದ ಶಿವರಾಜ ದೊಡ್ಡಣ್ಣವರ, ಪ್ರತಿಭಾ ಬೂದಿಹಾಳ, ದೈಹಿಕ ಶಿಕ್ಷಕರಾದ ಮಲ್ಲಯ್ಯ ಸ್ಥಾವರಮಠ ಮುಂತಾದವರು ಉಪಸ್ಥಿತರಿದ್ದರುವರದಿ : ಮಹೇಶ ಅಚ್ಚಿನಗೌಡ್ರ

Leave a Reply

Your email address will not be published. Required fields are marked *