ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ

ಶ್ರೀ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ನಾವದಗಿ ಶ್ರೀಗಳ ಧರ್ಮ ಸೇವೆ ಶ್ಲಾಘನೀಯ:ಪೂಜ್ಯ ಶರಣರು

ತಾಳಿಕೋಟೆ : ಪುರಾಣ ಪ್ರವಚನಗಳ ಮೂಲಕ ಮಹಾತ್ಮರ ಶರಣ ಸಂತರ ಜೀವನ ಚರಿತ್ರೆಯನ್ನು ಆಲಿಸಿದರೆ ಸಾಲದು ಆಲಿಸಿದ್ದನ್ನು ಜೀವನದಲ್ಲಿ ಪಾಲಿಸುವ ಅಗತ್ಯ ಇದೆ ಎಂದು ಶಹಾಪೂರ ತಾಲೂಕಿನ ಹೋತಪೇಟೆ ಕೈಲಾಸ ಆಶ್ರಮದ ಪೂಜ್ಯ ಶಿವಲಿಂಗ ಶರಣರು ಹೇಳಿದರು.


ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಪೂಜ್ಯ ಷ.ಬ್ರ. ಶ್ರೀ ರಾಜಗುರು ರಾಜೇಂದ್ರ ಒಡೆಯರ್ ರ್ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಗುಡ್ಡಾಪುರದ ದಾನಮ್ಮ ದೇವಿ ಪುರಾಣದ 17 ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀಮಠದ ಪರಮ ಪೂಜ್ಯರು ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ನೀವೆಲ್ಲರೂ ತನು-ಮನ ಧನದಿಂದ ಸಹಕಾರ ನೀಡಿ ಎಂದರು.ನಾವದಗಿಯ ಪೂಜ್ಯ ಷ.ಬ್ರ. ಶ್ರೀ ರಾಜ ಗುರುರಾಜೇಂದ್ರ ಒಡೆಯರ್ ಶಿವಾಚಾರ್ಯರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಸಾದ ಸೇವೆ ಗೈದ ತಾಳಿಕೋಟಿ ಪಟ್ಟಣದ ವಿಕೆಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸಮಾಜ ಸೇವಕ ಪ್ರಹ್ಲಾದಸಿಂಗ್ ಹಜೇರಿ ಇವರನ್ನು ನಾವದಗಿ ಶ್ರೀಗಳು ಶ್ರೀಮಠದ ವತಿಯಿಂದ ಸನ್ಮಾನಿಸಿ ಆಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ ವೇ.ಮೂ.ಗುರಯ್ಯ ಶಾಸ್ತ್ರಿಗಳು, ಪ್ರಭುಲಿಂಗಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ,ವಿಠಲ್ ಹಜೇರಿ, ಗ್ರಾಮದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *